ಕಂಪ್ಯೂಟರ್ ತರಬೇತಿ ಕಾರ್ಯಾಗಾರ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ

ಕಂಪ್ಯೂಟರ್ ತರಬೇತಿ ಕಾರ್ಯಾಗಾರ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ

 

 

ತುಮಕೂರು ನಗರದಲ್ಲಿರುವ ಸಮರ್ಥ್ ಫೌಂಡೇಷನ್ ಕ್ಯೌಶಲ್ಯಾಭಿವೃದ್ದಿ ಮತ್ತು ತರಬೇತಿ ಕೇಂದ್ರದ ಸಭಾಂಗಣದಲ್ಲಿ ಸಮರ್ಥ್ ಫೌಂಡೇಷನ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಹಯೋಗದಲ್ಲಿ ೩ ದಿನಗಳ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಾಗಾರ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ. ಡಾ|| ಟಿ ಆರ್ ಲೀಲಾವತಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಇಂದಿನ ಮಕ್ಕಳು ಮೊಬೈಲ್ ಎಂಬ ಜಗತ್ತನ್ನು ಬಿಟ್ಟು ಓದಿನ ಕಡೆ ಹೆಚ್ಚಿನ ಒಲವು ತೋರಿಸಬೇಕು. ಮೊಬೈಲ್ ಇವತ್ತು ನಮ್ಮ ಜೀವನದ ಅವಿಭಾಜ್ಯ ಅಂಗ ಅದರ ಉಪಯೋಗವು ಸಾಕಷ್ಟಿದೆ, ಆದರೆ ಅಷ್ಟೇ ಅನಾನುಕೂಲವೂ ಇದೆ. ನಮ್ಮ ಕಾಲದಲ್ಲಿ ಮೊಬೈಲ್ ಇದ್ದಿದ್ದರೆ ನಾವುಗಳು ಈ ಮಟ್ಟದಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಈ ವಯಸ್ಸಿನಲ್ಲಿ ಹೇಗ ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇಯೋ ನಮ್ಮ ಮುಂದಿನ ಬದುಕು ಹಾಗೇ ಇರುತ್ತದೆ. ಓದುವುದರ ಜೊತೆಗೆ ಇತರೆ ಕೌಶಲ್ಯಗಳನ್ನು ಬೆಳೆಸಿಕೊಂಡು ನೀವು ಸದೃಢರಾಗಿಬೇಕೆಂದು ಶಿಬಿರಾರ್ಥಿಗಳಿಗೆ ಬುದ್ದಿಮಾತನ್ನು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕರಾದ ಜಯಪ್ರಕಾಶ ರವರು ಮಾತನಾಡುತ್ತಾ ಇಂತಹ ಕಾರ್ಯಾಗಾರವು ಮಕ್ಕಳಿಗೆ ಅಗತ್ಯವಾಗಿ ಬೇಕಿತ್ತು. ಸರ್ಕಾರದಿಂದ ಉಚಿತವಾಗಿ ಕೊಟ್ಟಿರುವ ಲ್ಯಾಪ್‌ಟಾಪ್ ಗಳನ್ನು ಸಮರ್ಪಕವಾಗಿ ಉಪಯೋಗಿಸಲು ಇಂತಹ ಶಿಬಿರಗಳು ಮುಖ್ಯ, ಈ ನಿಟ್ಟಿನಲ್ಲಿ ಸಮರ್ಥ್ ಫೌಂಡೇಷನ್ನಿನ ಕಾರ್ಯ ಶ್ಲಾಘನೀಯವಾದುದು. ಇನ್ನು ಇಂತಹ ಹಲವಾರು ಕಾರ್ಯಕ್ರಮಗಳನ್ನು ಫೌಂಡೇಷನ್ ನಡೆಸಲಿ. ಎಂದರು.

ಸಮರ್ಥ್ ಫೌಂಡೇಷನ್‌ನ ಟ್ರಸ್ಟಿಗಳು ಹಾಗೂ ನಿವೃತ್ತ ಪ್ರಾಂಶುಪಾಲರಾದ ಆದ ಎಮ್. ಎಚ್ ನಾಗರಾಜುರವರು ಮಾತನಾಡುತ್ತಾ ಕುಳಿತು ತುಕ್ಕು ಹಿಡಿಯುವುದಕ್ಕಿಂತ ದುಡಿದು ಸವೆಯುವುದೇ ಲೇಸು ಎಂಬ ಗಾದೆ ಮಾತಿನಂತೆ ಮನುಷ್ಯ ಹುಟ್ಟಿದ ಮೇಲೆ ಏನಾದರೂ ಕೆಲಸವನ್ನು ಮಾಡುತ್ತಾ ಕ್ರಿಯಾಶೀಲನಾಗಿಬೇಕು, ಇಂದಿನ ಆಧುನಿಕ ಯುಗದಲ್ಲಿ ಎಷ್ಟೇ ಪದವಿಗಳನ್ನು ಹೊಂದಿದ್ದರೂ ಸಹ ಕಂಪ್ಯೂಟರ್ ಕೌಶಲ್ಯಗಳಿಲ್ಲದಿದ್ದರೆ ನಮಗೆ ಕೆಲಸ ಸಿಗುವುದು ಕಷ್ಟ ಸಾಧ್ಯ. ಎಂದು ಹಲವಾರು ಉದಾಹರಣೆಗಳ ಸಹಿತ ಮಕ್ಕಳಿಗೆ ವಿವರಿಸಿದರು.

ಈ ಸಂಸ್ಥೆಯ ಕಾರ್ಯದರ್ಶಿಯಾದ ರಾಣಿ ಚಂದ್ರಶೇಖರ್ ಅವರು ಸುಮಾರು ೪೦೦೦ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು ನಂತರ

ಸಮರ್ಥ್ ಫೌಂಡೇಷನ್‌ನ ಅಧ್ಯಕ್ಷರಾದ ಎಚ್. ಮಲ್ಲಿಕಾರ್ಜುನಯ್ಯ ಹಾಗೂ ಕಾರ್ಯದರ್ಶಿಯಾದ ರಾಣಿ ಚಂದ್ರಶೇಖರ್‌ರವರು ಮಾತನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *

You cannot copy content of this page

error: Content is protected !!