ಹಾಡುಹಗಲೇ ಪುಂಡರಿಂದ ಬೈಕ್ ವೀಲಿಂಗ್… ಬೆಚ್ಚಿದ ಸಾರ್ವಜನಿಕರು.

ಹಾಡುಹಗಲೇ ಪುಂಡರಿಂದ ಬೈಕ್ ವೀಲಿಂಗ್… ಬೆಚ್ಚಿದ ಸಾರ್ವಜನಿಕರು.

 

 

ತುಮಕೂರು_ತುಮಕೂರು ನಗರದ ಸದಾಶಿವನಗರ ರಿಂಗ್ ರಸ್ತೆಯಲ್ಲಿ ಹಾಡುಹಗಲೇ ಪುಂಡರು ಗಂಟೆಗಟ್ಟಲೆ ಬೈಕ್ ವೀಲಿಂಗ್ ಮಾಡುತ್ತಾ ಅಟ್ಟಹಾಸ ಮೆರೆಯುತ್ತಿದ್ದು ಇಂತಹ ಪುಂಡರಿಗೆ ಸಂಬಂಧಪಟ್ಟ ಇಲಾಖೆಗಳು ಕಡಿವಾಣ ಹಾಕಬೇಕು ಎಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ವ್ಯಕ್ತವಾಗಿದೆ.

 

 

 

ಇನ್ನು ರಂಜಾನ್ ಹಬ್ಬದ ದಿನದಂದು ಪುಂಡರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬೈಕ್ ವೀಲಿಂಗ್ ಮಾಡುತ್ತಿದ್ದನ್ನು ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ಮೊಬೈಲ್ ನಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ವೈರಲ್ ಆಗಿದೆ.

 

 

ಸುಮಾರು ನಾಲ್ಕು ಬೈಕ್ಗಳಲ್ಲಿ ಬಂದ ಪುಂಡರು ಮರಳೂರು ಸರ್ಕಲ್ ನಿಂದ ಸದಾಶಿವನಗರದ ಎರಡನೇ ಹಂತದ ಸರ್ಕಲ್ ವರೆಗೂ ಸತತ ಅರ್ಧಗಂಟೆಗೂ ಹೆಚ್ಚು ಕಾಲ ಬೈಕ್ ವೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ್ದಾರೆ.

 

ಇನ್ನು ಇದೇ ಸ್ಥಳದಲ್ಲಿ ಪೊಲೀಸರು ಸಹ ಸಂಚರಿಸಿ ಗಸ್ತು ಹಾಕುತ್ತಿದ್ದರು ಸಹ ಅಂತಹ ಪೊಲೀಸರನ್ನು ಯಾಮಾರಿಸಿ ಬೈಕ್ ವೀಲಿಂಗ್ ಮಾಡಿರುವ ಪುಂಡರು ಸರ್ವಿಸ್ ರಸ್ತೆಯಲ್ಲಿ ಪ್ರಾಕ್ಟೀಸ್ ಮಾಡುತ್ತಾ ಮುಖ್ಯರಸ್ತೆಯಲ್ಲಿ ಬೈಕ್ಗಳನ್ನು ಒಂದು ಚಕ್ರದಲ್ಲಿ ಎತ್ತಿಕೊಂಡು ಕಿಲೋಮೀಟರ್ ಗಟ್ಟಲೆ ಕರ್ಕಶವಾದ ಶಬ್ದ ಗಳನ್ನು ಮಾಡುತ್ತಾ ಸಾಗಿದ್ದಾರೆ ಇನ್ನೂ ಕೆಲವರು ತಮ್ಮ ಮೊಬೈಲ್ ಗಳಲ್ಲಿ ಬೈಕ್ ವೀಲಿಂಗ್ ರನ್ನ ಮಾಡುವುದನ್ನು ಮತ್ತೆ ಕೆಲವು ಪುಂಡರು ಸೆರೆ ಹಿಡಿಯುತಿದ್ದರು. ಹೀಗೆ ಬೈಕ್ ವೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ಸಾಕಷ್ಟು ಭಯವನ್ನು ಉಂಟು ಮಾಡುತ್ತಿರುವ ಇಂತಹ ಪುಂಡರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಸಹ ಆಕ್ರೋಶ ಹೊರಹಾಕಿದ್ದಾರೆ.

 

 

ಇನ್ನು ಬೈಕ್ ವೀಲಿಂಗ್ ಮಾಡಿರುವ ಪುಂಡರು ತಮ್ಮ ಬೈಕ್ ಗಳಲ್ಲಿರುವ ನಂಬರ್ ಪ್ಲೇಟ್ ಗಳನ್ನು ತೆಗೆದು ಇಂತಹ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದು ಇನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದಂತೆ ಅದನ್ನು ಗಮನಿಸಿದ ಪುಂಡರು ತಮ್ಮ ಮುಖಗಳನ್ನು ಮುಚ್ಚಿಕೊಂಡು ಪರಾರಿಯಾಗಿದ್ದಾರೆ.

 

 

 

 

ಇದುವರೆಗೂ ಬೆಂಗಳೂರು ನಗರದಲ್ಲಿ ಇದ್ದ ಬೈಕ್ ವೀಲಿಂಗ್ ಪೆಡಂಭೂತ ತುಮಕೂರು ನಗರಕ್ಕೂ ಸಹ ಕಾಲಿಟ್ಟಿದ್ದು ಇಂತಹ ಪುಂಡರಿಗೆ ಸಂಬಂಧಪಟ್ಟ ಪೊಲೀಸ್ ಇಲಾಖೆ ಅಧಿಕಾರಿಗಳು ,ಸಾರಿಗೆ ಅಧಿಕಾರಿಗಳು ಇಂತಹ ಪುಂಡರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ.

 

ಪೋಷಕರ ಜವಾಬ್ದಾರಿ ಅತ್ಯಗತ್ಯ.

ಬೈಕ್ ವೀಲಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪೋಷಕರು ಸಹ ತಮ್ಮ ಮಕ್ಕಳಿಗೆ ಬೈಕ್ಗಳನ್ನು ಕೊಡುವ ಮುಂಚೆ ಸಾಕಷ್ಟು ಬಾರಿ ಯೋಚಿಸಿ ವಾಹನಗಳನ್ನು ಕೊಡಬೇಕಿದೆ ಇನ್ನು ಇಂತಹ ಘಟನೆಗಳಿಗೆ ಪೊಲೀಸ್ ಇಲಾಖೆಯನ್ನು ನೇರ ಹೊಣೆ ಮಾಡುವ ಮುಂಚೆ ಪೋಷಕರು ಸಹ ತಮ್ಮ ಮಕ್ಕಳ ಬಗ್ಗೆ ಎಚ್ಚರದಿಂದಿದ್ದ ಇದ್ದರೆ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಹಾಗಾಗಿ ಪೋಷಕರು ಸಹ ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸುವುದು ಒಳ್ಳೆಯದು.

 

 

ಪದೇಪದೇ ರಿಂಗ್ ರಸ್ತೆಯಲ್ಲಿ ಇಂತಹ ಬೈಕ್ ವೀಲಿಂಗ್ ಪ್ರಕರಣ ಮರುಕಳಿಸುತ್ತಿದ್ದು ಇಂತಹ ಪುಂಡರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ಧೈರ್ಯ ತುಂಬುವ ಕೆಲಸಗಳನ್ನು ಸಂಬಂಧಪಟ್ಟ ಇಲಾಖೆಗಳು ಮಾಡಬೇಕಿದೆ.

 

ವರದಿ_ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!