ಸೌಹಾರ್ದತೆಗೆ ದಕ್ಕೆ ತಂದವರ ಮೇಲೆ ಸರ್ಕಾರ ಕ್ರಮ ವಹಿಸಲಿದೆ_ರಾಜ್ಯ ವಾಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಆಜಾದಿ .
ತುಮಕೂರು_ ಕರ್ನಾಟಕ ರಾಜ್ಯ ಸೌಹಾರ್ದತೆ ಮತ್ತೊಂದು ಹೆಸರು ಅಂತಹ ಸೌಹಾರ್ದತೆಗೆ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು ಎಂದು ಕರ್ನಾಟಕ ರಾಜ್ಯ ವರ್ಕ್ ಬೋರ್ಡ್ ರಾಜ್ಯಾಧ್ಯಕ್ಷ ಮೌಲಾನ ಮಹಮ್ಮದ್ ಶಫಿ ಆಜಾದಿ ತಿಳಿಸಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಅವರು ಸಿದ್ದಗಂಗಾ ಶ್ರೀಗಳೊಂದಿಗೆ ಸುದೀರ್ಘವಾಗಿ ಹಿಜಾಬ್ ಹಾಗೂ ಕೇಸರಿ ಶಾಲಿನ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.
ಭೇಟಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕರ್ನಾಟಕದ ಸೌಹಾರ್ದತೆಗೆ ತುಮಕೂರಿನ ಸಿದ್ದಗಂಗಾ ಮಠ ಪ್ರಸಿದ್ಧ. ಪ್ರಥಮಬಾರಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದೇನೆ.
ಇನ್ನು ಹಿಜಾಬ್ ವಿಚಾರವಾಗಿ ಸೌಹಾರ್ದತೆಗೆ ಕಮ್ಯುನಲ್ ಕ್ಲಾಸ್ಗೆ ಎಡೆಮಾಡಿಕೊಟ್ಟಿರುವ ಸಂದರ್ಭದಲ್ಲಿ ನಾವಿದ್ದು ಮುಸ್ಲಿಂ ಧಾರ್ಮಿಕ ನಾಯಕರೆಲ್ಲ ಹಲವಾರು ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆ.
ಸಹೋದರ ಧರ್ಮೀಯ ಸ್ವಾಮೀಜಿಯವರೊಂದಿಗೆ ಇಂದಿನ ಸ್ಥಿತಿ ಗತಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಮುಂಚೆ ನಮ್ಮ ಕರ್ನಾಟಕ ಯಾವ ರೀತಿಯ ಸೌಹಾರ್ದಯುತವಾಗಿ ಇತ್ತು ಅದೇ ರೀತಿಯಲ್ಲಿ ಮುಂದುವರಿಯಬೇಕು ಅದಕ್ಕೆ ಧಕ್ಕೆ ಬರಬಾರದು ಸೌಹಾರ್ದ ಹಾಗೂ ಸಾಮರಸ್ಯವನ್ನು ಹಾಳುಮಾಡುವ ವ್ಯಕ್ತಿಗಳನ್ನು ನಾವೆಲ್ಲರೂ ಸೇರಿ ಮಟ್ಟಹಾಕಬೇಕು.
ಕರ್ನಾಟಕ ಕರ್ನಾಟಕವಾಗಿಯೇ ಉಳಿಯಬೇಕು ಹಿಜಾಬ್ ವಿಚಾರ ಬಂದಾಗಿನಿಂದಲೂ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದು ಕೋಮುಗಲಭೆಗೆ ತಿರುಗುವ ವಾತಾವರಣ ನಿರ್ಮಾಣವಾಗುತ್ತಿದೆ.
ಹೀಗಾಗಿ ಸಿದ್ದಗಂಗಾ ಶ್ರೀಗಳ ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದೇನೆ ಸ್ವಾಮೀಜಿಯವರು ಯಾವ ಹಂತದಲ್ಲೂ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಮಸ್ಯೆಯಾಗದಂತೆ ಹೋಗಬೇಕು .ಸದ್ಯ ಪ್ರಕರಣ ನ್ಯಾಯಾಲಯದಲ್ಲಿದ್ದು ತೀರ್ಪು ಬರಲಿ ಅಂತ ಸಿದ್ದಗಂಗಾ ಶ್ರೀಗಳು ಹೇಳಿದ್ದಾರೆ ಎಂದರು.
ಹಿಜಾಬ್ ವಿಚಾರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು ಯಾರು ಮಾಡಿದ್ದಾರೆ ಗೊತ್ತಿಲ್ಲ. ಭಾರತದಲ್ಲಿ ಸಂವಿಧಾನಬದ್ಧವಾಗಿ ಅವರ ಧರ್ಮ ಪಾಲಿಸುವ ಸಂವಿಧಾನ ಇದೆ .ಶರಿಯತ್ ಗೆ ಅದು ಕೂಡ ತುಂಬಾ ಅಗತ್ಯ. ಕರ್ನಾಟಕದ ಮುಸ್ಲಿಂ ಜನರು ಆತಂಕದಲ್ಲಿದ್ದಾರೆ .
ಹೀಗಾಗಿ ಇದನ್ನು ಸೌಹಾರ್ದಯುತವಾಗಿ ಮುಗಿಸಬೇಕು ಯಾವತ್ತೂ ಧರ್ಮ ಹಾಗೂ ಸಂವಿಧಾನದ ವಿಚಾರವಾಗಿ ಟುಗ್ ಆಫ್ ವಾರ್ ಆಗಿಲ್ಲ. ಸಂವಿಧಾನ ಮತ್ತು ಧಾರ್ಮಿಕ ಸ್ವಾತಂತ್ರ ಸುಗಮವಾಗಿ ಹೋಗಿದೆ . ಕೋರ್ಟ್ ತೀರ್ಪಿಗೆ ನಾವು ಗೌರವ ಕೊಡಬೇಕು.
ತೀರ್ಪು ಏನು ಬರುತ್ತೆ ನೋಡಬೇಕು, ಶಿರವಸ್ತ್ರ ಎಂಬುದು ಸಮವಸ್ತ್ರ ಅಲ್ಲ ಷರತ್ತಿಗೆ ಒಳಪಟ್ಟು ಹುಡುಗಿಯು ಹೊರಗಡೆ ಹೋಗುವಾಗ ಶಿರವಸ್ತ್ರ ಧರಿಸಿ ಹೋಗಬೇಕು ಅನ್ನೋ .ಹೀಗಾಗಿ ಮುಂದೆ ಏನು ಮಾಡಬೇಕು ಅಂತ ಕಾನೂನು ತಜ್ಞರ ಜೊತೆ ಚರ್ಚೆ ಮಾಡುವುದಾಗಿ ತಿಳಿಸಿದ ಅವರು .
ಕೋರ್ಟ್ ತೀರ್ಪು ಸೌಹಾರ್ದಯುತವಾಗಿ ಬರುವ ನಿರೀಕ್ಷೆ ಇದೆ ಯಾರೇ ಸೌಹಾರ್ದತೆಗೆ ದಕ್ಕೆ ಮಾಡಿದರೆ ನಾವು ಒಪ್ಪಲ್ಲ . ಕೇಸರಿ ಶಾಲು ಹಿಂದೂಧರ್ಮದಲ್ಲಿ ಇದ್ದರೆ ಯಾರೂ ವಿರೋಧ ಮಾಡೋಕೆ ಆಗಲ್ಲ.
ಕೇಸರಿ ಶಾಲನ್ನು ಯಾರೂ ವಿರೋಧಿಸಿಲ್ಲ ಹಿಜಾಬ್ ಹಾಕುವುದು ಶರಿಯತ್ ನಲ್ಲಿ ಇದೆ ಹೀಗಾಗಿ ಅವಕಾಶ ಬೇಕು ಎಂದರು.
ಇನ್ನು ಪಾಕಿಸ್ತಾನದ ಸಂಸತ್ನಲ್ಲಿ ನಮ್ಮ ದೇಶದ ವಿಚಾರವಾಗಿ ಚರ್ಚೆ ನಡೆಯುತ್ತಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಮೊದಲು ಇಮ್ರಾನ್ ಖಾನ್ ಪಾಕಿಸ್ತಾನದ ಬಗ್ಗೆ ನೋಡಿಕೊಳ್ಳಲಿ.ಅಲ್ಲಿ ಕ್ಲಿಷ್ಟಕರ ವಾತಾವರಣ ಇದೆ ಅದನ್ನು ಅವರು ನೋಡಿಕೊಳ್ಳಲಿ ನಮ್ಮ ದೇಶದ ಸಮಸ್ಯೆಯನ್ನು ನಾವು ನೋಡಿಕೊಳ್ಳುತ್ತೇವೆ .
ನಮ್ಮ ಸಮುದಾಯದಲ್ಲಿ ಕೆಲ ಕಿಡಿಗೇಡಿಗಳು ಇದ್ದಾರೆ.ಕೆಲ ಕಿಡಿಗೇಡಿಗಳು ಕೆಟ್ಟ ಕೆಲಸ ಮಾಡಿದ್ದಾರೆ ಅಂತ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ತರಬಾರದು.
ಇನ್ನು ಉಡುಪಿಯಲ್ಲಿ ಮುಗಿಸಬೇಕಾದ ವಿಚಾರ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿದೆ ಈ ಬಗ್ಗೆ ಯಾರು ಮಾಡಿದರು ಅನ್ನೋ ಸಂಶಯ ನಮಗೂ ಇದೆ.ಒಂದು ಚಿಕ್ಕ ಸಮಸ್ಯೆ ಇವತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಈ ಬಗ್ಗೆ ನಮಗೂ ಸಹ ಆತಂಕ ಇದ್ದು .
ಸೌಹಾರ್ದತೆಗೆ ಧಕ್ಕೆ ಉಂಟು ಮಾಡಿದವರ ಬಗ್ಗೆ ಸರ್ಕಾರ ಕ್ರಮ ವಹಿಸಲಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮಹಮ್ಮದ್ ಶಫಿ ಆಜಾದಿ ತಿಳಿಸಿದ್ದಾರೆ.