ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ಯಾವುದೇ ಸಂಘ-ಸಂಸ್ಥೆಗಳ ಹೆಸರು, ಚಿನ್ನೆ, ಲಾಂಛನ ಹಾಕುವಂತಿಲ್ಲ ಹಾಕಿದರೆ ಕೇಸ್ ಫಿಕ್ಸ್

 

 

ಬೆಂಗಳೂರು: ಈಗಾಗಲೇ ಹೈಕೋರ್ಟ್ ವಾಹನಗಳ ನೋಂದಣಿ ಫಲಕಗಳ ( Vehicle Registration Plate ) ಮೇಲೆ ಅನಧಿಕೃತವಾಗಿ ಯಾವುದೇ ಸಂಘ-ಸಂಸ್ಥೆಗಳ ಹೆಸರು, ಚಿನ್ನೆ, ಲಾಂಛನ ಹಾಕುವಂತಿಲ್ಲ ಎಂಬುದಾಗಿ ಖಡಕ್ ಆದೇಶದಲ್ಲಿ ತಿಳಿಸಿದೆ. ಹೀಗಿದ್ದೂ ಕೆಲವರು ತಮ್ಮ ವಾಹನಗಳ ನೋಂದಣಿ ಫಲಕದ ಮೇಲೆ ಚಿಹ್ನೆ, ಹೆಸರು, ಲಾಂಛನ ಹಾಕಿಕೊಂಡು ಓಡಾಡುತ್ತಿರುವುದು ಗಮನಕ್ಕೆ ಬಂದ ಕಾರಣ, ಸಾರಿಗೆ ಇಲಾಖೆಯಿಂದ ( Transport Department ) ಇದೀಗ ವಿಶೇಷ ಕಾರ್ಯಾಚರಣೆ ನಡೆಸಿ, ದಂಡ ಹಾಕೋ ಕೆಲಸವನ್ನು ಶುರು ಮಾಡಲಿದೆ.

 

 

 

ಈ ಕುರಿತಂತೆ ಸಾರಿಗೆ ಇಲಾಖೆಯಿಂದ ರಾಜ್ಯದ ಎಲ್ಲಾ ವಿಭಾಗಗಳ ಜಂಟಿ ಸಾರಿಗೆ ಆಯುಕ್ತರಿಗೆ ಸೂಚನೆ ನೀಡಿದ್ದು, ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಹೆಸರುಗಳನ್ನು ಹೋಲುವಂತ ರಾಷ್ಟ್ರೀಯ, ರಾಜ್ಯ ಮಾನವ ಹಕ್ಕುಗಳ ಒಕ್ಕೂಟ, ಸಂಸ್ಥೆ ಇತ್ಯಾದಿ ಹೆಸರುಗಳನ್ನು ಚಿಹ್ನೆ, ಲಾಂಛನಗಳನ್ನು ಹಾಗೂ ಸಂಘ-ಸಂಸ್ಥೆಗಳ ಹೆಸರು ಅಳವಡಿಸಿಕೊಂಡಿರುವುದನ್ನು ತೆರವುಗೊಳಿಸಲು, ಉಚ್ಛನ್ಯಾಯಾಲಯವು ಕಾಲ ಕಾಲಕ್ಕೆ ಮಧ್ಯಂತರ ಆದೇಶಗಳನ್ನು ನೀಡುತ್ತಾ ಬಂದಿದೆ.

 

 

ದಿನಾಂಕ 07-01-2022ರಂದು ಈ ಪ್ರಕರಣ ಕುರಿತಂತೆ ನ್ಯಾಯಾಲಯವು ನಡೆಸಿದ ವಿಚಾರಣೆಯಲ್ಲಿ, ಅನಧಿಕೃತವಾಗಿ ನೋಂದಣಿ ಫಲಕಗಳ ಮೇಲೆ ನಿಯಮಬಾಹಿರವಾಗಿ ಪ್ರದರ್ಶಿಸುತ್ತಿರುವ ಸಂಘ-ಸಂಸ್ಥೆಯ ಹೆಸರು, ಚಿಹ್ನೆ, ಲಾಂಛನ ಇತರೆ ಹೆಸರುಗಳನ್ನು ತೆರವುಗೊಳಿಸುವಂತೆ ಸಾರಿಗೆ ಇಲಾಖೆಗೆ ಆದೇಶಿಸಿದೆ.

 

ಈ ಹಿನ್ನಲೆಯಲ್ಲಿ ನಿಯಮಬಾಹಿರವಾಗಿ ಲಾಂಛನದಂತಹ ಸಂಸ್ಥೆಯ ಹೆಸರು, ಚಿನ್ನೆ ಬಳಸುವ ವಾಹನಗಳ ತಪಾಸಣೆ ನಡೆಸುವುದ ಜೊತೆಗೆ, ನಿಮ್ಮ ಕಚೇರಿ ವ್ಯಾಪ್ತಿಯಲ್ಲಿರುವ ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಹಾಗೂ ಇತರೆ ಸಂಸ್ಥೆಗಳು ಸೇರಿದಂತೆ ನಿಗಮ, ಮಂಡಳಿಗಳಿಗೆ, ಭೇಟಿ ನೀಡಿ, ಅನಧಿಕೃತ ಲಾಂಛನ ಅಳವಡಿಸಿದ ವಾಹನಗಳ ವಿರುದ್ಧ ತೀವ್ರ ತೀರಿಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಅಲ್ಲದೇ ದಿನಾಂಕ 16-03-2022ರೊಳಗಾಗಿ ಸಂಬಂಧಿಸಿದಂತ ಮಾಹಿತಿಯನ್ನು ಸಲ್ಲಿಸೋದಕ್ಕೆ ಸೂಚಿಸಿದೆ. ಹೀಗಾಗಿ ವಾಹನ ಸವಾರರು ‘ನೋಂದಣಿ ಫಲಕ’ಗಳ ಮೇಲೆ ನಿಯಮಬಾಹಿರವಾಗಿ ‘ಸಂಘ-ಸಂಸ್ಥೆ ಹೆಸರು, ಚಿಹ್ನೆ, ಲಾಂಛನ’ ಹಾಕಿದ್ರೇ ಕೇಸ್ ಫಿಕ್ಸ್ ಆದಂತೆ ಆಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!