ಬೆಂಗಳೂರು_ ನೆಲಮಂಗಲ ಫ್ಲೈಓವರ್ ಸಂಚಾರ ಆರಂಭ.
ತುಮಕೂರು_ಬೆಂಗಳೂರು ಹಾಗೂ ನೆಲಮಂಗಲದ ಮಾರ್ಗದ ಫ್ಲೈಓವರ್ ನಲ್ಲಿ ಕಳೆದ ಎರಡು ತಿಂಗಳ ಹಿಂದೆ ಬಿರುಕು ಕಾಣಿಸಿಕೊಂಡಿದ್ದು ಅದರ ಪರಿಣಾಮ ಫ್ಲೈಓವರ್ ದುರಸ್ತಿಗಾಗಿ ಮುಚ್ಚಿತ್ತು.
ಈಗ ಫ್ಲೈಓವರ್ ದುರಸ್ತಿ ಕಾರ್ಯ ಮುಗಿದಿದ್ದು ಈಗ ಸಾರ್ವಜನಿಕರಿಗೆ ಸಂಚಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಾರ್ವಜನಿಕರ ಅನುಕೂಲಕ್ಕೆ ಮುಕ್ತಗೊಳಿಸಿದ್ದು ಕಳೆದ ಎರಡು ತಿಂಗಳಿನಿಂದ ತುಮಕೂರು-ಬೆಂಗಳೂರು ಸಂಚರಿಸುವ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಉಂಟಾಗಿತ್ತು.
ಇನ್ನೂ ಬೆಂಗಳೂರಿಗೆ ಸಂಪರ್ಕಿಸುವ ಹಲವು ಜಿಲ್ಲೆಯ ಪ್ರಯಾಣಿಕರಿಗೂ ಸಹ ಫ್ಲೈಓವರ್ ಮುಚ್ಚಿದ ಪರಿಣಾಮ ಸಾಕಷ್ಟು ತೊಂದರೆ ಉಂಟಾಗಿತ್ತು.
ಇನ್ನು ತುರ್ತು ಸಮಯದಲ್ಲಿ ರೋಗಿಗಳು ಬೆಂಗಳೂರು ತಲುಪಲು ಸಾಕಷ್ಟು ತೊಂದರೆ ಉಂಟಾಗುತ್ತಿದ್ದು ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಗಳು ತೀವ್ರ ಟ್ರಾಫಿಕ್ ದಟ್ಟಣೆಯಿಂದ ಸಿಲುಕಿಕೊಂಡು ರೋಗಿಗಳು ಸಹ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತೆರಳಲು ತೊಂದರೆ ಉಂಟಾಗುತ್ತಿತ್ತು .
ಇದನ್ನು ಗಮನಿಸಿದ ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕರಾದ ಮಂಜುನಾಥ್ ರವರು ನೆನ್ನೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಇಂದು ಅದರ ಬೆನ್ನಲ್ಲೇ ಭಾರಿ ಗಾತ್ರದ ವಾಹನಗಳನ್ನು ಹೊರತುಪಡಿಸಿ ದ್ವಿಚಕ್ರವಾಹನ, ಆಂಬುಲೆನ್ಸ್ ಸೇರಿದಂತೆ ಸಣ್ಣ ಟ್ರಕ್ಕುಗಳು, ಕಾರು ಸೇರಿದಂತೆ 10 ಮೀಟರ್ ಎತ್ತರದ ವಾಹನಗಳ ಸಂಚಾರಕ್ಕೆ ಮಿತಿಗೊಳಿಸಿ ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಇಂದು ಸಂಚಾರಕ್ಕೆ ಮುಕ್ತಗೊಳಿಸಿದೆ.
ವರದಿ _ಮಾರುತಿ ಪ್ರಸಾದ್ ತುಮಕೂರು