ಅಸ್ಪೃಶ್ಯ ಜಾತಿಗಳು ಒಂದಾಗದಿದ್ದರೆ ಮುಂದಿನ ದಿನಗಳು ಮಾರಕ_ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ.
ತುಮಕೂರು_ದಲಿತ ಸಮುದಾಯಗಳಾದ ಎಡ-ಬಲ ಸಮುದಾಯಗಳು ಒಂದಾಗದಿದ್ದರೆ ಮುಂದಿನ ದಿನಗಳು ಕ್ಲಿಷ್ಟಕರ ದಿನಗಳಾಗಿ ಸಮುದಾಯಗಳನ್ನು ಕಾಡಲಿದೆ ಎಂದು ಆದಿಜಾಂಬವ ಬೃಹನಮಠದ ಸ್ವಾಮೀಜಿ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮಿ ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಎಡ-ಬಲ ಸಮುದಾಯಗಳ ಸಮನ್ವಯ ಸಮಿತಿಯ ವತಿಯಿಂದ ನಡೆದ ಎಡ-ಬಲ ಸಮುದಾಯಗಳ ಜಾಗೃತಿ ಸಮಾರಂಭದಲ್ಲಿ ಮಾತನಾಡಿದ ಅವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದಾಗಬೇಕು ಆಗ ಅವಕಾಶಗಳು ತಮ್ಮನ್ನ ಹುಡುಕಿ ಬರುವುದು ಈ ಮೂಲಕ ಅಸ್ಪೃಶ್ಯ ಸಮಾಜಗಳು ಇತರ ಸಮುದಾಯಗಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಎಡಬಲ ಸಮುದಾಯಗಳ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಪಿ.ಎನ್ ರಾಮಯ್ಯ ಮಾತನಾಡಿ ಶೋಷಿತ ಸಮುದಾಯಗಳಿಗೆ ಸಂವಿಧಾನವೇ ಆಧಾರ ಇಂದಿನ ದಿನದಲ್ಲಿ ಸಂವಿಧಾನ ಹಾಗೂ ಸಂವಿಧಾನದ ಬರೆದ ಮಹಾಪುರುಷರಿಗೆ ಅವಮಾನ ಮಾಡುತ್ತಿದ್ದಾರೆ ಹಾಗಾಗಿ ಇಂತಹ ಬೆಳವಣಿಗೆಗಳನ್ನು ತಡೆಯದೆ ಇದ್ದಲ್ಲಿ ಮುಂದಿನ ದಿನಗಳು ದಲಿತ ಸಮುದಾಯಗಳಿಗೆ ಮಾರಕವಾಗಲಿದೆ ಹಾಗಾಗಿ ಸಮುದಾಯಗಳನ್ನು ಒಟ್ಟುಗೂಡಿಸುವ ಸಲುವಾಗಿ ಕರ್ನಾಟಕ ರಾಜ್ಯ ಎಡ-ಬಲ ಸಮನ್ವಯ ಸಮಿತಿ ಮುಂದಾಗಲಿದೆ. ಪ್ರಥಮ ಬಾರಿಗೆ ತುಮಕೂರಿನಲ್ಲಿ ಸಮುದಾಯಗಳನ್ನು ಒಟ್ಟುಗೂಡಿಸುವ ಸಂಬಂಧ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಡ-ಬಲ ಸಮನ್ವಯ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಎನ್.ಕೆ ನಿಧಿ ಕುಮಾರ್ ಮಾತನಾಡಿ ಅಸ್ಪೃಶ್ಯ ಸಮುದಾಯಗಳ ಮೇಲೆ ಇಂದಿಗೂ ಸಹ ನಿರಂತರ ಶೋಷಣೆ ,ದೌರ್ಜನ್ಯಗಳು ನಡೆಯುತ್ತಿವೆ . ಸರ್ಕಾರಗಳ ವೈಫಲ್ಯದಿಂದ ಇಂತಹ ಬೆಳವಣಿಗೆಗಳು ನಡೆಯುತ್ತಿವೆ ಹಾಗಾಗಿ ಅಸ್ಪೃಶ್ಯ ಸಮುದಾಯಗಳು ಸಮಾನತೆ, ಮೀಸಲಾತಿಗಾಗಿ ಹೋರಾಟ ಮಾಡುವ ಸ್ಥಿತಿ ಮುಂದಾಗಿದೆ ರಾಜಕೀಯವಾಗಿ ನಮ್ಮ ಸಮುದಾಯದ ಮುಖಂಡರು ಇಂತಹ ಘಟನೆಗಳ ಬಗ್ಗೆ ಧ್ವನಿ ಎತ್ತಬೇಕು ಆಗಮಾತ್ರ ಸಮುದಾಯಗಳು ಮುಂದೆ ಬರಲು ಸಹಕಾರಿಯಾಗಲಿದೆ ಎಂದರು.
ರಾಜ್ಯ ಉಪಾಧ್ಯಕ್ಷರಾದ ನರಸಿಂಹಮೂರ್ತಿ ಮಾತನಾಡಿ 21ನೇ ಶತಮಾನದಲ್ಲೂ ಸಹ ಜಾತೀಯತೆ ,ಅಸ್ಪೃಶ್ಯತೆ ತಾಂಡವವಾಡುತ್ತಿದೆ ಹಾಗಾಗಿ ದಲಿತ ಸಮುದಾಯಗಳಾದ ಎಡ ಹಾಗೂ ಬಲ ಸಮುದಾಯಗಳು ಒಂದಾಗುವ ಅನಿವಾರ್ಯತೆ ಸೃಷ್ಟಿಯಾಗಿದೆ ಈಗಲೂ ಸಹ ಒಂದಾಗದಿದ್ದರೆ ಅಸ್ಪೃಶ್ಯ ಸಮುದಾಯಗಳು ಪರಕೆ ಹಾಗೂ ಮಡಕೆ ಹಿಡಿಯುವ ಸಂಪ್ರದಾಯ ಬರಲಿವೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಎಡ-ಬಲ ಸಮುದಾಯಗಳ ಸಮನ್ವಯ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಸಮಾರಂಭ ನಡೆಯಿತು.
ಇನ್ನು ಕಾರ್ಯಕ್ರಮದಲ್ಲಿ ಶಿವಮುನಿ ದೇಶಿಕೇಂದ್ರ ಸ್ವಾಮೀಜಿ, ಅಖಿಲ ಕರ್ನಾಟಕ ಡಾಕ್ಟರ್ ಜಿ ಪರಮೇಶ್ವರ್ ಯುವ ಸೈನ್ಯದ ರಾಜ್ಯಾಧ್ಯಕ್ಷ ನಗುತಾ ರಂಗನಾಥ್, ಪಿ.ಶಿವಾಜಿ, ಎಡ-ಬಲ ಸಮನ್ವಯ ಸಮಿತಿಯ ರಾಜ್ಯ ಗೌರವಾಧ್ಯಕ್ಷರಾದ ಗುರುಪ್ರಸಾದ್, ರಾಜ್ಯ ಉಪಾಧ್ಯಕ್ಷರಾದ ನರಸಿಂಹಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಸಿದ್ದಲಿಂಗಯ್ಯ, ರಾಜ್ಯ ನಿರ್ದೇಶಕರಾದ ರಜನಿಕಾಂತ್, ತುಮಕೂರು ಘಟಕದ ಜಿಲ್ಲಾಧ್ಯಕ್ಷರಾದ ನರಸಿಂಹರಾಜು, ಜಿಲ್ಲಾ ಗೌರವಾಧ್ಯಕ್ಷರಾದ ನರಸಿಯಪ್ಪ, ಲಕ್ಷ್ಮೀನಾರಾಯಣ್, ರಾಜೇಶ್, ಮಾರುತಿ, ಶಿವರಾಜು ಕುಚ್ಚಂಗಿ, ಸಿದ್ದಲಿಂಗಯ್ಯ, ಗಂಗಾಧರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ವರದಿ_ಮಾರುತಿ ಪ್ರಸಾದ್ ತುಮಕೂರು