ಬೈಕೇರಿ ವಿರಕ್ತ ಮಠಕ್ಕೆ ಭೇಟಿ ನೀಡಿದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು
ಚಿಕ್ಕನಾಯಕನಹಳ್ಳಿಯಲ್ಲಿ ಪೊಲೀಸ್ ಠಾಣಾ ಕಟ್ಟಡದ ಶಂಕುಸ್ಥಾಪನೆಗೆ ಆಗಮಿಸಿದ್ದ ತುಮಕೂರು ಜಿಲ್ಲಾ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್ ಮಾರ್ಗ ಮಧ್ಯೆದಲ್ಲಿ ಕುಪ್ಪುರು ತಮ್ಮಡಿಹಳ್ಳಿ ವಿರಕ್ತಮಠಕ್ಕೆ ಧಿಡೀರ್ ಭೇಟಿ ನೀಡಿದರು ..ಇದೆ ಸಂದರ್ಭದಲ್ಲಿ ಬೆಟ್ಟದ ಪರ್ವತ ಮಲ್ಲಿಕಾರ್ಜುನ ಸ್ವಾಮಿಗೆ ಭಕ್ತಿ ಸಮರ್ಪಿಸಿದ ಅವರು ಸಮಾಜದ ಉದ್ದಾರ ಹಾಗೂ ಏಳಿಗೆಗಾಗಿ ಹಾಗೂ ಸಮಾಜದ ಶಾಂತಿಗಾಗಿ ಪರ್ವತ ಮಲ್ಲಿಕಾರ್ಜುನ ಸ್ವಾಮಿ ಬಳಿ ಸಂಕಲ್ಪ ಮಾಡುವ ಮೂಲಕ ಕೈ ಅಪ್ಪಣೆಗೆ ಮುಂದಾದರು ಭಕ್ತನಿಗೂ ಮತ್ತು ದೇವರಿಗೂ ನಡುವಿನ ಅಂತರ ದೂರವಿದ್ದ ಕಾರಣ ಕೈಅಪ್ಪನಣೆ 10 ಭಾರಿ ಆಗಲಿಲ್ಲ ಆಗದೆ ಒದರು ಛಲ ಬಿಡದ ತ್ರಿವಿಕ್ರಮನಂತೆ ಜಿಲ್ಲಾ ವರಿಷ್ಠಾಧಿಕಾರಿ ಜನತೆಯ ಶಾಂತಿಗಾಗಿ ಕರ್ಪುರ ದೀವಿಗೆಯನ್ನ ಹಚ್ಚಿ ಕೇಳಿದ ನಂತರ ಬೆಟ್ಟದ ಪರ್ವತ ಮಲ್ಲಿಕಾರ್ಜುನ ತುಂಬೆ ಹೂವಿನ ಮೂಲಕ ಪುಷ್ಪ ವೃಷ್ಟಿ ರೀತಿಯಲ್ಲಿ ಆಶೀರ್ವದಿಸಿದ್ದು ಪವಾಡವೇ ಸರಿ
ಬೆಟ್ಟದ 150 ಎಕರೆ ಗೌನ್ದಾರ್ಣ್ಯದ ಸೊಬಗನ್ನ ವೀಕ್ಷಿಸಿದ ಎಸ್ಪಿ ಸಾಯೇಬ್ರು ಜೀವ ಜಲದ ಕಲ್ಯಾಣಿಯನ್ನು ಕಣ್ತುಂಬಿಸಿಕೊಂಡ ಅವರು ಈ ವನಸಿರಿಯ ಸೊಬಗಿಗೆ ವರಿಷ್ಠಾಧಿಕಾರಿ ವಿರಕ್ತಮಠದ ಹಿರಿಯ ಶ್ರೀಗಳಾದ ಲಿಂಗೈಕ್ಯ ಮಲ್ಲಿಕಾರ್ಜುನ ಸ್ವಾಮಿ ಗದ್ದುಗೆಯ ಬಳಿವರೆಗೂ ದ್ವಿಚಕ್ರ ವಾಹನದ ಮೂಲಕ ಈ ವನಸರಿಯ ಸೊಬಗನ್ನ ಆಹ್ವಳಿಸಿದರು
ನಂತರ ಸುಮಾರು 2ಗಂಟೆಗಳ ಕಾಲ ಪ್ರಕೃತಿಯ ಮಡಿಲಲ್ಲಿದ್ದ ಅವರು ಅಜ್ಜಯ್ಯನ ಗದ್ದುಗೆ ದರ್ಶನ ಮುಗಿಸಿ ಹೊರಬರುತ್ತಿದಂತೆ ಅಭಿನವ ಮಲ್ಲಿಕಾರ್ಜುನ ಶ್ರೀಗಳವರ ದರ್ಶನ ಪಡೆದರು ಅವರೊಂದಿಗೆ ಮಠದ ಸದ್ಭಕ್ತರ ಬಗ್ಗೆ ಮಾತನಾಡುತ್ತ ಬೆಟ್ಟದ ಯಾತ್ರಿ ನಿವಾಸ ಇಲ್ಲಿನ ಆಕರ್ಷಣೆ ಇರುವ ಸಸ್ಯಕಾಶಿಯ ಬಗ್ಗೆ ವಿಶೇಷವಾದ ಕಾಳಜಿ ವಹಿಸಿ ಮಾತನಾಡಿ ಶ್ರೀಗಳ ಆಶೀರ್ವಾದ ಪಡೆದರು
ಇದೆ ಸಂದರ್ಭದಲ್ಲಿ ಮುಖಂಡರಾದ ಗಂಗಾಧರಪ್ಪ ,ಚನ್ನವೀರೇಗೌಡ ಹಾಗೂ ತಮ್ಮಡಿಹಳ್ಳಿ ,ದಾಸೀಹಳ್ಳಿ ಸೇರಿದಂತೆ ಅನೇಕ ಗ್ರಾಮಸ್ಥರು ಭಾಗಿಯಾಗಿದ್ದರು