ರಷ್ಯಾ- ಉಕ್ರೇನ್ ಯುದ್ಧ ನಿಲ್ಲಲಿ ಎಂದು ದೇವರ ಮೊರೆಹೋದ ಭಕ್ತರು.
ತುಮಕೂರು_ಉಕ್ರೇನ್ ಮೇಲೆ ರಷ್ಯಾ ವ್ಯಾಪಕ ದಾಳಿ ನಡೆಸುತ್ತಿದ್ದು ಈ ಮೂಲಕ ಉಕ್ರೇನ್ ದೇಶದ ಮೇಲೆ ದೊಡ್ಡಮಟ್ಟದಲ್ಲಿ ಯುದ್ಧ ಸಾರಿದ್ದು ಈಗ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ನಿಲ್ಲಲಿ ಎಂದು ಭಕ್ತರೊಬ್ಬರು ದೇವರ ಮೊರೆ ಹೋಗಿದ್ದಾರೆ.
ಬುಧವಾರ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ ರಥೋತ್ಸವದಲ್ಲಿ ಪಾಲ್ಗೊಂಡ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಅಳಿಲುಘಟ್ಟದ ಭಕ್ತಾದಿ ಪರಮೇಶ ಎಂಬುವರು ಶೀಘ್ರ ಯುದ್ಧ ನಿಲ್ಲಲಿ ಎಂದು ದೇವರ ಮೊರೆ ಹೋಗಿದ್ದಾರೆ.
ವಾಡಿಕೆಯಂತೆ ಪ್ರತಿವರ್ಷವೂ ತುಮಕೂರಿನ ಸಿದ್ದಗಂಗಾ ಮಠದ ರಥೋತ್ಸವಕ್ಕೆ ಪಾಲ್ಗೊಳ್ಳುವ ಪರಮೇಶ್ ಅವರು ಈ ವರ್ಷವೂ ಸಹ ರಥೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಈ ಸಮಯದಲ್ಲಿ ಇಷ್ಟಾರ್ಥ ನೆರವೇರಿಸಲು ರಥಕ್ಕೆ ಬಾಳೆಹಣ್ಣು ದವನ ಎಸಿಯೋ ವಾಡಿಕೆ ಇದ್ದು ಅದರಂತೆ ಬಾಳೆಹಣ್ಣಿನ ಮೇಲೆ ಯುದ್ಧ ನಿಲ್ಲಲಿ ಎಂದು ಬರೆದು ರಥಕ್ಕೆ ಎಸೆಯುವ ಮೂಲಕ ಇಷ್ಟಾರ್ಥ ನೆರವೇರಲಿ ಎಂದು ದೇವರ ಮೊರೆ ಹೋಗಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಯುವಕ ಪರಮೇಶ್ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ನಿಲ್ಲಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದ್ದಾರೆ.
ವಿದ್ಯಾಭ್ಯಾಸಕ್ಕಾಗಿ ನಮ್ಮ ದೇಶದಿಂದ ಉಕ್ರೇನ್ ಗೆ ತೆರಲಿರುವ ವಿದ್ಯಾರ್ಥಿಗಳು ಕ್ಷೇಮವಾಗಿ ದೇಶಕ್ಕೆ ಹಿಂತಿರುಗುವಂತೆ ಆಗಲಿ ಇದಕ್ಕೆ ಸಂಬಂಧಿಸಿದಂತೆ ಎಲ್ಲರೂ ಸಹಕರಿಸಿ ಶ್ರೀಘ್ರದಲ್ಲೇ ಎಲ್ಲರೂ ದೇಶಕ್ಕೆ ಮರಳು ವಂತಾಗಲಿ ಎಂದಿದ್ದಾರೆ.
ಉಕ್ರೇನ್ ನಲ್ಲಿ ಅತಿ ಕಡಿಮೆ ಬೆಲೆಗೆ ವೈದ್ಯಕೀಯ ಶಿಕ್ಷಣ ದೊರಕುತ್ತಿದ್ದು ಅದರಂತೆ ನಮ್ಮ ದೇಶದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಹೋಗಿದ್ದಾರೆ ಆದರೆ ಇಂಥ ಸಮಯದಲ್ಲಿ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ ಹಾಗಾಗಿ ಯಾರಿಗೂ ತೊಂದರೆಯಾಗದಂತೆ ಎಲ್ಲರೂ ಕ್ಷೇಮವಾಗಿ ದೇಶಕ್ಕೆ ಹಿಂತಿರುಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ರುವುದಾಗಿ ತಿಳಿಸಿದ್ದಾರೆ.
ವರದಿ ಮಾರುತಿ ಪ್ರಸಾದ್ ತುಮಕೂರು