ರಾಜ್ಯ ಒಕ್ಕಲಿಗರ ಸಂಘಕ್ಕೆ ತುಮಕೂರು ಜಿಲ್ಲೆಯಿಂದ ಹನುಮಂತರಾಯಪ್ಪ ಹಾಗೂ ಲೋಕೇಶ್ .ಡಿ ನಾಗರಾಜಯ್ಯ ಆಯ್ಕೆ.
ರಾಜ್ಯ ಒಕ್ಕಲಿಗರ ಸಂಘಕ್ಕೆ ಜಿಲ್ಲಾ ನಿರ್ದೇಶಕ ಸ್ಥಾನಕ್ಕೆ ತುಮಕೂರು ಜಿಲ್ಲೆಯಿಂದ ಹನುಮಂತರಾಯಪ್ಪ ಹಾಗೂ ಲೋಕೇಶ್ ಡಿ ನಾಗರಾಜಯ್ಯ ಅವರು ಆಯ್ಕೆಯಾಗಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘದ ಎರಡು ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಗೆ ಏಳು ಮಂದಿ ಅಭ್ಯರ್ಥಿಗಳು ತುಮಕೂರು ಜಿಲ್ಲೆಯಿಂದ ಸ್ಪರ್ಧಿಸಿದ್ದರು ಆದರೆ ಕೊನೆ ಕ್ಷಣದಲ್ಲಿ ಹನುಮಂತರಾಯಪ್ಪ ಹಾಗೂ ಲೋಕೇಶ್ ಡಿ ನಾಗರಾಜಯ್ಯ ಅವರು ಅತ್ಯಧಿಕ ಮತಗಳಿಂದ ಜಯ ಗಳಿಸುವ ಮೂಲಕ ತುಮಕೂರು ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.
ಅತಿ ಹೆಚ್ಚು ಮತಗಳನ್ನು ಪಡೆದ (14901)ಆರ್ ಹನುಮಂತರಾಯಪ್ಪ ಮೊದಲ ಸ್ಥಾನ ಗಳಿಸಿದ್ದಾರೆ, ಎರಡನೇ ಸ್ಥಾನದಲ್ಲಿ ಲೋಕೇಶ್ ಡಿ ನಾಗರಾಜಯ್ಯ (11027),
ಮೂರನೇ ಸ್ಥಾನದಲ್ಲಿ ಬೆಳ್ಳಿ ಲೋಕೇಶ್ (8022) ,ನಾಲ್ಕನೇ ಸ್ಥಾನದಲ್ಲಿ ಸುಜಾತ ನಂಜೇಗೌಡ (6261) ಮತಗಳನ್ನು ಪಡೆದಿದ್ದಾರೆ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಹನುಮಂತರಾಯಪ್ಪ ಹಾಗೂ ಲೋಕೇಶ್ ಡಿ ನಾಗರಾಜಯ್ಯ ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಹನುಮಂತರಾಯಪ್ಪ ಅವರು ಜಿಲ್ಲೆಯ ಸಮುದಾಯದ ಮುಖಂಡರು ತಮ್ಮ ಮೇಲೆ ನಂಬಿಕೆ ಇಟ್ಟು ಹೆಚ್ಚು ಮತಗಳನ್ನು ನೀಡುವ ಮೂಲಕ ನಮ್ಮನ್ನು ಜಯಶೀಲರನ್ನಾಗಿ ಮಾಡಿ ದ್ದಾರೆ ಹಾಗಾಗಿ ಸಮುದಾಯದ ಏಳಿಗೆ ಹಾಗೂ ಸಂಘದಿಂದ ಸಿಗುವ ಸೌಲಭ್ಯಗಳನ್ನು ಸಮುದಾಯದವರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಇನ್ನು ಜಿಲ್ಲೆಗೆ ಆಸ್ಪತ್ರೆ ಸೌಲಭ್ಯ ಒದಗಿಸಲು ಶ್ರಮ ಹಾಕುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಸ್ಟೆಲ್ ಸೌಲಭ್ಯ ಹಾಗೂ ಜಿಲ್ಲೆಗೆ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಂದಿನ ಐದು ವರ್ಷದೊಳಗೆ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಇನ್ನು ಲೋಕೇಶ್ ಡಿ ನಾಗರಾಜಯ್ಯ ಮಾತನಾಡಿ ಜಿಲ್ಲೆಯ ಸಮುದಾಯದ ಮಾಜಿ ಸಂಸದರು , ಶಾಸಕರುಗಳು ಹಾಗೂ ಸಮುದಾಯದ ಜನಾಂಗ ನಮ್ಮ ಮೇಲೆ ನಂಬಿಕೆ ಇಟ್ಟು ನಮ್ಮನ್ನು ಜಯಶೀಲರನ್ನಾಗಿ ಮಾಡಿದ್ದಾರೆ ಈ ನಿಟ್ಟಿನಲ್ಲಿ ಸಂಘದಿಂದ ಸಿಗುವ ಸೌಲಭ್ಯಗಳನ್ನು ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ತಾವು ಹಾಗೂ ಹನುಮಂತರಾಯಪ್ಪ ಸೇರಿ ಜಿಲ್ಲೆಗೆ ಸಿಗುವ ಸೌಲಭ್ಯಗಳನ್ನು ತರುವ ನಿಟ್ಟಿನಲ್ಲಿ ಇಬ್ಬರೂ ಶ್ರಮಿಸುವುದಾಗಿ ತಿಳಿಸಿದ್ದಾರೆ
ವರದಿ_ಮಾರುತಿ ಪ್ರಸಾದ್ ತುಮಕೂರು