ಯಡಿಯೂರು ಜಾತ್ರೆಯಲ್ಲಿ ಹಿಂದೂ ವರ್ತಕರಿಗಷ್ಟೇ ಅವಕಾಶ ನೀಡಿ: ಬಜರಂಗದಳ ಕಾರ್ಯಕರ್ತರ ಮನವಿ.
ತುಮಕೂರು: ಜಿಲ್ಲೆಯ ಯಡಿಯೂರು ಜಾತ್ರೆಯಲ್ಲಿ ಹಿಂದೂಗಳನ್ನು ಹೊರತು ಅನ್ಯ ಧರ್ಮದವರಿಗೆ ಅವಕಾಶ ಕೊಡದಂತೆ ಜಿಲ್ಲಾ ಬಜರಂಗದಳ ಕಾರ್ಯಕರ್ತರು ದೇವಸ್ಥಾನ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದಾರೆ.
ಬಜರಂಗದಳ ಜಿಲ್ಲಾ ಸಂಚಾಲಕ ಅಪ್ಪಿ ಹರೀಶ್ ನೇತೃತ್ವದಲ್ಲಿ ವಿರಾಟ್ ಹಿಂದೂ ಗೆಳೆಯರ ಬಳಗದ ಕಾರ್ಯಕರ್ತರು ಹಾಗೂ ಹಿಂದೂ ಕಾರ್ಯಕರ್ತರು ಇಂದು ಕುಣಿಗಲ್ ತಾಲೂಕಿನ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪಕ ಮಂಜುನಾಥ್ ಅವರನ್ನು ಭೇಟಿಯಾಗಿದ್ದಾರೆ.
ಏಪ್ರಿಲ್ 1ರಿಂದ ಏಪ್ರಿಲ್ 16ರ ವರೆಗೂ ನಡೆಯಲಿರುವ ಯಡಿಯೂರು ಸಿದ್ದಲಿಂಗೇಶ್ವರ ಜಾತ್ರೆಯಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡುಬೇಕು. ಒಂದು ವೇಳೆ ಅನ್ಯಕೋಮಿನ ವ್ಯಾಪಾರಸ್ಥರು ಅಂಗಡಿಯಿಟ್ಟರೆ ತೆರವುಗೊಳಿಸವಂತೆ ಮನವಿ ಮಾಡಿದ್ದಾರೆ.
ಇನ್ನು ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಜರಂಗದಳ ತುಮಕೂರು ಜಿಲ್ಲಾ ಸಹ ಸಂಚಾಲಕ ಅಪ್ಪಿ ಹರೀಶ್ ರವರು ಮಾತನಾಡಿ ಹಿಂದೂ ಧಾರ್ಮಿಕ ದತ್ತಿ 2002ರ ಕಾಯ್ದೆ ಅನ್ವಯ ಹಿಂದೂ ದೇವಾಲಯದ ಜಾಗದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲದ ಕಾರಣ ಅವಕಾಶ ನೀಡಬಾರದು ಇನ್ನು ಕಾಯ್ದೆ ಉಲ್ಲಂಘನೆ ಮಾಡಿ ಅನ್ಯಧರ್ಮೀಯರಿಗೆ ಅವಕಾಶ ನೀಡಿದರೆ ಇದಕ್ಕೆ ಸಂಬಂಧಿಸಿದಂತೆ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.