ಏಪ್ರಿಲ್ 10ರಂದು ಡಾಕ್ಟರ್ ಜಿ ಪರಮೇಶ್ವರ್ ರವರ’ ಸವ್ಯಸಾಚಿ ‘ ಗೌರವ ಗ್ರಂಥ ಬಿಡುಗಡೆ.

ಏಪ್ರಿಲ್ 10ರಂದು ಡಾಕ್ಟರ್ ಜಿ ಪರಮೇಶ್ವರ್ ರವರ’ ಸವ್ಯಸಾಚಿ ‘ ಗೌರವ ಗ್ರಂಥ ಬಿಡುಗಡೆ.

 

 

ತುಮಕೂರು_ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾಕ್ಟರ್ ಜಿ ಪರಮೇಶ್ವರ್ ಅವರಿಗೆ ಸಂಬಂಧಿಸಿದಂತೆ ಲೇಖಕ ಮಾದೇವ ಭರಣಿ ರವರು ಬರೆದಿರುವ ಸವ್ಯಸಾಚಿ ಗೌರವ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಏಪ್ರಿಲ್ 10ರಂದು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದೆ ಎಂದು ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಸಂಘದ ಅಧ್ಯಕ್ಷರಾದ ಎಂ. ಝೆಡ್ ಕುರಿಯನ್ ಅವರು ತಿಳಿಸಿದರು.

 

 

ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಏಪ್ರಿಲ್ 10ರಂದು ಬೆಳಗ್ಗೆ 10:30 ಕ್ಕೆ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಡಾ. ಜಿ ಪರಮೇಶ್ವರ್ ಅವರಿಗೆ ಸಂಬಂಧಿಸಿದ ‘ಸವ್ಯಸಾಚಿ ‘ ಗೌರವ ಗ್ರಂಥ ಬಿಡುಗಡೆ ಸಮಾರಂಭ ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಸಂಘದ ವತಿಯಿಂದ ಡಾಕ್ಟರ್ ಜಿ ಪರಮೇಶ್ವರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

 

ಏಪ್ರಿಲ್ 9 ಹಾಗೂ 10 ರಂದು ಎರಡು ದಿನದ ಕಾರ್ಯಕ್ರಮವಿದ್ದು ಏಪ್ರಿಲ್ 9ರಂದು ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್ ಹಾಗೂ ಮಲ್ಲಿಕಾರ್ಜುನ್ ಕೆಂಕೆರೆ ರವರಿಂದ ಸಂಗೀತ ಕಾರ್ಯಕ್ರಮ ಇದು ಏಪ್ರಿಲ್ 10ರಂದು ‘ಸವ್ಯಸಾಚಿ’ ಗೌರವ ಗ್ರಂಥ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದರು.

 

ಕಳೆದ ಒಂದು ವರ್ಷದಿಂದ ಮಹದೇವ ಭರಣಿ ಅವರು ಬರೆದಿರುವ ‘ಸವ್ಯಸಾಚಿ’ ಗೌರವ ಗ್ರಂಥ ಬಿಡುಗಡೆ ಕಾರ್ಯಕ್ರಮ ದಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾಕ್ಟರ್ ಜಿ ಪರಮೇಶ್ವರ್ ರವರು ಭಾಗವಹಿಸಲಿದ್ದು , ಲೇಖಕರಾದ ಬರಗೂರು ರಾಮಚಂದ್ರಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಸವ್ಯಸಾಚಿ ಗೌರವಗ್ರಂಥ ಬಿಡುಗಡೆಯನ್ನು ಶ್ರೀಲಂಕಾದ ಬುದ್ಧಗುರು ಬಿಡುಗಡೆಗೊಳಿಸಲಿದ್ದಾರೆ ಇನ್ನು ಕಾರ್ಯಕ್ರಮದಲ್ಲಿ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ಹಾಗೂ ಲೇಖಕರಾದ ಚಂದ್ರಶೇಖರ್ ಕಂಬಾರ ರವರು ಹಾಜರಿರಲಿದ್ದಾರೆ ಎಂದರು.

 

 

ಕಾರ್ಯಕ್ರಮಕ್ಕೆ ಸುಮಾರು ಆರು ಸಾವಿರ ಜನರು ಸೇರುವ ನಿರೀಕ್ಷೆಯಿದ್ದು ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.

 

ಇನ್ನು ಸವ್ಯಸಾಚಿ ಗೌರವ ಗ್ರಂಥ ಬರೆದಿರುವ ಮಾದೇವ್ ಭರಣಿ ಮಾತನಾಡಿ ರಾಜ್ಯ ಕಂಡ ಅತ್ಯುತ್ತಮ ನಾಯಕರಲ್ಲಿ ಡಾಕ್ಟರ್ ಜಿ ಪರಮೇಶ್ವರ್ ಅವರು ಕೂಡ ಒಬ್ಬರು ಇನ್ನು ಅವರಿಗೆ ಸಂಬಂಧಿಸಿದ ಗೌರವಗ್ರಂಥ ಸವ್ಯಸಾಚಿ ಪುಸ್ತಕದಲ್ಲಿ ರಾಜ್ಯದ ಉದ್ದಗಲಕ್ಕೂ ಇರುವ ಸಾಮಾಜಿಕ ಹೋರಾಟಗಾರರು, ಅಧಿಕಾರಿಗಳು, ಶಾಸಕರು ಸಂಸದರು ಹಿರಿಯ ಸಚಿವರು, ಲೇಖಕ.ಯು ಆರ್ ಅನಂತಮೂರ್ತಿ, ಪ್ರೊಫೆಸರ್ ಜಿ.ಕೆ ಗೋವಿಂದರಾವ್ ಸೇರಿದಂತೆ ಹಲವು ಮುಖಂಡರು ಡಾ ಜಿ ಪರಮೇಶ್ವರ್ ಅವರಿಗೆ ಸಂಬಂಧಿಸಿದಂತೆ ಲೇಖನಗಳನ್ನು ಬರೆದಿದ್ದು ಇದಕ್ಕೆ ಸಂಬಂಧಿಸಿದಂತೆ ಡಾಕ್ಟರ್ ಜಿ ಪರಮೇಶ್ವರ್ ರವರ ಸವ್ಯಸಾಚಿ ಗೌರವ ಗ್ರಂಥ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದರು.

 

 

 

ಇನ್ನು ಪತ್ರಿಕಾಗೋಷ್ಠಿಯಲ್ಲಿ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ರವಿಪ್ರಕಾಶ್, ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಂಶುಪಾಲರಾದ ಡಾಕ್ಟರ್ ಪ್ರಭಾಕರ್, ಹರಿಕಥೆ ವಿದ್ವಾನ್ ಲಕ್ಷ್ಮಣದಾಸ್ ಸೇರಿದಂತೆ ಹಲವರು ಹಾಜರಿದ್ದ ರು.

 

ವರದಿ_ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!