ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಅಂತ್ಯಸಂಸ್ಕಾರ ನೀರಿನಲ್ಲೋ? ಅಥವಾ ಮಣ್ಣಿನಲ್ಲೋ!
ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ಮಯಸಂದ್ರ ಹೋಬಳಿಯ ಸೊರವಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ, ಹೊಣಕೆರೆ ಗ್ರಾಮದಲ್ಲಿ ನಿರ್ಮಿಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಅಂತ್ಯಸಂಸ್ಕಾರ ನೀರಿನಲ್ಲೋ? ಅಥವಾ ಮಣ್ಣಿನಲ್ಲೋ!! . ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹೌದು ಈ ಚರ್ಚೆಗೆ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹೊಣಕೆರೆ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ನಿರ್ಮಿತಿ ಕೇಂದ್ರ ತುಮಕೂರು ಇವರು ನಿರ್ಮಿಸಿರುವ. ಈ ಸ್ಮಶಾನವೇ ಸಾಕ್ಷಿಯಾಗಿದೆ .
ಹೊಣಕೆರೆ ಗ್ರಾಮದಲ್ಲಿ .2015 – 16 ನೇ ಸಾಲಿನಲ್ಲಿ ನಿರ್ಮಿತಿ ಕೇಂದ್ರ ತುಮಕೂರು .ಇವರು ಈ ಸ್ಮಶಾಣದ ಕಾಮಗಾರಿಯನ್ನು ಕೈಗೆತ್ತಿಕೊಂಡು .ಈ ಜಾಗದಲ್ಲಿ ಕಾಂಪೌಂಡ್ ಮಾತ್ರ ಉತ್ತಮವಾಗಿ ನಿರ್ಮಾಣ ಮಾಡಿದ್ದಾರೆ. ಆದರೆ ಈ ಕಾಮಗಾರಿಯನ್ನು. ಕೈಗೆತ್ತಿಕೊಳ್ಳುವ ಮುನ್ನ ಈ ಸ್ಥಳ ಸ್ಮಶಾನಕ್ಕೆ ಯೋಗ್ಯವಾಗಿದೆಯೇ ಎಂದು ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾಗಲಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಾಗಲೀ ಹಗಲಿನ ಸಮಯದಲ್ಲಿ ಸ್ಥಳಪರಿಶೀಲನೆ ಮಾಡಿರುವುದು ಅನುಮಾನ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಕಾಟಾಚಾರಕ್ಕಾಗಿ ಸ್ಥಳ ಗುರುತಿಸಿ, ಕಾಮಗಾರಿ ನಡೆಸಿ, ಭೇಷ್ ಎನಿಸಿಕೊಂಡರೆ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು?
ಸ್ಥಳೀಯ ಗ್ರಾಮಸ್ಥರ ಹಾಗೂ ದಲಿತ ಮುಖಂಡರು ಗಮನಕ್ಕೆ ಬಂದಂತೆಯೂ ಅಥವಾ ಬಾರದಂತೆಯೋ ಸ್ಮಶಾನ ನಿರ್ಮಾಣ ಮಾಡಿ “ಸೈ” ಎನಿಸಿಕೊಂಡ ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜನಾಂಗಕ್ಕೆ ರಾತ್ರಿಯ ಹೊತ್ತಿನಲ್ಲಿ ಸ್ಮಶಾನ ಜಾಗವನ್ನು ಗುರುತಿಸಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಏಕೆಂದರೆ ಸ್ಮಶಾನದ ಜಾಗವೂ 20 -30 ಅಡಿ ಆಳದಷ್ಟು ಇರುವ ಈ ಕಂದಕ ಇರುವ ಜಾಗವನ್ನು ಸ್ಮಶಾನವಾಗಿ ಪರಿವರ್ತನೆ ಮಾಡಿದ್ದಾರೆ. ಹಾಗಾದರೆ ನಿರ್ಮಾಣ ಮಾಡಿರುವ ಸಂಬಂಧಪಟ್ಟ ಇಲಾಖೆಗಳ ಲೆಕ್ಕಚಾರವಾದರೂ ಏನು? ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಅಂತ್ಯಸಂಸ್ಕಾರ, ಮಣ್ಣಿನಲ್ಲಿ ಮಾಡುವುದು ಬೇಡ .ನೀರಿನಲ್ಲಿ ಹಾಕಿದರೆ ಸಾಕು ಅದೇ ಅಂತ್ಯಸಂಸ್ಕಾರ ಎನ್ನುವ ಮನೋಭಾವ ಇಲಾಖೆಗಳಲ್ಲಿ ಆವರಿಸಿದೆಯಾ?
ಈ ಪುರುಷಾರ್ಥಕ್ಕಾಗಿ ಈ ರೀತಿಯ ಸ್ಮಶಾಣ ನಿರ್ಮಾಣ ಮಾಡಿದ್ದಾರೆಯೇ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು. ಕೊಂಚ ಬಿಡುವು ಮಾಡಿಕೊಂಡು ಇತ್ತ ಗಮನ ಹರಿಸಿ. ಈ ರೀತಿಯ ಸ್ಮಶಾನ ನಿರ್ಮಾಣ ಮಾಡುವುದು ಸರಿಯೋ ಅಥವಾ ತಪ್ಪೋ, ಅಂತ್ಯ ಸಂಸ್ಕಾರಗಳು ಆರಾಮಾಗಿ ಇಲ್ಲೇ ಮಾಡಬಹುದೋ ನೀವೇ ಸೂಕ್ತ ಪರಿಹಾರ ಒದಗಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ವರದಿ_ ವಿಜಯಭಾರತ ನ್ಯೂಸ್ ಡೆಸ್ಕ್