ಕಾರು ತೆಗೆದುಕೊಳ್ಳಲು ಬಂದ ಗ್ರಾಹಕನಿಗೆ ಅವಮಾನಿಸಿದ ಸಿಬ್ಬಂದಿ ಗಂಟೆಯಲ್ಲೇ ಲಕ್ಷಾಂತರ ದುಡ್ಡು ತಂದು ಕಾರು ನೀಡುವಂತೆ ಪಟ್ಟು ಹಿಡಿದ ಗ್ರಾಹಕ.
ತುಮಕೂರು_ಪ್ರತಿಯೊಬ್ಬ ಮನುಷ್ಯನಿಗೂ ತಾವು ಸುಖೀ ಜೀವನ ನಡೆಸಲು ಒಂದು ಮನೆ, ಒಂದು ಕಾರು, ಪುಟ್ಟ ಸಂಸಾರ ದೊಂದಿಗೆ ಜೀವನ ನಡೆಸುವ ಆಸೆಯನ್ನ ಪ್ರತಿಯೊಬ್ಬರು ಕಾಣುತ್ತಾರೆ.
ಅದರಂತೆ ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ರಾಮನ ಪಾಳ್ಯದ ಕೆಂಪೇಗೌಡ ಎನ್ನುವ ಯುವಕನೊಬ್ಬ ತುಮಕೂರಿನ ಮಹೇಂದ್ರ ಕಾರ್ ಶೋರೂಮ್ ಗೆ ಕಾರು ತೆಗೆದುಕೊಳ್ಳಲು ಬರುತ್ತಾನೆ ಆದರೆ ಯುವಕನ ವೇಷಭೂಷಣ ನೋಡಿ ಶೋರೂಂನಲ್ಲಿ ಕೆಲಸ ಮಾಡುವ ಸೇಲ್ಸ್ ಏಜೆಂಟ್ ಒಬ್ಬನು ಗ್ರಾಹಕರಾದ ಕೆಂಪೇಗೌಡನಿಗೆ ಹತ್ತು ರೂಪಾಯಿ ದುಡ್ಡು ಕೊಡುವ ಯೋಗ್ಯತೆ ಇಲ್ಲ ಕಾರು ತೆಗೆದುಕೊಳ್ಳಲು ಬಂದಿದೆಯೆಂದು ಗುರುವಾರ ಸಂಜೆ 6ಗಂಟೆ ವೇಳೆಯಲಿ ಅವಮಾನಿಸುತ್ತಾನೆ .
ಅರೆರೆ ………ಇದೇನಿದು ……ಈ ಸುದ್ದಿ ದಿಗ್ಗಜರು ಚಿತ್ರದ ಹಾಗೆ ಇದೆಯಲ್ಲ ಎಂದು ಅಂದುಕೊಳ್ಳಬೇಡಿ ಈ ಘಟನೆ ತುಮಕೂರಿನಲ್ಲಿ ವರದಿಯಾಗಿದೆ .
ಇನ್ನು ಕಾರ್ ಶೋರೂಮ್ ನ ಸೇಲ್ಸ್ ಏಜೆಂಟ್ ಒಬ್ಬ ಅವಮಾನಿಸಿದ ಅದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಕೆಂಪೇಗೌಡ ಹಾಗೂ ಆತನ ಸ್ನೇಹಿತರು ಒಂದು ಗಂಟೆಯಲ್ಲಿ ದುಡ್ಡು ತರುವೆ ಕಾರನ್ನು ನೀಡುವೆಯಾ ಎಂದು ಕಡ್ಡಿ ಮುರಿದ ಹಾಗೆ ಕೇಳುತ್ತಾರೆ ಇದಕ್ಕೆ ಒಪ್ಪಿದ ಶೋರೂಮ್ ಕೆಲಸಗಾರನ ಮೊದಲು ದುಡ್ಡು ತನ್ನಿ ಇಂದೆ ಕಾರು ನೀಡುವೆ ಎಂದು ಮಾತು ನೀಡುತ್ತಾನೆ ಇದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಕೆಂಪೇಗೌಡ ಒಂದು ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ದುಡ್ಡು ಹೊಂದಿಸಿಕೊಂಡು 7:00 ವೇಳೆಯಲ್ಲಿ ಬರುತ್ತಾನೆ.
ನಂತರ ಗ್ರಾಹಕ ಕೆಂಪೇಗೌಡ ಕಾರು ನೀಡುವಂತೆ ಪಟ್ಟು ಹಿಡಿಯುತ್ತಾನೆ ಆದರೆ ಇಲ್ಲಸಲ್ಲದ ಸಬೂಬುಗಳನ್ನು ಶೋರೂಮ್ ಕೆಲಸಗಾರರು ಹೇಳಿ ಮುಂದಿನ ಎರಡು ಮೂರು ದಿನದಲ್ಲಿ ಕಾರು ನೀಡುತ್ತೇವೆ ಎಂದು ಹೇಳುತ್ತಾರೆ ಆದರೆ ತಮ್ಮನ ಅವಮಾನಿಸುವ ಮುಂಚೆ ಇದರ ಅರಿವು ತಮಗೆ ಇರಬೇಕಾಗಿತ್ತು ಆದರೆ ನಾನು ಒಂದು ಗಂಟೆಯಲ್ಲಿ 10 ಲಕ್ಷ ರೂಪಾಯಿಗಳನ್ನು ತಂದಿದ್ದೇನೆ ನನಗೆ ಈಗ ಕಾರು ಕೊಡಿ ಎಂದು ಗ್ರಾಹಕ ಕೆಂಪೇಗೌಡ ಹಾಗೂ ಸ್ನೇಹಿತರು ಶೋರೂಂನಲ್ಲಿ ಶುಕ್ರವಾರ ರಾತ್ರಿ ಶೋರೂಮ್ ನವರೊಂದಿಗೆ ವಾಗ್ವಾದ ನಡೆಸುತ್ತಾರೆ ಆದರೆ ಇಲ್ಲಸಲ್ಲದ ಸಬೂಬುಗಳನ್ನು ಹೇಳುತ್ತಾ ಶೋರೂಮ್ ನವರು ಕಾರು ನೀಡಲು ನಿರಾಕರಿಸುತ್ತಾರೆ.
ಆದರೆ ಪಟ್ಟು ಬಿಡದ ಗ್ರಾಹಕ ಹಾಗೂ ಶೋರೂಮ್ ನವರು ಇಬ್ಬರು ಸಹ ಶುಕ್ರವಾರ ರಾತ್ರಿ 10:30 ರವರೆಗೂ ಚರ್ಚೆ ನಡೆಸುತ್ತಾರೆ ಆದರೆ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರದ ಕಾರಣ ಕೊನೆಗೆ ಗ್ರಾಹಕ ಹಾಗೂ ಶೋರೂಮ್ ನವರು ಪೊಲೀಸ್ ಠಾಣೆ ಮೆಟ್ಟಿಲು ಎರುವಂತಾಯಿತು.
ನಂತರ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ಇಬ್ಬರನ್ನು ಕರೆದುಕೊಂಡು ಹೋದ ಪೊಲೀಸರು ರಾಜಿಯನ್ನು ಮಾಡಿಸಲು ಮುಂದಾಗುತ್ತಾರೆ ಆದರೆ ಅದು ಕೂಡ ಫಲಪ್ರದವಾಗುವುದಿಲ್ಲ ನಂತರ ಶುಕ್ರವಾರ ಅವಮಾನಿಸಿದ ಸಿಬ್ಬಂದಿಯಿಂದ ಗ್ರಾಹಕನಿಗೆ ತಪ್ಪಾಯಿತು ಎಂದು ಮುಚ್ಚಳಿಕೆ ಬರೆಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಹಕ ಕೆಂಪೇಗೌಡ ನಾನು ಒಬ್ಬ ರೈತನ ಮಗನಾಗಿದ್ದು ನನ್ನ ಬಟ್ಟೆ ವೇಷಭೂಷಣ ನೋಡಿ ನನ್ನ ಅವಮಾನಿಸಿದ್ದಾರೆ ಹಾಗಾಗಿ ನಾನು ಅದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ್ದು ದುಡ್ಡು ತಂದ ನಂತರ ಶೋರೂಮ್ ನವರು ಇಲ್ಲಸಲ್ಲದ ಸಬೂಬುಗಳನ್ನು ಹೇಳಿ ನಮ್ಮನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಆದರೆ ನಂಗೆ ಅದ ಅವಮಾನ ಮುಂದಿನ ದಿನದಲ್ಲಿ ಇಂತಹ ಘಟನೆಗಳು ನಡೆಯಬಾರದು ಇನ್ನಾದರೂ ಗ್ರಾಹಕರೊಂದಿಗೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸಿ ಒಳ್ಳೆಯ ನಡತೆಯನ್ನು ರೂಪಿಸಿಕೊಳ್ಳಬೇಕು ರೈತರು ಅವರ ವೇಷ ಭೂಷಣ ನೋಡಿ ಮಣೆ ಹಾಕುವ ಬದಲು ಮೊದಲು ಒಳ್ಳೆಯ ಮನಸ್ಸಿನಿಂದ ಗ್ರಾಹಕರನ್ನು ನೋಡುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು ಎಂದು ಗ್ರಾಹಕ ಕೆಂಪೇಗೌಡ ತಿಳಿಸಿದ್ದಾರೆ.
ಅದೇನೇ ಇರಲಿ ಕಾರು ಕೊಳ್ಳಲು ಬಂದಾ ಗ್ರಾಹಕನಿಗೆ ಗ್ರಾಹಕನ ಬಟ್ಟೆಬರೆ ನೋಡಿ ಅವರನ್ನ ಅವಮಾನಿಸಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಆದರೂ ಗ್ರಾಹಕರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳುವ ಮನೋಭಾವವನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕಾಗಿದೆ ಈ ಮೂಲಕ ಗ್ರಾಹಕ ಕೆಂಪೇಗೌಡ ಅವಮಾನಿಸಿದ ಶೋರೂಮ್ ನವರಿಗೆ ತಕ್ಕ ಪಾಠವನ್ನು ಕಲಿಸಿದ್ದಾರೆ.
ವರದಿ _ಮಾರುತಿ ಪ್ರಸಾದ್