ಕಲ್ಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ರವಿಕುಮಾರ್ ಮೇಲೆ ಆರೋಪ ಸರಿಯಲ್ಲ. ದ.ಸಂ.ಸ

ಕಲ್ಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ರವಿಕುಮಾರ್ ಮೇಲೆ ಆರೋಪ ಸರಿಯಲ್ಲ. ದ.ಸಂ.ಸ

ಗುಬ್ಬಿ ತಾಲ್ಲೂಕಿನ ಕಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಲ್.ರವಿಕುಮಾರ್ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸ್ಥಳೀಯರು  ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಆರೋಪ ಬಗ್ಗೆ ಸ್ಪಷ್ಟಿಕರಣ ನೀಡಿದರು.

ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿ ಮಾತನಾಡಿದ ಅವರು ಕಲ್ಲೂರು ಗ್ರಾಮ ಪಂಚಾಯಿತಿ ಯಲ್ಲಿ ಅಧ್ಯಕ್ಷ ರಾಗಿರುವ ದಲಿತ ಸಮುದಾಯದ ಕೆ.ಎಲ್.ರವಿಕುಮಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ನಂತರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಗ್ರಾಮ ಅಭಿವೃದ್ಧಿ ಹೆಚ್ಚು ಒತ್ತು ನೀಡುತ್ತಿರುವುದರಿಂದ ಅದನ್ನು ಸಹಿಸದೇ ಗ್ರಾಮ ಪಂಚಾಯಿತಿ ಸದಸ್ಯ ರಾದ ನಾಗರಾಜ್. ಶಿವನಂದಯ್ಯ. ಸಿದ್ದರಾಜು ಇತರರು ಉದ್ದೇಶ ಪೂರ್ವಕವಾಗಿ ಪಂಚಾಯಿತಿ ಮುಂಭಾಗದಲ್ಲಿ ಅಂಗಡಿ ಮಳಿಗೆ ನಿರ್ಮಾಣ ಕ್ಕೆ ಮುಂದಾಗಿರುವುದನ್ನು ಸಹಿಸಲಾಗದೇ ಭ್ರಷ್ಟಾಚಾರ ದ ಆರೋಪ ಮಾಡುತ್ತಿದ್ದಾರೆ ಈ ಆರೋಪದಲ್ಲಿ ಹುರುಳಿಲ್ಲ ಎಂದರು.

 

ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ಮಾತನಾಡಿ ಗ್ರಾಮ ಪಂಚಾಯಿತಿ ಗೆ ಒಳಪಡುವ ಮಾಂಸದ ಅಂಗಡಿ ಶಿಥಲವಾಗಿದ್ದು ಪರ್ಯಾಯವಾಗಿ ಅಂಗಡಿ ಮಳಿಗೆ ತೆರವು ಮಾಡಿಸಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಗ್ರಾಮ ಪಂಚಾಯಿತಿ ಆದಾಯ ಮೂಲ ಹೆಚ್ಚಿಸುವ ಸಲುವಾಗಿ ಅಂಗಡಿ ಮಳಿಗೆ ನಿರ್ಮಾಣಮಾಡಲು ಗ್ರಾಮ ಪಂಚಾಯಿತಿ ಆಡಳಿತ ದ ಸಭೆಯಲ್ಲಿ ತಿರ್ಮಾನಿಸಿ ಎಲ್ಲಾ ಸದಸ್ಯರ ಅನುಮತಿ ಪಡೆದು ಗ್ರಾಮ ಪಂಚಾಯಿತಿ ಆವರಣದಲ್ಲಿ ಮೇಕೆ ಶೇಡ್ ತೆರವುಗೊಳಿಸಿ ತೆರವುಗೊಳಿಸಿ ಆ ಸ್ಥಳದಲ್ಲಿ ಅಂಗಡಿ ಮಳಿಗೆ ಪ್ರಾರಂಭ ಮಾಡುವುದನ್ನು ಸಹಿಸದೇ ಈ ಆರೋಪ ಮಾಡುತ್ತಿರುವುದು ಸರಿಯಲ್ಲ ಒಬ್ಬ ದಲಿತ ಅಧ್ಯಕ್ಷ ಅಧಿಕಾರಿ ಮಾಡುವುದನ್ನು ಸಹಿಸದೇ ಆರೋಪ ಮಾಡುವುದು ಉತ್ತಮ ನಡೆಯಲ್ಲ ಎಂದರು.

 

ಅಭಿವೃದ್ಧಿ ಸಹಿಸದ ಸದಸ್ಯರು. ನೂತನ ಅಧ್ಯಕ್ಷ ರಾಗಿ ಅಧಿಕಾರ ವಹಿಸಿಕೊಂಡ ನಂತರ ಕಲ್ಲೂರು ಗ್ರಾಮಕ್ಕೆ ಐ ಮಾಸ್ಕ್ ದೀಪ.ಪಂಚಾಯಿತಿ ಸಭೆ ಸಂಭಾಗಣ.ಸಂತೇ ಮೈದಾನ ಅಭಿವೃದ್ಧಿ. ಗ್ರಾಮ ಗಳ ಸ್ವಚ್ಛತೆ ನಿರ್ವಹಣೆ. ಪಾರ್ಕ್ ನಿರ್ಮಾಣ. ಹೀಗೆ ಹಲವು ಅಭಿವೃದ್ಧಿ ಕಾಮಗಾರಿ ಮಾಡುವುದನ್ನು ಸಹೀಸದೇ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ.ಹೀಗೆ ಅಭಿವೃದ್ಧಿ ವಿಚಾರದಲ್ಲಿ ಪಂಚಾಯಿತಿ ಅಧ್ಯಕ್ಷರ ಮೇಲೆ ಆರೋಪ ಮಾಡುವುದು ಮುಂದುವರೆದರೆ ದಲಿತ ಸಂಘರ್ಷ ಸಮಿತಿ ವತಿಯಿಂದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 

ಪತ್ರಿಕಾ ಗೋಷ್ಠಿಯಲ್ಲಿ ದಲಿತ ಮುಖಂಡರಾದ ಕುಂದರನಹಳ್ಳಿ ನಟರಾಜ್. ನರಸೀಯಪ್ಪ.ದೊಡ್ಡಯ್ಯ.ಅದಲಗೆರೆ ಈಶ್ವರಯ್ಯ.ಲಕ್ಕೇನಹಳ್ಳಿ ಶಿವರಂಗಯ್ಯ.ರಾಜಪ್ಪ. ಕೆ.ಕಡಬ ಶಂಕರ್. ಮಹಾದೇವಯ್ಯ.ಲೋಕೇಶ್.ಇತರ ಮುಖಂಡರು ಹಾಜರಿದ್ದರು.

 

 

ವರದಿ :- ಯೋಗೀಶ್ ಮೇಳೇಕಲ್ಲಹಳ್ಳಿ

Leave a Reply

Your email address will not be published. Required fields are marked *

You cannot copy content of this page

error: Content is protected !!