ಜಲಧಾರೆ ಕಾರ್ಯಕ್ರಮ ಒಂದು ಇತಿಹಾಸ _ತುಮಕೂರು ಗ್ರಾಮಾಂತರ ಶಾಸಕ ಡಿ ಸಿ ಗೌರಿಶಂಕರ್.
ತುಮಕೂರು _ನಾಡಿನ ಎಲ್ಲ ನದಿ ಮೂಲಗಳನ್ನು ತೆಗೆದುಕೊಂಡು ಅವುಗಳನ್ನು ಜೋಡಣೆ ಮಾಡಿ ಜಿಲ್ಲಾ ಕೇಂದ್ರದಲ್ಲಿ ಇರುವ ರೈತರಿಗೆ ಅನುಕೂಲ ಮಾಡಬೇಕು ಎನ್ನುವುದು ಕಾರ್ಯಕ್ರಮದ ಮುಖ್ಯ ಉದ್ದೇಶ ಹಾಗಾಗಿ ಜಲಧಾರೆ ಕಾರ್ಯಕ್ರಮ ಒಂದು ಇತಿಹಾಸ ಎಂದು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇನ್ನು ಬೇರೆ ಪಕ್ಷದಂತೆ ದೊಡ್ಡ ದೊಡ್ಡ ಪಾದಯಾತ್ರೆಗಳನ್ನು ಮಾಡುವುದಿಲ್ಲ ಇನ್ನು ನಮ್ಮ ಮುಖ್ಯ ಉದ್ದೇಶ ಕುಮಾರಸ್ವಾಮಿ ಅವರ ಜಲಧಾರೆ ಕಾರ್ಯಕ್ರಮದಿಂದ ರೈತರಿಗೆ ಅನುಕೂಲ ಆಗಬೇಕು ಎಂದರು.
ಇನ್ನು ಜೆಡಿಎಸ್ ಪಕ್ಷ ಒಂದು ಸಣ್ಣ ಪ್ರಾದೇಶಿಕ ಪಕ್ಷ ಇನ್ನೂ ರೈತರಿಗೆ ಅನುಕೂಲ ಮಾಡಬೇಕು ಅನ್ನುವ ನಂಬಿಕೆ ಇದೆ ಇನ್ನು ಪ್ರಾದೇಶಿಕ ಪಕ್ಷದಿಂದ ಮಾತ್ರ ರೈತರಿಗೆ ಅನುಕೂಲ ಆಗಲಿದೆ ಎಂದರು.
ಇನ್ನು ಕುಮಾರಸ್ವಾಮಿ ಸರ್ಕಾರದಲ್ಲಿ ಸುಮಾರು 25 ಸಾವಿರ ಕೋಟಿಗೂ ಹೆಚ್ಚು ಸಾಲಮನ್ನಾ ಮಾಡಿದ ಕೀರ್ತಿ ಕುಮಾರಸ್ವಾಮಿ ರವರಿಗೆ ಸಲ್ಲುತ್ತದೆ ಎಂದರು.
ಇನ್ನು ಜಲಧಾರೆ ಕಾರ್ಯಕ್ರಮ ಯೋಜನೆ ಮಾಡಿರುವುದು ಒಂದು ಅದ್ಭುತ ಕಾರ್ಯಕ್ರಮ ಇದರಿಂದ ತುಮಕೂರು ಜಿಲ್ಲೆಗೆ ಸುಮಾರು 15 ವಾಹನಗಳು ಸಿದ್ಧವಾಗುತ್ತಿದೆ ಎಂದರು.
ಇನ್ನು ಕುಮಾರಸ್ವಾಮಿ ಅವರು ಈಗಾಗಲೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಜಲಧಾರೆ ವಾಹನಗಳು ಕೆಲವೇ ದಿನಗಳಲ್ಲಿ ತುಮಕೂರು ಜಿಲ್ಲೆಯಿಂದ ಆಗಮಿಸಲಿದ್ದು ಅದ್ದೂರಿಯಾಗಿ ಸ್ವಾಗತ ಮಾಡಲಿದ್ದೇವೆ ಎಂದು ತಿಳಿಸಿದರು.
ಜಲಧಾರೆ ವಾಹನದಿಂದ ನಮ್ಮ ಜಿಲ್ಲೆಯಲ್ಲಿರುವ ನೀರಾವರಿ ಸಮಸ್ಯೆಯನ್ನು ಬಗೆಹರಿಸಬೇಕು ಎನ್ನುವುದು ನಮ್ಮ ಉದ್ದೇಶ ಇನ್ನೂ ಜಲಧಾರೆಯ ಕಾರ್ಯಕ್ರಮ ದಿಂದ ಕೆರೆಗಳಿಗೆ ನೀರು ಸಿಗಬೇಕು ಇನ್ನೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಸಾರಥ್ಯದಲ್ಲಿ ಜಲಧಾರೆ ಕಾರ್ಯಕ್ರಮ ಯಶಸ್ಸು ಆಗಲಿದೆ ಎಂದು ತಿಳಿಸಿದ್ದಾರೆ.
ವರದಿ _ಮಾರುತಿ ಪ್ರಸಾದ್ ತುಮಕೂರು