ಬಸ್ ಚಲಾಯಿಸುವ ವೇಳೆ ಮೊಬೈಲ್ನಲ್ಲಿ ವೀಡಿಯೋ ನೋಡುತ್ತಾ ಬಸ್ ಚಲಾಯಿಸಿದ ಡ್ರೈವರ್ ವಿಡಿಯೋ ವೈರಲ್.
ತುಮಕೂರು_ರಾಜ್ಯ ಸರ್ಕಾರದ ಅಧಿಕೃತ ಸಾರಿಗೆ ಸಂಸ್ಥೆಯಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಈಶಾನ್ಯ ಕರ್ನಾಟಕ ವಾಯುವ್ಯ ನಿಗಮ ಪ್ರಯಾಣಿಕರಿಗೆ ಸುರಕ್ಷತೆಯಿಂದ ಕೂಡಿದೆ ಎಂದು ಪ್ರಯಾಣಿಕರು ಸರ್ಕಾರಿ ಬಸ್ಸನ್ನ ಅವಲಂಬಿಸುತ್ತಿದ್ದಾರೆ.
ಇಂದಿನ ದಿನದಲ್ಲಿ ಸರ್ಕಾರಿ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಹತ್ತಿರವಾಗುವ ಮೂಲಕ ಉತ್ತಮ ಸೇವೆ ನೀಡುತ್ತಿದೆ.
ಆದರೆ ಕೆಲ ಬಸ್ಸಿನ ಡ್ರೈವರ್ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಕಾರಣ ದಿನಾಂಕ 27/1/2022 ಬೆಂಗಳೂರಿನಿಂದ ಹಾನಗಲ್ ಗೆ ತೆರಳುತ್ತಿದ್ದ KA 27F0777 ಬಸ್ಸು ತುಮಕೂರಿನಿಂದ ಶಿರಾ ಮಾರ್ಗವಾಗಿ ಹಾನಗಲ್ ಗೆ ತೆರಳುತ್ತಿದ್ದ ವೇಳೆ ಬಸ್ ಚಲಾಯಿಸುವ ಡ್ರೈವರ್ ಒಬ್ಬ ಮೊಬೈಲ್ ಬಳಕೆ ಮಾಡುತ್ತಾ ಮೊಬೈಲ್ನಲ್ಲಿ ವಿಡಿಯೋಗಳನ್ನು ನೋಡುತ್ತಾ ಕಿಲೋಮೀಟರ್ ಗಟ್ಟಲೆ ವಾಹನ ಚಲಾಯಿಸಿದ್ದು ಕಂಡುಬಂದಿದ್ದು .
ಬಸ್ಸಿನ ಪ್ರಯಾಣಿಕರೊಬ್ಬರು ಡ್ರೈವರ್ ಮೊಬೈಲ್ ಬಳಕೆ ಮಾಡುತ್ತಿದ್ದಾರೆ ದೃಶ್ಯವನ್ನು ಸೆರೆಹಿಡಿದಿದ್ದು ಈಗ ವಿಡಿಯೋ ವೈರಲ್ ಆಗಿದ್ದು ಸಾಕಷ್ಟು ಪ್ರಯಾಣಿಕರ ಆಕ್ರೋಶಕ್ಕೆ ಎಡೆಮಾಡಿದೆ.
ಇನ್ನು ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಶಿರಾದ ಪ್ರಯಾಣಿಕರೊಬ್ಬರು ಬಸ್ನ ಡ್ರೈವರ್ ನ ಜವಾಬ್ದಾರಿ ಎಚ್ಚರಿಕೆಯಿಂದ ಬಸ್ಸನ್ನ ಚಲಾಯಿಸುವುದು ಚಾಲಕನ ಜವಾಬ್ದಾರಿ ಆದರೆ ಇಂತಹ ಚಾಲಕರಿಂದ ಇಡೀ ಸಾರಿಗೆ ಸಂಸ್ಥೆಗೆ ಕೆಟ್ಟಹೆಸರು ಬರುವುದರ ಜೊತೆಗೆ ಪ್ರಯಾಣಿಕರಿಗೂ ಸಹ ಭಯ ಉಂಟುಮಾಡುತ್ತವೆ.
ಆದ್ದರಿಂದ ಕೂಡಲೇ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಇಂತಹ ಘಟನೆಗಳಿಗೆ ಆಸ್ಪದ ಕೊಡದೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡುವ ಮೂಲಕ ಪ್ರಯಾಣಿಕರ ರಕ್ಷಣೆಗೆ ಮುಂದಾಗಬೇಕು ಎಂದು ಪ್ರಯಾಣಿಕ ಮಹಾದೇವಯ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ವರದಿ _ಮಾರುತಿ ಪ್ರಸಾದ್ ತುಮಕೂರು