ವಿದ್ಯುತ್ ಹರಿದು ಯುವಕ ಸಾವು.

ವಿದ್ಯುತ್ ಹರಿದು ಯುವಕ ಸಾವು.

ಗುಬ್ಬಿ_ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿ ಎಸ್ ಪುರ ಹೋಬಳಿ ಮತ್ತಿಕೆರೆ ಗ್ರಾಮದಲ್ಲಿ ಮತ್ತಿಕೆರೆ ಗ್ರಾಮದ ಯುವಕ ತಮ್ಮ ತೋಟದಲ್ಲಿ ಅಳವಡಿಸಿದ್ದ ಮೋಟಾರ್ ಬಾಕ್ಸ್ನಲ್ಲಿ ಅಳವಡಿಸಿದ್ದ ಸ್ವಿಚ್ ಆನ್ ಮಾಡಲು ಹೋಗಿ ವಿದ್ಯುತ್ ಪ್ರವಹಿಸಿ ಮತ್ತಿಕೆರೆ ಗ್ರಾಮದ ರವಿ (26)ಎಂಬ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

 

ಇನ್ನು ಮೋಟಾರ್ ಬಾಕ್ಸ್ಗೆ ಅಳವಡಿಸಿದ್ದ ಪ್ಯಾನಲ್ ಬೋರ್ಡ್ ಗೆ ವಿದ್ಯುತ್ ಪ್ರವಹಿಸಿದ ಕಾರಣ ಯುವಕ ಸಾವನ್ನಪ್ಪಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

 

ಸ್ಥಳಕ್ಕೆ ಸಿಎಸ್ ಪುರ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!