ಕರ್ನಾಟಕ ರಾಜ್ಯ ಶಾಂತಿ-ಸೌಹಾರ್ದತೆ ಭಾವೈಕ್ಯತೆಯ ಸಂಕೇತ _ಸಿದ್ದಗಂಗಾ ಶ್ರೀ.
ತುಮಕೂರು_ಕರ್ನಾಟಕ ರಾಜ್ಯ ಯಾವತ್ತೂ ಕೂಡ ಶಾಂತಿ ಸೌಹಾರ್ದತೆಗೆ ಹೆಸರುವಾಸಿ ಕುವೆಂಪು ಅವರ ಆಶಯದಂತೆ ಕರ್ನಾಟಕ ಯಾವತ್ತೂ ಕೂಡ ಸೌಹಾರ್ದತೆಗೆ ಹಾಗೂ ಭಾವೈಕ್ಯತೆಗೆ ಹೆಸರುವಾಸಿ ಎಂದು ತುಮಕೂರು ಸಿದ್ದಗಂಗಾ ಮಠದ ಸಿದ್ದಗಂಗಾ ಶ್ರೀಗಳು ತಿಳಿಸಿದ್ದಾರೆ.
ಭಾನುವಾರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಕರ್ನಾಟಕ ರಾಜ್ಯ ವಕ್ ಬೋರ್ಡ್ನ ರಾಜ್ಯಾಧ್ಯಕ್ಷ ಮೌಲಾನ ಶಫಿ ಸಾ_ಆಜಿ ರವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ನೀಡಿ.ಸಿದ್ದಗಂಗಾ ಶ್ರೀಗಳೊಂದಿಗೆ ರಾಜ್ಯದಲ್ಲಿ ಉಂಟಾಗಿರುವ ವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ವಕ್ಫ್ ಬೋರ್ಡ್ ನ ಅಧ್ಯಕ್ಷರೊಂದಿಗೆ ಬೇಟಿ ಬಳಿಕ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಸಿದ್ದಗಂಗಾ ಮಠದ ಸಿದ್ದಗಂಗಾ ಶ್ರೀಗಳು ರಾಜ್ಯದಲ್ಲಿ ಎಂದಿಗೂ ಕ್ಷುಲ್ಲಕ ವಾತಾವರಣ ಉಂಟಾಗಬಾರದು ನಾವೆಲ್ಲ ಸೇರಿ ಇದಕ್ಕೆ ಅಂತ್ಯ ಹಾಡಬೇಕು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಶಾಂತಿ ಕದಡಬಾರದು ಎಂದು ವಕ್ ಬೋರ್ಡ್ ನ ಅಧ್ಯಕ್ಷರು ತಿಳಿಸಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಶಾಂತಿ-ಸೌಹಾರ್ದತೆ ಭಾವೈಕ್ಯತೆಗೆ ಹೆಸರಾಗಿದ್ದು.ರಾಜ್ಯದಲ್ಲಿ ವಕ್ ಬೋರ್ಡಿನ ಅಧ್ಯಕ್ಷರು ಎಲ್ಲರೂ ಸೇರಿ ರಾಜ್ಯದಲ್ಲಿ ಉಂಟಾಗಿರುವ ಕೇಸರಿ ಹಾಗೂ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗೆ ಅಂತ್ಯ ಹಾಡಬೇಕು ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬಾರದು ಎಂದು ತಿಳಿಸಿದ್ದಾರೆ ಎಂದರು.
ಕರೋನ ಬಂದಾಗಿನಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುಂಠಿತ ಆಗಿದ್ದು ಈ ಸಮಯದಲ್ಲಿ ಕ್ಷುಲ್ಲಕ ವಿಚಾರಕ್ಕೆ ತರಗತಿ ಬಹಿಷ್ಕರಿಸಿ ದ್ವೇಷ , ಅಸೂಯೆ ಬೆಳೆಯುತ್ತಿರುವುದು ಒಳ್ಳೆಯ ಸಂಗತಿಯಲ್ಲ ಎಲ್ಲರೂ ಕೂಡ ಶೈಕ್ಷಣಿಕ ಅಭ್ಯಾಸದ ಕಡೆ ಗಮನ ಕೊಡಬೇಕು ಎಂದರು.
ಇನ್ನು ಹಿಜಾಬ್ ಮತ್ತು ಕೇಸರಿ ಶಾಲಿನ ವಿವಾದ ರಾಜ್ಯ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು ಎಲ್ಲರೂ ಕೂಡ ಕಾನೂನನ್ನು ಗೌರವಿಸಿ ಶಾಂತಿ ಕಾಪಾಡಬೇಕು ಎಂದ ಅವರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಪು ಏನೇ ಬಂದರೂ ಎಲ್ಲರೂ ಸ್ವೀಕರಿಸಬೇಕು, ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ನಾಯಕರು, ರಾಜಕೀಯ ಮುಖಂಡರೊಂದಿಗೆ ಈಗಾಗಲೇ ಚರ್ಚಿಸಿರುವುದಾಗಿ ವಖ್ ಬೋರ್ಡಿನ ಅಧ್ಯಕ್ಷರು ತಿಳಿಸಿದ್ದಾರೆ ಎಂದರು.
ಇನ್ನು ಧಾರ್ಮಿಕ ವಿಚಾರದಲ್ಲಿ ರಾಜಕೀಯ ಪಡೆಯುತ್ತಿರುವುದು ಒಳ್ಳೆಯ ಸಂಗತಿಯಲ್ಲ ಇಂಥ ವಿಚಾರದಲ್ಲಿ ರಾಜಕೀಯ ಬರಬಾರದು ಶಾಲೆಯ ನಿಯಮ ಎಲ್ಲರೂ ಪಾಲನೆ ಮಾಡಬೇಕು ಇದು ಹಿಂದಿನಿಂದಲೂ ಬಂದಿದೆ.
ಅಂತರಾಷ್ಟ್ರೀಯ ಮಟ್ಟದ ಚರ್ಚೆ ಆದರೂ ಸಹ ಯಾರು ಕೂಡ ಮತೀಯವಾಗಿ ತೆಗೆದುಕೊಳ್ಳಬಾರದು ಎಲ್ಲರೂ ಸಹ ಶಾಂತಿಯನ್ನು ಕಾಪಾಡಿ ಕಾನೂನನ್ನು ಗೌರವಿಸಬೇಕು ಎಂದು ತಿಳಿಸಿದ್ದಾರೆ.
ವರದಿ _ಮಾರುತಿ ಪ್ರಸಾದ್ ತುಮಕೂರು