ವಾಹನ ಸವಾರನ ಮೇಲೆ ಪೊಲೀಸಪ್ಪನಿಂದ ಹಲ್ಲೆ ಆರೋಪ.
ತುಮಕೂರು_ತುಮಕೂರಿನ ಬಿಎಸ್ಎನ್ಎಲ್ ಕಚೇರಿ ಮುಂದೆ ಮಂಗಳವಾರ ಸಂಜೆ 4 ಗಂಟೆ ವೇಳೆಯಲ್ಲಿ ತುಮಕೂರಿನ ರವಿ ಎಂಬ ಯುವಕ ತನ್ನ ಸ್ನೇಹಿತನ ಜೊತೆಯಲ್ಲಿ ಹೋಟೆಲ್ಗೆ ತೆರಳುತ್ತಿದ್ದರು ಇದೇ ಸಂದರ್ಭದಲ್ಲಿ ಯುವಕರು ಡಿಯೋ ( Ka 06 H L0422)ಗಾಡಿಯಲ್ಲಿ ತೆರಳುವ ವೇಳೆ ಹೆಲ್ಮೆಟ್ ಹಾಕದೆ ವಾಹನದಲ್ಲಿ ತೆರಳುತ್ತಿದ್ದರು.
ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸ್ ಪೇದೆ ಏಕಾಏಕಿ ವಾಹನಕ್ಕೆ ಅಡ್ಡ ಬಂದು ಗಾಡಿಯನ್ನು ಹಿಡಿದು ಎಳೆದ ಕಾರಣ ಯುವಕರು ರಸ್ತೆಯಲ್ಲಿ ಬಿದ್ದ ನಂತರ ಟ್ರಾಫಿಕ್ ಪೇದೆಯೊಬ್ಬರು ರವಿ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಯುವಕ ರವಿ ಪೊಲೀಸರು ಏಕಾಏಕಿ ಗಾಡಿಗೆ ಆಟ ಬಂದು ಹಿಡಿದು ಎಳೆದು ಏನೂ ತಿಳಿಸದೆ ನನ್ನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ ಇನ್ನು ಹೆಲ್ಮೆಟ್ ಹಾಕದಿದ್ದರೆ ದಂಡ ವಿಧಿಸಬಹುದು ಇತ್ತು ಆದರೆ ನನ್ನ ಮೇಲೆ ಏಕೆ ಏಕೆ ಹಲ್ಲೆ ಮಾಡಿದ್ದು ಕುತ್ತಿಗೆ ಹಾಗೂ ಕಾಲಿನ ಭಾಗಕ್ಕೆ ಸಣ್ಣ ಪ್ರಮಾಣದ ಗಾಯವಾಗಿದ್ದು ಪೊಲೀಸರು ವಾಹನ ಸವಾರರ ಮೇಲೆ ಹಲ್ಲೆ ಮಾಡಿರುವುದು ಎಷ್ಟು ಸರಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ಸಂದರ್ಭದಲ್ಲಿ ಹಾಜರಿದ್ದ ಸಾರ್ವಜನಿಕರು ಸಹ ಟ್ರಾಫಿಕ್ ಪೊಲೀಸ್ ಪೇದೆಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದು ಯುವಕರ ಮೇಲೆ ಹಲ್ಲೆ ಮಾಡಿರುವುದು ನಿಜಕ್ಕೂ ಖಂಡನೀಯ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.