ಮನುಷ್ಯನಿಗೆ ಕ್ರೀಡೆ ಸ್ಪೂರ್ತಿದಾಯಕ ಗೊಳಿಸುವ ಚಟುವಟಿಕೆ -ಜೆ ಸಿ ಮಾಧುಸ್ವಾಮಿ.

ಮನುಷ್ಯನಿಗೆ ಕ್ರೀಡೆ ಸ್ಪೂರ್ತಿದಾಯಕ ಗೊಳಿಸುವ ಚಟುವಟಿಕೆ -ಜೆ ಸಿ ಮಾಧುಸ್ವಾಮಿ.

 ಉಸ್ತುವಾರಿ ಸಚಿವ ಮಾಧುಸ್ವಾಮಿ ಶಾರ್ಟ್ ಪುಟ್ಎಸೆಯುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಮನುಷ್ಯನ ಮನಸ್ಸಿನ ದುಗುಡವನ್ನು ಕಡಿಮೆ ಮಾಡಿ ಸ್ಪೂರ್ತಿದಾಯಕ ಗೊಳಿಸುವ ಚಟುವಟಿಕೆ ಎಂದರೆ ಕ್ರೀಡೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

 

ನಗರದ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತುಮಕೂರು ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ತುಮಕೂರು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಮಾಧುಸ್ವಾಮಿ ರವರು ಕ್ರೀಡೆ, ಸಂಗೀತ, ನಾಟಕ ಅಗತ್ಯವಾಗಿ ಬೇಕಾಗುತ್ತದೆ ಎಂದರು.

ಮನುಷ್ಯ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನಸ್ಸಿನಲ್ಲಿರುವ ದುಗುಡಗಳು ಕಡಿಮೆಯಾಗುವುದರ ಜೊತೆಗೆ ಮುಂಬರುವ ಸವಾಲುಗಳನ್ನು ಎದುರಿಸಲು ಹೊಸ ಹುರುಪು ದೊರೆತಂತಾಗುತ್ತದೆ. ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯ ಸರಕಾರಿ ನೌಕರರು ತಮ್ಮ ಇತಿಮಿತಿಯೊಳಗೆಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೊಸ ಮನಸ್ಸಿನೊಂದಿಗೆ ಕೆಲಸಕ್ಕೆ ಹಾಜರಾಗುವಂತೆ ಶುಭಹಾರೈಸಿದರು ಈ ಕ್ರೀಡೆಗಳ ಮೂಲಕವಾದರೂ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಕೆಲಸವಾಗಬೇಕೆಂದು ಆಶಯವನ್ನು ವ್ಯಕ್ತಪಡಿಸಿದರುನಾವೆಲ್ಲರೂ ಒಂದುರೀತಿಯ ಋಣದಲ್ಲಿಯೇ ಇದ್ದೇವೆ ಸರ್ಕಾರಿ ನೌಕರರ ವೇತನದ ಋಣದಲ್ಲಿ ಇದ್ದರೆ ಜನಪ್ರತಿನಿಧಿಗಳು ಮತದಾರರು ದೂರದಲ್ಲಿದ್ದೇವೆ ನಮಗೆ ಸಿಕ್ಕಿರುವ ಅವಕಾಶಗಳನ್ನು ಸಕಾಲಕ್ಕೆ ನಮ್ಮ ಜವಾಬ್ದಾರಿ ಅರಿತು ಕೆಲಸ ಮಾಡದಿದ್ದರೆ ನಾವು ದ್ರೋಹಿಗಳ ಆಗುತ್ತದೆ ಬೇಜವಾಬ್ದಾರಿತನ ಒಳ್ಳೆಯದಲ್ಲ ಪರಸ್ಪರ ಕಾಲೆಳೆಯುವ ಕಬಡ್ಡಿ ಆಟವನ್ನು ಬಿಟ್ಟು ಒಬ್ಬರಿಂದ ಮತ್ತೊಬ್ಬರಿಗೆ ಸಹಕಾರ ನೀಡುವ ಕ್ರೀಡಾ ಮನಸ್ಸು ನಿಮ್ಮದಾಗಲಿದೆ ಎಂದು ಸಚಿವ ಮಾಧುಸ್ವಾಮಿ ಮಾರ್ಮಿಕವಾಗಿ ನುಡಿದರು.

 

ಜಿಲ್ಲಾಧಿಕಾರಿ ಡಾಕ್ಟರ್ ಕೆ ರಾಕೇಶ್ ಕುಮಾರ್ ಮಾತನಾಡಿ ಕೋವಿಡ್ ಮಹಮರಿ ಸಂದರ್ಭದಲ್ಲಿ ಕರ್ನಾಟಕ ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸಿದ ರೀತಿ ನಿಜಕ್ಕೂ ಶ್ಲಾಘನೀಯ ಹಲವು ಉಪಚುನಾವಣೆಗಳು ಗ್ರಾಮಪಂಚಾಯತ್ ಚುನಾವಣೆಯನ್ನು ಯಾವುದೇ ಲೋಪ ಬರದಂತೆ ನಿರ್ವಹಿಸುವ ಮೂಲಕ ರಾಜ್ಯಗಳಿಗೆ ಮಾದರಿಯಾಗಿದೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ನಗರ ಶಾಸಕರಾದ ಜ್ಯೋತಿ ಗಣೇಶ್ ಮಾತನಾಡಿ ಕ್ರೀಡೆ ಮನುಷ್ಯನ ಎಲ್ಲಾ ತರಹದ ನೋವುಗಳಿಗೆ ವಿರಾಮ ನೀಡಲಿದೆ ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣ ಹೊಸದಾಗಿ ನಿರ್ಮಾಣ ಹಂತದಲ್ಲಿದ್ದು ಸ್ಮಾರ್ಟ್ ಸಿಟಿ ಇಂದ ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ಇದಾಗಲಿದೆ ಜಿಲ್ಲೆಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಅವರು ಸ್ವತಹ ಕ್ರೀಡಾಪಟು ಆಗಿರುವ ಹಿನ್ನೆಲೆಯಲ್ಲಿಕಳೆದ ಎರಡು ವರ್ಷಗಳಿಂದ ಸರ್ಕಾರಿ ನೌಕರರ ಕ್ರೀಡಾಕೂಟ ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದೆ ಮುಂದೆಯೂ ಇದೇ ರೀತಿ ಕ್ರೀಡಾಕೂಟಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು.

 

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶಾರದಾ ನರಸಿಂಹಮೂರ್ತಿ ,ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆಂಪ ಚೌಡಪ್ಪ ,ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ಡಾಕ್ಟರ್ ನಾಗೇಂದ್ರಪ್ಪ.ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ರಾಜ್ಯ ಸಮಿತಿ ಸದಸ್ಯ ಮಂಜುನಾಥ್ ಪರಶಿವಮೂರ್ತಿ ವೆಂಕಟೇಶ್ ನಾರಾಯಣ್ ಪರಮೇಶ್ವರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!