ಲೋಕಸಭೆ: ಕೇರಳ ಕುರಿತ ಯೋಗಿ ಆದಿತ್ಯನಾಥ ಹೇಳಿಕೆ ಖಂಡಿಸಿ ವಿಪಕ್ಷ ನಾಯಕರ ಸಭಾತ್ಯಾಗ

ಲೋಕಸಭೆ: ಕೇರಳ ಕುರಿತ ಯೋಗಿ ಆದಿತ್ಯನಾಥ ಹೇಳಿಕೆ ಖಂಡಿಸಿ ವಿಪಕ್ಷ ನಾಯಕರ ಸಭಾತ್ಯಾಗ

ನವದೆಹಲಿ: ಉತ್ತರ ಪ್ರದೇಶವು ಕೇರಳ, ಪಶ್ಚಿಮ ಬಂಗಾಳ ಅಥವಾ ಕಾಶ್ಮೀರದಂತೆ ಆಗುವುದು ಬೇಡ ಎಂದಿದ್ದರೆ ಬಿಜೆಪಿಗೆ ಮತ ಹಾಕಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದನ್ನು ಖಂಡಿಸಿ ವಿರೋಧ ಪಕ್ಷಗಳು ಲೋಕಸಭೆಯಿಂದ ಸಭಾತ್ಯಾಗ ಮಾಡಿದವು. ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್‌, ಟಿಎಂಸಿ, ನ್ಯಾಷನಲ್‌ ಕಾನ್ಫರೆನ್ಸ್‌ ಸಂಸದರು ಸ್ಪೀಕರ್‌ ಪೀಠದ ಮುಂದೆ ಪ್ರತಿಭಟನೆ ನಡೆಸಿದರು.

 

ಆದಿತ್ಯನಾಥ ಹೇಳಿಕೆಯನ್ನು ಖಂಡಿಸಿ ಕೇರಳ ಕಾಂಗ್ರೆಸ್‌ ಸಂಸದರು ನಿರ್ಣಯವನ್ನೂ ಮಂಡಿಸಿದ್ದಾರೆ.

 

ಪ್ರಶ್ನಾ ವೇಳೆಯ ಬಳಿಕ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಲಾಗುವುದು ಎಂದು ಸ್ಪೀಕರ್‌ ಓಂ ಬಿರ್ಲಾ ಭರವಸೆ ಕೊಟ್ಟರು. ಸದಸ್ಯರು ತಮ್ಮ ತಮ್ಮ ಆಸನಗಳಿಗೆ ತೆರಳುವಂತೆ ಮನವಿ ಮಾಡಿದರು.

 

ಆದರೆ, ಕಾಂಗ್ರೆಸ್‌, ಟಿಎಂಸಿ, ಕೇರಳ ಕಾಂಗ್ರೆಸ್‌, ನ್ಯಾಷನಲ್‌ ಕಾನ್ಫರೆನ್ಸ್‌, ಡಿಎಂಕೆ ಮತ್ತು ಎಸ್‌ಪಿ ಸಂಸದರು ಸಭಾತ್ಯಾಗ ಮಾಡಿದರು. ಮುಖ್ಯಮಂತ್ರಿಯ ಹೇಳಿಕೆಯು ಖಂಡನಾರ್ಹ ಎಂದು ಕಾಂಗ್ರೆಸ್‌ ಮುಖಂಡ ಅಧಿರ್‌ ರಂಜನ್‌ ಚೌಧರಿ ಹೇಳಿದ್ದಾರೆ.

Leave a Reply

Your email address will not be published. Required fields are marked *