ಪ್ರತಿಭಟನೆ ಕೈಬಿಡಲು ಕೈಮುಗಿದು ಮನವಿ ಮಾಡಿದ ಶಾಸಕ, ಪಟ್ಟು ಬಿಡದ ಪಾಲಿಕೆ ಸಿಬ್ಬಂದಿಗಳು.

ಪ್ರತಿಭಟನೆ ಕೈಬಿಡಲು ಕೈಮುಗಿದು ಮನವಿ ಮಾಡಿದ ಶಾಸಕ, ಪಟ್ಟು ಬಿಡದ ಪಾಲಿಕೆ ಸಿಬ್ಬಂದಿಗಳು.

 

ತುಮಕೂರು _ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್ಗಳಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಾಟರ್ ಮ್ಯಾನ್ ಗಳು ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದು ಇದರ ಬೆನ್ನಲ್ಲೇ ತುಮಕೂರು ನಗರದ ಸಾರ್ವಜನಿಕರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

 

 

 

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತುಮಕೂರು ಮಹಾನಗರ ಪಾಲಿಕೆಯ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ( 210 ಸಿಬ್ಬಂದಿಗಳು)ವಾಟರ್ ಮ್ಯಾನ್ ಗಳು ಗುತ್ತಿಗೆ ಪದ್ಧತಿ ರದ್ದುಮಾಡಿ, ನೇರನೇಮಕಾತಿ ಮಾಡಿಕೊಳ್ಳುವುದು, ಸಮಾನ ಕೆಲಸಕ್ಕೆ ಸಮಾನ ವೇತನ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದಿದ್ದರು.

 

 

 

ಆದರೆ ಇದುವರೆಗೂ ಅತಿ ಕಡಿಮೆ ಸಂಬಳ ನೀಡುತ್ತಾ ಯಾವುದೇ ಸೇವಾ ಭದ್ರತೆ ಇಲ್ಲದೆ ನಮ್ಮನ್ನ ದುಡಿಸಿಕೊಳ್ಳುತ್ತಿದೆ ಇಂತಹ ಸ್ಥಿತಿಯಲ್ಲಿ ನಮ್ಮ ಕುಟುಂಬಗಳು ಕಡಿಮೆ ಸಂಬಳ ಪಡೆದು ಸೇವೆ ಸಲ್ಲಿಸುತ್ತಿದ್ದೇವೆ ಹಾಗಾಗಿ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪಾಲಿಕೆ ಆವರಣದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.

 

 

ಇದರಿಂದ ತುಮಕೂರು ನಗರದ 35 ವಾರಗಳಿಗೂ ನೀರಿನ ಕೊರತೆ ಉಂಟಾಗಿದ್ದು ಸಂಪೂರ್ಣ ನೀರು ಸರಬರಾಜನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಕೈಗೊಂಡಿರುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ಸಹ ತೊಂದರೆ ಉಂಟಾಗುತ್ತಿದ್ದು ಇದನ್ನರಿತ ತುಮಕೂರು ಮಹಾನಗರ ಪಾಲಿಕೆ ಮೇಯರ್ ಕೃಷ್ಣಪ್ಪ , ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ತುಮಕೂರು ಮಹಾನಗರಪಾಲಿಕೆ ಆಯುಕ್ತೆ ರೇಣುಕಾ, ಸ್ಥಾಯಿ ಸಮಿತಿಯ ಅಧಕ್ಷ ನಯಾಸ್, ವಿರೋದ ಪಕ್ಷದ ನಾಯಕ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಬುದವಾರ ರಾತ್ರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರನ್ನು ಮನವೊಲಿಸಲು ಮುಂದಾದರು.

 

ಈ ವೇಳೆ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ರವರು ತಮ್ಮ ಬೇಡಿಕೆಗಳ ಈಡೇರಿಕೆ ಸಂಬಂಧ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಪಾಲಿಕೆ ವತಿಯಿಂದ ಶೀಘ್ರ ಸಭೆ ನಡೆಸಿ ಸರ್ಕಾರದ ಗಮನ ಸೆಳೆಯಲು ಮುಂದಾಗುತ್ತೇವೆ ಹಾಗಾಗಿ ಕೂಡಲೇ ಪ್ರತಿಭಟನೆಯನ್ನು ಹಿಂಪಡೆಯಿರಿ ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ ಎಂದು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಕೈಮುಗಿದು ಮನವಿ ಮಾಡಿದರು.

 

 

ಇನ್ನು  ಪಟ್ಟುಬಿಡದ ಸಿಬ್ಬಂದಿಗಳು ತಾವು ಸಹ ಸಭೆ ನಡೆಸಿ ತೀರ್ಮಾನ ಕೈಗೊಂಡು ಸ್ಪಷ್ಟ ನಿರ್ಧಾರ ತಿಳಿಸುವ ಬಗ್ಗೆ ಶಾಸಕರಿಗೆ ಮನವಿ ಮಾಡಿದ್ದು ಪ್ರತಿಭಟನೆ ಮುಂದುವರೆದಿದೆ.

 

ಪಾಲಿಕೆ ವ್ಯಾಪ್ತಿಯ 35 ವಾರ್ಡ್ ಗಳಿಗೂ ನೀರು ಸರಬರಾಜು ಸ್ಥಗಿತಗೊಂಡಿತ್ತ ತುಮಕೂರು ನಗರದಾದ್ಯಂತ  ಸಾರ್ವಜನಿಕರು ನೀರಿಗಾಗಿ ಪರದಾಡುವ ಸ್ಥಿತಿ ತಲುಪುತ್ತಿದೆ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಕ್ರಮಕೈಗೊಳ್ಳುವ ಕಾದುನೋಡಬೇಕಾಗಿದೆ.

 

 

ವರದಿ _ಮಾರುತಿ ಪ್ರಸಾದ್ ತುಮಕೂರು.

Leave a Reply

Your email address will not be published. Required fields are marked *

You cannot copy content of this page

error: Content is protected !!