ಪ್ರಗತಿಪರರ ವೇದಿಕೆ ವತಿಯಿಂದ ಸೌಹಾರ್ದ ಯುಗಾದಿ ಆಚರಣೆ.

ಪ್ರಗತಿಪರರ ವೇದಿಕೆ ವತಿಯಿಂದ ಸೌಹಾರ್ದ ಯುಗಾದಿ ಆಚರಣೆ.

 

ತುಮಕೂರು_ದೇಶದೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಎಡೆಮಾಡಿದ್ದು ಎರಡು ವರ್ಷದಿಂದ ಕರೋಣ ನಡುವೆ ಮಂಕಾಗಿದ್ದ ಯುಗಾದಿ ಹಬ್ಬ ಈ ಬಾರಿ ಅದ್ದೂರಿಯಾಗಿ ದೇಶದ ನಾಗರಿಕರು ಯುಗಾದಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.

 

 

ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ದಿನೇದಿನೇ ಧರ್ಮಗಳ ನಡುವೆ ಹಲವು ವಿಚಾರಗಳಲ್ಲಿ ಸಂಘರ್ಷ ಉಂಟಾಗುತ್ತಿದ್ದು ಇಂತಹ ಸಂದರ್ಭದಲ್ಲಿ ತುಮಕೂರಿನ ಪ್ರಗತಿಪರರ ವೇದಿಕೆ ವತಿಯಿಂದ ವಿವಿಧ ಧರ್ಮಗಳ ಮುಖಂಡರು ಪ್ರಗತಿಪರ ಚಿಂತಕರು ಹಾಗೂ ಸಾರ್ವಜನಿಕರು ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನೆ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

 

 

ತುಮಕೂರು ನಗರದ ಟೌನ್ಹಾಲ್ ವೃತ್ತದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಮುಖಂಡರು ಪ್ರಗತಿಪರ ಚಿಂತಕರು ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೋಮುವಾದ ಸೃಷ್ಟಿ ಮಾಡುತ್ತಾ ಸಮಾಜದ ಒಳಿತನ್ನು, ಒಗಟನ್ನು ಒಡೆಯುವ ಕೆಲಸವನ್ನು ಕೋಮುವಾದಿ ಶಕ್ತಿಗಳು ಮಾಡುತ್ತಿದ್ದಾರೆ ಹಾಗಾಗಿ ಇಂತಹ ಕೋಮುವಾದ ಶಕ್ತಿಗಳ ವಿರುದ್ಧ ಪ್ರಗತಿಪರರು ಒಗ್ಗಟ್ಟಾಗಿ ಇದ್ದೇವೆ ಎನ್ನುವ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಮಾಜಕ್ಕೆ ಹಾಗೂ ಒಗ್ಗಟ್ಟನ್ನು ಹೊಡೆಯುವ ಕಿಡಿಗೇಡಿಗಳಿಗೆ ಒಳ್ಳೆಯ ಸಂದೇಶ ರವಾನೆ ಮಾಡಬೇಕು ಎಂಬುದು ಈ ಕಾರ್ಯಕ್ರಮದ ಮೂಲ ಉದ್ದೇಶ ಎಂದು ಹಲವು ಮುಖಂಡರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

 

 

 

 

ಇನ್ನು ಇನ್ನು ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕರಾದ ಸಿ.ಯತಿರಾಜು ,ದೊರೆರಾಜು ,ನರಸಿಂಹಮೂರ್ತಿ ,ತಾಜುದ್ದಿನ್ ಶರೀಫ್, ಡಾಕ್ಟರ್ ಅರುಂಧತಿ ರಂಗಸ್ವಾಮಿ, ಉಮೇಶ್ ಸೈಯದ್ ಮುಜೀಬ್,ಸುಬ್ರಮಣ್ಯ, ವೆಂಕಟೇಶ್ ,ದಲಿತ ಮುಖಂಡರಾದ ಪಿ. ಎನ್ ರಾಮಯ್ಯ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.

 

 

ಇನ್ನು ಇದೇ ಸಂದರ್ಭದಲ್ಲಿ ಹಲವು ಮುಖಂಡರು ಪರಸ್ಪರ ಬೇವುಬೆಲ್ಲ ಹಾಗೂ ಒಬ್ಬಟ್ಟನ್ನು ಹಂಚಿ ಪರಸ್ಪರ ತಿನ್ನಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ವಿಶೇಷವಾಗಿ ಹಬ್ಬವನ್ನು ಆಚರಿಸಿ ಗಮನ ಸೆಳೆದಿದ್ದಾರೆ.

 

ವರದಿ_ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!