ಮಸೀದಿಗಳ ಮೇಲಿನ ಮೈಕ್ ಸಂಬಂಧ ಕಟ್ಟುನಿಟ್ಟಿನ ಕ್ರಮ ಅಗತ್ಯ _ಮಾಜಿ ಸಚಿವ ಸೊಗಡು ಶಿವಣ್ಣ.
ತುಮಕೂರು_ಮಹಾರಾಷ್ಟ್ರದಲ್ಲಿ ಶಿವಸೇನೆ ಮುಖಂಡ ಠಾಕ್ರೆ ಹೇಳಿರೋದಿ ನೂರಕ್ಕೆ ನೂರು ಸತ್ಯವಾಗಿದೆ ದೇಶದಲ್ಲಿ ಮೈಕ್ ಗಳ ಹಾವಳಿ ವಿಪರೀತವಾಗಿದೆ ಎಂದು ತುಮಕೂರಿನ ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರುನಾನು ಮಾಲಿನ್ಯ ಸಚಿವನಾಗಿದ್ದಾಗ ಕಾನೂನಿಗೆ ಗೌರವ ಕೊಡುವಂತೆ ಮಸೀದಿಗಳ ಮೇಲಿನ ಮೈಕ್ ಗಳನ್ನ ತೆಗೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೆ.
ಈ ಮೈಕ್ ಗಳ ಶಬ್ಧದಿಂದಾಗಿ ಹಾರ್ಟ್ ಅಟ್ಯಾಕ್ ಮತ್ತು ವಿದ್ಯಾರ್ಥಿಗಳ ಓದಿಗೆ ತೊಡಕು ಆಗುತ್ತಿದೆ.ತುಮಕೂರು ನಗರದ ಸದಾಶಿವನಗರ, ಜಯಪುರದಲ್ಲಿ ಆಜ಼ಾನ್ ಕಾಟದಿಂದ ಹಿಂದೂಗಳು ಮನೆ ತೊರೆದಿದ್ದಾರೆ.
ತುಮಕೂರಿನ ಕೆಲ ಬಡಾವಣೆಗಳಲ್ಲಿ ಮನೆಗಳನ್ನ ಮಾರಾಟ ಮಾಡುತ್ತಿದ್ದಾರೆ ಹಿಂದೂಗಳ ಸ್ಮಶಾನಕ್ಕೆ ಹೋಗಿ ನಮ್ಮ ಶಾಸ್ತ್ರ ವಿಧಿವಿಧಾನ ಮಾಡುವ ವೇಳೆ ಆಜ಼ಾನ್ ನಿಂದ ನಮಗೆ ತೊಂದರೆ ಆಗುತ್ತಿದ್ದು .ಬಿಜೆಪಿಯವರು ಕೇವಲ ಹತ್ತೇ ವರ್ಷ ಆಳ್ವಿಕೆ ನಡೆಸ್ತಿರೋದು ಇದರೆ ಹಿಂದೆ 70 ಆಳಿದವರು ಪಾಪಿಗಳು ಸಮಾಜದಲ್ಲಿ ಜಾತಿ ವಿಂಗಡಣೆ ಮಾಡುತ್ತಿದ್ದಾರೆ.
ಕುಮಾರಸ್ವಾಮಿ ಹಿಜಾಬ್ ಹಿಡಿದುಕೊಂಡಿದ್ದಾರೆ, ಸಿದ್ದರಾಮಯ್ಯ ಹಲಾಲ್ ಹಿಡ್ಕೊಂಡಿದ್ದಾರೆ, ಇನ್ನೊಬ್ಬರು ಮಾವಿನಹಣ್ಣು ಹಿಡ್ಕೊಂಡಿದ್ದಾರೆ ಮೊದಲು ಶಬ್ಧ ಮಾಲಿನ್ಯ ತಡೆಗಟ್ಟಲಿ ದೇವಸ್ಥಾನದಲ್ಲೂ ಮೈಕ್ ಗಳನ್ನ ಶಬ್ಧ ಮಾಲಿನ್ಯ ಆಗದಂತೆ ಹಾಕಿಕೊಳ್ಳಲಿ ಸುಪ್ರೀಂ ಆದೇಶ ಯತಾವತ್ತು ಪಾಲನೆ ಆಗಲಿ ಎಂದರು.
ಇದು ಪಾಕಿಸ್ಥಾನ ಅಲ್ಲ ಹಿಂದೂ ರಾಷ್ಟ್ರ ಇಲ್ಲಿ ಹಿಂದೂ ಕಾನೂನು ಇರಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರಕ್ಕೆ ಈಗಲೂ ಮನವಿ ಮಾಡಿಕೊಳ್ಳುತ್ತೇನೆ ಕಾಂಗ್ರೆಸ್ ಮತ್ತು ಜೆಡಿಎಸ್ ದೇಶ ವಿಭಜನೆ ಮಾಡೋಕೆ ಹೊರಟಿದ್ದಾರೆ.ಮಾವಿನಹಣ್ಣನ್ನ ನಮ್ಮವರು ಬೆಳೆಯೋದು ಮುಸಲ್ಮಾನರು ಅದನ್ನ ಮಾರಿ ಲಾಭ ಮಾಡಿಕೊಳ್ಳುವುದು ಏಷ್ಟು ಸರಿ ಎಂದಿದ್ದಾರೆ.
ಹೈ ಕೋರ್ಟ್ ತೀರ್ಪಿನ ವಿರುದ್ಧ ಇವರ ಅಂಗಡಿ ಬಂದ್ ಮಾಡಿದರು ಇದರಿಂದ ನಮ್ಮವರಿಗೂ ಲಾಸ್ ಆಗಿದೆ
ರೇಷ್ಮೆ ಮಾರ್ಕೇಟ್ ಗಳೂ ಬಂದ್ ಆಗೋದ್ವು ಇದರಿಂದ ನಮ್ಮವರಿಗೆ ತುಂಬಾ ತೊಂದರೆ ಆಯ್ತು ರೇಷ್ಮೆ ಗೂಡುಗಳು ನಾಶ ಆದ್ವ ಇದರಿಂದ ಏಷ್ಟು ತೊಂದರೆ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ.
ಮಾವಿನ ಹಣ್ಣನ್ನೂ ಕೂಡ ಇವರು ಮಾರಬಾರದು ಅದನ್ನ ಬೆಳೆದ ರೈತರು ನಮ್ಮವರು ಮಾರಲಿ ಮುಸಲ್ಮಾನರು ಮಾವಿನಹಣ್ಣನ್ನ ಕರೀದಿ ಮಾಡದೆ ಇದ್ರೆ ರೈತರು ಕಂಗಾಲು ಆಗಲ್ಲ ರೈತರಿಂದ ನಮ್ಮವರೇ ಕರೀದಿ ಮಾಡಿ ಅದನ್ನ ಮಾರಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮುಸಲ್ಮಾನರು ಯಾಕೆ ಪೌರ ಕಾರ್ಮಿಕರ ಕೆಲಸ ಮಾಡಲ್ಲ, ನಮ್ಮವರೇ ಯಾಕೆ ಮಾಡ್ಬೇಕು ನಮ್ಮವರು ಮುಸಲ್ಮಾನರ ಬೀದಿಗಳಲ್ಲಿ ಕಸ ಗುಡಿಸೋದು, ಶೌಚ ಕ್ಲೀನ್ ಮಾಡೋದು ಮಾಡ್ತಾರೆ ಮುಸಲ್ಮಾನರು ಪೌರಕಾರ್ಮಿಕರ ತರ ಕೆಲಸ ಮಾಡಲಿ ಎಂದರು.
ವರದಿ _ಮಾರುತಿ ಪ್ರಸಾದ್ ತುಮಕೂರು