ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ.
ತುಮಕೂರು_ಕಳೆದ ಫೆಬ್ರವರಿ ಮಾಹೆಯಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ (ತುಮಕೂರು ಜಿಲ್ಲಾ ಘಟಕ)ಚುನಾಯಿತರಾದ ಪದಾಧಿಕಾರಿಗಳಿಗೆ ಚುನಾವಣಾ ಅಧಿಕಾರಿಗಳಿಂದ ಪ್ರಮಾಣ ಪತ್ರ ವಿತರಣೆ ಹಾಗೂ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.
ತುಮಕೂರಿನ ಪತ್ರಿಕಾಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಚುನಾವಣೆಯಲ್ಲಿ ಚುನಾಯಿತರಾದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.
ಇನ್ನೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಚುನಾವಣಾಧಿಕಾರಿಗಳಾದ ನಿವೃತ್ತ ಡಿವೈಎಸ್ಪಿ ಜಗದೀಶ್ ,ಚಂದ್ರಪ್ಪ ಸೇರಿದಂತೆ ಇತರೆ ಚುನಾವಣಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾದ ಚಿ. ನಿ ಪುರುಷೋತ್ತಮ್ ಮಾತನಾಡಿ ಮುಂದಿನ ದಿನದಲ್ಲಿ ತುಮಕೂರು ಜಿಲ್ಲಾ ಪತ್ರಿಕಾ ಭವನವನ್ನು ಮಾದರಿ ಪತ್ರಿಕಾ ಭವನ ವನ್ನಾಗಿ ಮಾಡುವ ಗುರಿ ಹೊಂದಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಮುಂದಿನ ದಿನದಲ್ಲಿ ಪಾಲಿಕೆ ವತಿಯಿಂದ ಹಾಗೂ ತುಮಕೂರು ನಗರ ಶಾಸಕರು ಹಾಗೂ ಸಂಸದರ ಸಹಕಾರದೊಂದಿಗೆ ಪತ್ರಿಕಾ ಭವನವನ್ನ ನವೀಕರಿಸಲಾಗುವುದು ಇದಕ್ಕೆ ಸಂಬಂಧಿಸಿದಂತೆ ನವೀಕರಣ ಪ್ರಕ್ರಿಯೆಯು ಟೆಂಡರ್ ಹಂತದಲ್ಲಿದ್ದು ಶೀಘ್ರವೇ ಪತ್ರಿಕಾ ಭವನ ನವೀಕರಣ ಮಾಡಲಾಗುವುದು ಎಂದರು.
ಮುಂದಿನ ದಿನದಲ್ಲಿ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪತ್ರಕರ್ತರಿಗೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ,ಹಿರಿಯ ಪತ್ರಕರ್ತರ ಸಲಹೆ-ಸೂಚನೆಗಳನ್ನು ಪಡೆದು ಸಂಘವನ್ನು ಮುನ್ನಡೆಸಿಕೊಂಡು ಹೋಗಲು ಜಿಲ್ಲೆಯ ಎಲ್ಲ ಪತ್ರಕರ್ತರ ಸಹಕಾರ ಅತ್ಯಗತ್ಯ ಎಂದರು.
ಮುಂದಿನ ದಿನದಲ್ಲಿ ನಿವೇಶನ ಇಲ್ಲದ ಪತ್ರಕರ್ತರಿಗೆ ನಿವೇಶನ ಸಿಗಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು, ಇನ್ನು ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದರು.
ಇನ್ನು ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಚಿಕ್ಕಿರಪ್ಪ ,ಶ್ಯಾ ನ ಪ್ರಸನ್ನ ಮೂರ್ತಿ, ತಿಪಟೂರು ಕೃಷ್ಣ, ಪ್ರಧಾನ ಕಾರ್ಯದರ್ಶಿ ಟಿ. ಇ ರಘುರಾಮ್, ಕಾರ್ಯದರ್ಶಿಗಳಾದ ಕೊರಟಗೆರೆ ರಂಗಧಾಮಯ್ಯ, ಸತೀಶ್ ಹಾರೋಗೆರೆ ,ದಶರಥ, ಖಜಾಂಚಿ ದೇವಪ್ರಕಾಶ್, ನಿರ್ದೇಶಕರುಗಳಾದ ಟಿ.ಎಸ್ ಕೃಷ್ಣಮೂರ್ತಿ, ಮಂಜುನಾಥ ತಾಳ, ನರಸಿಂಹಮೂರ್ತಿ, ನಂದೀಶ್, ಹೆಚ್.ಎಸ್ ಪರಮೇಶ್, ಪ್ರಸನ್ನ ದೊಡ್ಡಗುಣಿ ,ಮಂಜುನಾಥ್ ಹಾಲ್ಕುರಿಕೆ ,ಯಶಸ್ .ಕೆ. ಪದ್ಮನಾಭ , ಸಿ.ಜಯಣ್ಣ, ಎಸ್.ಡಿ ಚಿಕ್ಕಣ್ಣ ,ಬೈರೇಶ್ ನಾಗೇಂದ್ರಪ್ಪ, ಎಚ್ ಎನ್ ಶಂಕರ್ ಸಿರಾ, ನಾಗರಾಜು, ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಜಿಲ್ಲೆಯ ಪತ್ರಕರ್ತರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ _ಮಾರುತಿ ಪ್ರಸಾದ್ ತುಮಕೂರು