ಮಾರ್ಚ್ 4ರಂದು ಬಿಸಿಯೂಟ ತಯಾರಕರ ಫೆಡರೇಶನ್ ವತಿಯಿಂದ ಬೆಂಗಳೂರು ಚಲೋ.
ತುಮಕೂರು_ಬಿಸಿಯೂಟ ನೌಕರರ ಕಡಗಣನೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್ ವತಿಯಿಂದ ಮಾರ್ಚ್ 4 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತುಮಕೂರು ಜಿಲ್ಲಾ ಬಿಸಿಯೂಟ ತಯಾರಕರ ಫೆಡರೇಶನ್ ನ ಜಿಲ್ಲಾ ಸಂಚಾಲಕರಾದ ಕಾಂತರಾಜು ರವರು ತಿಳಿಸಿದ್ದಾರೆ.
2003 ನೇ ಇಸವಿಯಿಂದ ಇಲ್ಲಿಯವರೆಗೂ ಸತತ 19 ವರ್ಷಗಳಿಂದ ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಯಲ್ಲಿ ತೊಡಗಿರುವ ನೌಕರರನ್ನು ಸರ್ಕಾರ ಕಡೆಗಣಿಸುತ್ತಿದೆ. ಅಂದಿನಿಂದ ಇಲ್ಲಿಯವರೆಗೂ ₹200 ಹಾಗೂ 300 ರೂಗಳ ಗೌರವದೊಂದಿಗೆ ಕೆಲಸ ನಿರ್ವಹಿಸಲು ಶುರುಮಾಡಿದ ನೌಕರರಿಗೆ ಇದುವರೆಗೂ ಸರ್ಕಾರ ಕೇವಲ 2600 ಹಾಗೂ 2700 ರೂಗಳ ಸಂಬಳ ನೀಡಿ ಸರ್ಕಾರ ಕೆಲಸ ಮಾಡಿಸಿಕೊಳ್ಳುತ್ತಿದೆ.
ಆದರೆ ಸರ್ಕಾರದ ನಿಯಮದ ಪ್ರಕಾರ ನಿಗದಿಮಾಡಿರುವ ಕನಿಷ್ಠ ವೇತನಕ್ಕೆ ಆಗ್ರಹಿಸಿ ಇದುವರೆಗೂ ಹಲವು ಬಾರಿ ಮನವಿ ಮಾಡಿದರೂ ಸಹ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದ ಕಾರಣ ಮಾರ್ಚ್ 4 ರಂದು ಬೆಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಸರ್ಕಾರವೇ ನಿಗದಿಮಾಡಿರುವ ಕನಿಷ್ಠ ವೇತನವನ್ನು ಸರ್ಕಾರ ಇದುವರೆಗೂ ಕನಿಷ್ಠ ವೇತನ ನೀಡಲು ಮೀನಾಮೇಷ ಎಣಿಸುತ್ತಿದ್ದು ಇದರಿಂದ ಬಿಸಿಯೂಟ ನೌಕರರ ಕುಟುಂಬ ಸಂಕಷ್ಟದಲ್ಲಿದೆ. ಸರ್ಕಾರ ಇದುವರೆಗೂ ಇವರ ಸೇವೆ ಪರಿಗಣಿಸದೆ ಕಡೆಗಣಿಸಿ ಸರ್ಕಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದು ಇದು ಬಿಸಿಯೂಟ ತಯಾರಕರ ಕುಟುಂಬಗಳಿಗೆ ಮಾಡುತ್ತಿರುವ ಅವಮಾನ ಹಾಗಾಗಿ ಮಾರ್ಚ್ 4ರಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಫೆಡರೇಶನ್(ಎಐಟಿಯುಸಿ) ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸಿ ಬೆಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು .ಜಿಲ್ಲೆಯ ಎಲ್ಲಾ ಬಿಸಿಊಟ ತಯಾರಕರು ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತುಮಕೂರು ತಾಲ್ಲೂಕು ಅಧ್ಯಕ್ಷರಾದ ರಾಧಮ್ಮ, ಪುಷ್ಪಲತಾ, ಸಾವಿತ್ರಮ್ಮ,ಉಮಾದೇವಿ ಕೊರಟಿಕೆರೆ ,ಲಕ್ಷ್ಮಮ್ಮ, ನಳಿನ ಹಾಜರಿದ್ದರು.
ವರದಿ_ಮಾರುತಿ ಪ್ರಸಾದ್ ತುಮಕೂರು