ಸೌಹಾರ್ದತೆಯ ಸಂದೇಶ ಸಾರಿದ ಇಫ್ತಾರ್ ಕೂಟ.

ಸೌಹಾರ್ದತೆಯ ಸಂದೇಶ ಸಾರಿದ ಇಫ್ತಾರ್ ಕೂಟ.

 

 

ತುಮಕೂರು_ದೇಶ ಹಾಗೂ ರಾಜ್ಯದಲ್ಲಿ ದುಷ್ಟಶಕ್ತಿಗಳು ಧರ್ಮಗಳನ್ನು ಒಡೆಯುವ ಕೆಲಸ ಮಾಡುತ್ತಿವೆ ಆ ಮೂಲಕ ಜನರ ಮನಸ್ಸಿನೊಳಗೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಆದರೆ ಇಂತಹ ಸಮಯದಲ್ಲಿ ಇಫ್ತಾರ್ ಕೂಟದ ಮೂಲಕ ಎಲ್ಲ ಜಾತಿ, ಧರ್ಮಗಳನ್ನು ಬೆಸೆದು ಪರಸ್ವರ ಪ್ರೀತಿ, ವಿಶ್ವಾಸವನ್ನು ಹಂಚುವ ಮೂಲಕ ಸರ್ವ ಧರ್ಮಗಳನ್ನು ಗೌರವಿಸುವ ಇಂತಹ ಇಫ್ತಾರ್ ಕೂಟಗಳ ಅವಶ್ಯಕತೆ ರಾಜ್ಯ ಹಾಗೂ ದೇಶಕ್ಕೆ ಅತ್ಯವಶ್ಯಕವಾಗಿದೆ ಎಂದು ಜಮಾತ್-ಎ-ಇಸ್ಲಾಮಿ ಹಿಂದ್ ನ ರಾಜ್ಯ ಕಾರ್ಯದರ್ಶಿ ಜನಾಬ್ ಅಕ್ಬರ್ ಅಲಿ ಅವರು ತಿಳಿಸಿದರು.

 

ತುಮಕೂರಿನ ರಿಂಗ್ ರಸ್ತೆಯ ಬಳಿಯ ದಾನಿಶ್ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಸೌಹಾರ್ಧ ಇಫ್ತಾರ್ ಕೂಟದಲ್ಲಿ ಮಾತನಾಡಿದ ಅವರು ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಎಲ್ಲ ಜಾತಿ-ಧರ್ಮಗಳನ್ನು ಒಗ್ಗೂಡಿಸಿ ಸೌಹಾರ್ದತೆ ಬೆಸೆಯುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಒಳ್ಳೆಯ ಸಂಗತಿ ಧರ್ಮ ಇರುವುದು ಮನುಷ್ಯನ ಹೃದಯಗಳನ್ನು ಇತರೆ ಮನುಷ್ಯರೊಂದಿಗೆ ಬೆಸೆಯುವ ಮಾರ್ಗ, ಧರ್ಮ ಎಂದಿಗೂ ಬೇರ್ಪಡಲು ಹೇಳುವುದಿಲ್ಲ ಎಲ್ಲರೂ ಧರ್ಮ-ಧರ್ಮಗಳ ಮಹತ್ವವನ್ನು ಎಲ್ಲರೂ ತಿಳಿಯಬೇಕು ಎಂದರು.

 

 

ಸಾಮಾಜಿಕ ಹೋರಾಟಗಾರ ಹಾಗೂ ಚಿಂತಕ ನಿಕೇತ್ ರಾಜ್ ಮಾತನಾಡಿ ದಲಿತರು, ಹಿಂದುಳಿದ ವರ್ಗದ ಸೇರಿದಂತೆ ಎಲ್ಲ ಜಾತಿಯ ಜನರೊಂದಿಗೆ ಇಫ್ತಾರ್ ಕೂಟ ಆಯೋಜನೆ ಮಾಡಿರುವುದು ನಿಜಕ್ಕೂ ಒಳ್ಳೆಯ ಕೆಲಸ ನಾವೆಲ್ಲ ಒಂದು ನಾವೆಲ್ಲ ಒಂದೇ ದೇಶದ ಮಕ್ಕಳಂತೆ ಬದುಕಬೇಕೆನ್ನುವ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ರವಾನೆ ಮಾಡಿದ್ದಾರೆ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಎಲ್ಲಕಡೆ ಯೋಜನೆಗೊಳ್ಳ ಬೇಕು ಇಂತಹ ಕಾರ್ಯಕ್ರಮದ ಮೂಲಕ ತುಮಕೂರು ಶಾಂತಿಯ ಬೀಡು ಅನ್ನುವ ಒಳ್ಳೆ ಸಂದೇಶವನ್ನು ಈ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮ ರವಾನಿಸಿದೆ ಎಂದರು.

 

 

ಇನ್ನು ಪ್ರಗತಿಪರ ಹೋರಾಟಗಾರರಾದ ದೊರೆರಾಜು ಮಾತನಾಡಿ ಎಲ್ಲಾ ಜಾತಿ ಧರ್ಮಗಳನ್ನು ಇಫ್ತಾರ್ ಕೂಟ ಬೆಸೆಯುವಂತೆ ಮಾಡಿದೆ ನಾಡಿಗೆ ಹಾಗೂ ದೇಶಕ್ಕೆ ಸೌಹಾರ್ದತೆಯ ಸಂದೇಶವನ್ನು ಸಾರಿದೆ , ಧರ್ಮ ಆಚರಣೆಗಳು ದ್ವೇಷಕಾರಬಾರದು ಅದರ ಬದಲು ಧರ್ಮ ಧರ್ಮಗಳನ್ನು ಗೌರವಿಸುವಂತಾಗಬೇಕು ದೇಶ ಅಭಿವೃದ್ಧಿ ಆಗಬೇಕು, ಸಂಘರ್ಷಗಳಿಂದ ಏನು ಮಾಡಲು ಸಾಧ್ಯವಿಲ್ಲ ಪರಸ್ಪರ ಪ್ರೀತಿ ,ಸೌಹಾರ್ದತೆ, ತಾಳ್ಮೆ ಗೌರವದಿಂದ ಎಲ್ಲವನ್ನು ಜಯಿಸಬಹುದು ಎನ್ನುವ ಸಂದೇಶವನ್ನು ಇಫ್ತಾರ್ ಕೂಟ ದ ಮೂಲಕ ಜಮಾತೆ ಇಸ್ಲಾಮಿ ಹಿಂದ್ ಮಾಡಿದೆ ಎಂದು ತಿಳಿಸಿದರು.

 

 

ಇನ್ನು ಕಾರ್ಯಕ್ರಮದಲ್ಲಿ ಏ. ಪಿ.ಸಿ.ಆರ್ ನ ಜಿಲ್ಲಾ ಅಧ್ಯಕ್ಷರಾದ ಜನಾಬ್ ತಾಜುದ್ದೀನ್ ಶರೀಫ್, ಪ್ರಗತಿಪರ ಹೋರಾಟಗಾರರಾದ ಉಮೇಶ್, ನರಸಿಂಹಮೂರ್ತಿ, ಡಾಕ್ಟರ್ ಮುರಳಿಧರ್, ಪಿ.ಎನ್ ರಾಮಯ್ಯ, ನಿಧಿ ಕುಮಾರ್, ಜಯಣ್ಣ, ಬಂಡೆ ಕುಮಾರ್, ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಸಾಮಾಜಿಕ ಹೋರಾಟಗಾರರು ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

 

 

ವರದಿ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!