ಸಾಮೂಹಿಕವಾಗಿ ಪಕ್ಷ ಬಿಡುವ ಮುನ್ಸೂಚನೆಯನ್ನು ನೀಡಿದರೇ….. ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್.
ತುಮಕೂರು: ಮೇಲುಕೋಟೆ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು, ಅರಸಿಕೆರೆ ಶಾಸಕ ಶಿವಲಿಂಗೇಗೌಡರು ಪಕ್ಷ ತೊರೆಯುವ ಮಾತುಕೇಳಿ ಬಂದಿದ್ದು 2023ರ ನಂತರ ಯಾವ ಬೆಳವಣಿಗೆ ಬೇಕಾದರೂ ನಡೆಯಬಹುದು ಎಂದು ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ನಾನೂ ಸೇರಿದಂತೆ ಕೆಲವಷ್ಟು ಜನ ಯಾವ ನಿರ್ಧಾರಬೇಕಾದರೂ ತೆಗೆದುಕೊಳ್ಳಬಹುದು ಎಂದು ಹೇಳುವ ಮೂಲಕ ಸಾಮೂಹಿಕವಾಗಿ ಪಕ್ಷ ತೊರೆಯುವ ಮುನ್ಸೂಚನೆ ಕೊಟ್ಟಿದ್ದಾರೆ. ಇದೇ ಪಕ್ಷದಲ್ಲಿ ಇರುತ್ತೇನೆ ಎಂದು ಯಾರೂ ಕೂಡ ಬಾಂಡ್ ಪೇಪರಲ್ಲಿ ಬರೆದುಕೊಟ್ಟಿಲ್ಲ, ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಂಡು ಅಧಿಕಾರ ಅನುಭವಿಸುವ ಅಗತ್ಯ ಇಲ್ಲ ಎಂದು ಪಕ್ಷದ ವಿರುದ್ಧದ ಅಸಮಾಧಾನವನ್ನು ಗುಬ್ಬಿ ಶಾಸಕರು ಮುಂದುವರಿಸಿದ್ದಾರೆ.
ಇನ್ನು ವಿಧಾನಪರಿಷತ್ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಸಹಜವಾಗಿಯೇ ರಾಜೇಂದ್ರ ಎಲ್ಲರಲ್ಲಿಯೂ ಉತ್ತಮ ಒಡನಾಟ ಹೊಂದಿರುವ ವ್ಯಕ್ತಿ ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಜೆಡಿಎಸ್ ಪಕ್ಷ ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದು ಅದಕ್ಕಾಗಿ ತಮಗೆ ಬೇಜಾರು….. ಇಲ್ಲ ಸಂತೋಷವು ಇಲ್ಲ. ಇನ್ನು ಜೆಡಿಎಸ್ ಪಕ್ಷದ ಮುಖಂಡರ ನಡವಳಿಕೆಯಿಂದ ಹಲವು ಮುಖಂಡರು ಬೇಸರಗೊಂಡಿದ್ದಾರೆ.
ತಾವು ಕೂಡ ಜೆಡಿಎಸ್ ಪಕ್ಷ ಬಿಡುವುದಿಲ್ಲ ಎಂದರೂ ಕೂಡ ತಮ್ಮನ್ನು ಆಚೆ ಹಾಕಿದ್ದಾರೆ. ಇನ್ನು ವಿಧಾನಪರಿಷತ್ತು ಚುನಾವಣೆಯಲ್ಲಿ ನನಗೂ ಕೂಡ ಕೆಲಸ ಮಾಡಲು ಮನಸ್ಸು ಇರಲಿಲ್ಲ, ಈ ಬಾರಿ ಜೆಡಿಎಸ್ ಪಕ್ಷದ ಪರವಾಗಿ ಕೆಲಸ ಮಾಡುವ ಸ್ಥಿತಿಯಲ್ಲೂ ಕೂಡ ತಾವು ಇರದ ಕಾರಣ ಈ ಬಾರಿಯ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದೆ, ಪಕ್ಷದ ವರಿಷ್ಠರು ಹಾಗೂ ಮುಖಂಡರಿಗೂ ಸಹ ತಮ್ಮ ಅವಶ್ಯಕತೆ ಇಲ್ಲದ ಕಾರಣ ಈ ಬಾರಿಯ ಚುನಾವಣಾ ಪ್ರಚಾರದಿಂದ ಉಳಿದಿದ್ದೆ.
ಇನ್ನು ವಿಧಾನಪರಿಷತ್ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ಮತ ಹಾಕಿದ್ದಾರೆ ಇನ್ನು ಈ ಬಾರಿ ತಾವು ಕೂಡ ತಟಸ್ಥವಾಗಿ ಇದ್ದ ಕಾರಣ ಮತದಾರರ ನೋಟ ಅವರಿಗೆ ಬಿಟ್ಟದ್ಆಗಿತ್ತು ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಎಂದು ಅಚ್ಚರಿಯ ಹೇಳಿಕೆಯನ್ನು ನೀಡುವ ಮೂಲಕ ಜಿಲ್ಲೆಯ ರಾಜಕಾರಣದಲ್ಲಿ ಮತ್ತೊಂದು ರಾಜಕೀಯ ತಿರುವಿಗೆ ನಾಂದಿ ಹಾಡಿದ್ದಾರೆ.
ವರದಿ _ಮಾರುತಿ ಪ್ರಸಾದ್ ತುಮಕೂರು