ಕುಣಿಗಲ್ನಲ್ಲಿ ಅಕ್ರಮವಾಗಿ ಮತಾಂತರ ಮಾಡುತ್ತಿರುವ ಆರೋಪ.
ಕುಣಿಗಲ್_ಇತ್ತೀಚೆಗೆ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿ ಬೆನ್ನಲ್ಲೇ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನಲ್ಲಿ ಬಿಳಿ ದೇವಾಲಯ ಗ್ರಾಮದಲ್ಲಿ ಕ್ರೈಸ್ತ ಮಿಷನರಿ ಇಂದ ಅಕ್ರಮವಾಗಿ ಹಿಂದೂಧರ್ಮದಿಂದ ಕೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂದು ಕುಣಿಗಲ್ ಬಜರಂಗದಳದ ತಾಲೂಕು ಸಂಚಾಲಕ ರಾಮು ಭಜರಂಗಿ ಆರೋಪಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ತಾಲೂಕು ಸಂಚಾಲಕ ರಾಮು ಬಜರಂಗಿ ರವರು ಕಳೆದ 8:00 ಗಂಟೆ ಸಮಯದಲ್ಲಿ ಹೊಸದುರ್ಗದಿಂದ ಆಗಮಿಸಿದ್ದ ಮೂವರು ವ್ಯಕ್ತಿಗಳು ಬಿಳಿ ದೇವಾಲಯದ ಗ್ರಾಮದಲ್ಲಿ ಮತಾಂತರ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ತಿಳಿದು ದಾಳಿ ನಡೆಸಿದ್ದಾರೆ ತಿಳಿಸಿದ್ದಾರೆ.
ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸುವ ಮುಂಚೆ ಬಿಳಿ ದೇವಾಲಯದ ಗ್ರಾಮ ಪಂಚಾಯಿತಿ ಬಿಜೆಪಿ ಸದಸ್ಯ ನಾಗರಾಜ್ ಎಂಬುವವರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಅಕ್ರಮವಾಗಿ ಹಿಂದೂ ಧರ್ಮಗಳಿಂದ ಮುಗ್ಧ ಜನರನ್ನು ವಂಚಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂದು ತಿಳಿದ ತಕ್ಷಣ ಬಜರಂಗದಳದ ಕಾರ್ಯಕರ್ತರೊಂದಿಗೆ ದಾಳಿ ನಡೆಸಿದ್ದಾರೆ.
ದಾಳಿ ನಡೆಸಿದ ವೇಳೆ ಸುಮಾರು 15 ರಿಂದ 20 ಮುಗ್ಧ ಜನರನ್ನು ವಂಚಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಗಮನಕ್ಕೆ ಬಂದಿದೆ ಇದಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿದ್ದ ಕೆಲ ವ್ಯಕ್ತಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಮತಾಂತರ ಮಾಡುತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಬಜರಂಗದಳದ ರಾಮು ರವರು ಕಳೆದ 1ತಿಂಗಳಿನಿಂದ ಬಿಳಿದೇವಾಲಯ ಗ್ರಾಮದಲ್ಲಿ ಮತಾಂತರ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು ಹಾಗಾಗಿ ಮತಾಂತರ ಮಾಡುವ ವೇಳೆ ಬಜರಂಗದಳದ ಕಾರ್ಯಕರ್ತರು ಹಾಗೂ ಬಿಳಿದೇವಾಲಯ ಗ್ರಾಮ ಪಂಚಾಯತ್ನ ಬಿಜೆಪಿ ಸದಸ್ಯ ನಾಗರಾಜು ಸೇರಿ ದಾಳಿ ನಡೆಸಿರುವುದಾಗಿ ತಿಳಿಸಿದ್ದಾರೆ.
ಘಟನೆಯ ನಂತರ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಬಿಳಿ ದೇವಾಲಯದ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು ಎಂಬುವವರು ದೂರು ನೀಡಿರುವುದಾಗಿ ಬಜರಂಗದಳದ ತಾಲೂಕು ಸಂಚಾಲಕ ರಾಮು ಭಜರಂಗಿ ತಿಳಿಸಿದ್ದಾರೆ .
ವರದಿ_ ವಿಜಯ ಭಾರತ ನ್ಯೂಸ್ಡೆಸ್ಕ್