ಶಿರಾ ನಗರಸಭೆ ಫಲಿತಾಂಶ  ಪ್ರಕಟ. ದಾಖಲೆ ನಿರ್ಮಿಸಿದ ಅಣ್ಣತಮ್ಮಂದಿರು.

ಶಿರಾ ನಗರಸಭೆ ಫಲಿತಾಂಶ  ಪ್ರಕಟ. ದಾಖಲೆ ನಿರ್ಮಿಸಿದ ಅಣ್ಣತಮ್ಮಂದಿರು.

 

ಡಿಸೆಂಬರ್ 27ರಂದು ನಡೆದಿದ್ದು ಸಿರಾ ನಗರಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬಿದ್ದಿದ್ದು.

 

 

ಶಿರಾ ನಗರಸಭೆಯಲ್ಲಿ ಇದ್ದ 31 ವಾರ್ಡ್ ಗಳ ಪೈಕಿ 30 ವಾರ್ಡಗಳಿಗೆ ಚುನಾವಣೆ ನಡೆದಿತ್ತು ಇನ್ನೊಂದು ವಾರ್ಡ್ನಲ್ಲಿ ಅಭ್ಯರ್ಥಿ ನಿಧನ ಹೊಂದಿದ ಹಿನ್ನೆಲೆಯಲ್ಲಿ ಮತದಾನವನ್ನು ರದ್ದಾಗಿತ್ತು ಇನ್ನ 30 ವಾರ್ಡಗಳಿಗೆ ನಗರಸಭೆ ಚುನಾವಣೆ ನಡೆದಿದ್ದು ಅದರ ಫಲಿತಾಂಶ ಈಗ ಹೊರಬಿದ್ದಿದೆ.

 

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 11 ವಾರ್ಡ್ ಗಳಲ್ಲಿ ಜಯಗಳಿಸಿ ಮೊದಲ ಸ್ಥಾನದಲ್ಲಿದೆ ಇನ್ನೂ ಜೆಡಿಎಸ್ 7 ವಾರ್ಡ್, ಬಿಜೆಪಿ 4 ವಾರ್ಡ್ , ಸ್ವತಂತ್ರವಾಗಿ ಸ್ಪರ್ಧಿಸಿದ್ದ 8 ಅಭ್ಯರ್ಥಿಗಳು ಜಯಗಳಿಸುವ ಮೂಲಕ 30 ವಾರ್ಡ್ಗಳ ಫಲಿತಾಂಶ ಹೊರಬಿದ್ದಿದೆ.

 

 

 

ಇನ್ನು ಶಿರಾ ನಗರ ಸಭಾ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್ ನಂಬರ್ 17 ಹಾಗೂ 18 ವಾರ್ಡ್ನಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಅಣ್ಣತಮ್ಮಂದಿರು ಜಯಗಳಿಸುವ ಮೂಲಕ ಸಿರ ನಗರಸಭಾ ಇತಿಹಾಸದಲ್ಲಿ ಹೊಸ ಮುನ್ನುಡಿ ಬರೆದಿದ್ದಾರೆ.

 

 

ಇನ್ನು 17ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ಜೀಶಾನ್ ಮೊಹಮ್ಮದ್ 18ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ಬುರ್ಹಾನ್ ಮೊಹಮ್ಮದ್ ಇಬ್ಬರು ಕೂಡ ಜಯಗಳಿಸುವ ಮೂಲಕ ಇತಿಹಾಸ ಬರೆದಿದ್ದಾರೆ.

 

 

ಸಂದರ್ಭದಲ್ಲಿ ಸಂತಸವನ್ನು ಹಂಚಿಕೊಂಡಿರುವ ಇಬ್ಬರು ಸಹೋದರರು ಕಳೆದ ಹತ್ತು ವರ್ಷಗಳಿಂದ ಎರಡು ವಾರ್ಡ್ ನಲ್ಲಿ ತಾವು ಸಾಕಷ್ಟು ಜನಪರ ಸೇವೆಗಳನ್ನು ಮಾಡುವ ಮೂಲಕ ಜನರಿಗೆ ಹತ್ತಿರವಾಗಿದ್ದು ಈ ಮೂಲಕ ಚುನಾವಣೆಗೆ ಸ್ಪರ್ಧಿಸಿದೆವು ಕೊನೆಗೂ ಜನರು ನಮ್ಮ ಕೈಹಿಡಿದು ಮತನೀಡಿ ಜಯಗಳಿಸಲು ಸಹಕರಿಸಿದ್ದಾರೆ ಹಾಗಾಗಿ ಎರಡು ವಾರ್ಡ್ನ ನಾಗರಿಕರಿಗೆ ಇಬ್ಬರು ಸಹೋದರರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

 

ವರದಿ_ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!