ಬುಕ್ಕಾಸಗರ ಗ್ರಾಮದಲ್ಲಿ ಭತ್ತದ ಬೆಳೆ ಕ್ಷೇತ್ರೋತ್ಸವ ಆಯೋಜನೆ.
ಗುಬ್ಬಿ _ಒಳ್ಳೆ ಇಳುವರಿಯನ್ನು ಪಡೆಯುವುದಕ್ಕೆ ರೈತರು ಲಘು ಪೋಷಕಾಂಶಗಳನ್ನು ತೋಟಗಾರಿಕೆ ಬೆಳೆಗಳಿಗೆ ಒದಗಿಸಬೇಕು ಎಂದು ಕ್ರಿಯಾಜನ್ ಸಂಸ್ಥೆ ತಾಂತ್ರಿಕ ಸಲಹೆಗಾರರ ಸುನಿಲ್‌ಕುಮಾರ್ ತಿಳಿಸಿದರು.
ತಾಲ್ಲೂಕಿನ ಸಿಎಸ್ ಪುರ ಹೋಬಳಿ ಬುಕ್ಕಸಾಗರ ಗ್ರಾಮದ ಸೋಮಶೇಖರ್ ರವರು ಜಮೀನಿನಲ್ಲಿ ಇನಿಶಿಯೇಟಿವ್ ಫಾರ್ ಡೆವಲಪ್‌ಮೆಂಟ್ ಫೌಂಡೇಶನ್, ಸಿಎಸ್ ಪುರ ರೈತ ಉತ್ಪಾದಕರ ಕಂಪನಿಯ ಆಶ್ರಯದಲ್ಲಿ ಶ್ರೀಪದ್ದತಿಯಲ್ಲಿ ಬೆಳೆದ ಭತ್ತ ಬೆಳೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ಮಣ್ಣಿನಲ್ಲಿ ಸೂಕ್ಷ್ಮಾಣುಗಳನ್ನು ಹೆಚ್ಚಿಸಿಕೊಳ್ಳಲು ಸಾವಯವ ಗೊಬ್ಬರವನ್ನು ಬಳಸಲು ರೈತರು ಮುಂದಾಗಬೇಕು. ತೋಟಗಾರಿಕೆ ಬೆಳೆಗಳಿಗೆ ಗೊಬ್ಬರಗಳನ್ನು ನೀಡುವಾಗ ಮಣ್ಣನ್ನು ಪರೀಕ್ಷೆ ಮಾಡಿಸಿ ಗೊಬ್ಬರ ನೀಡಬೇಕು ಎಂದು ತಿಳಿಸಿದರು.
ಪ್ರಗತಿಪರ ರೈತ ಸೋಮಶೇಖರ್ ಮಾತನಾಡಿ, ರೈತರು ಸುಸ್ಥಿರ ಕೃಷಿ ಮಾಡುವ ಮೂಲಕ ವ್ಯವಸಾಯದಲ್ಲಿ ಖರ್ಚನ್ನು ಕಡಿಮೆ ಮಾಡಿಕೊಂಡು ಹೆಚ್ಚು ಆದಾಯ ಪಡೆಯುವಲ್ಲಿ ಜಾಗೃತರಾಗಬೇಕು ಎಂದರು.
ಕ್ಷೇತ್ರೋತ್ಸವದಲ್ಲಿ ಸಿಎಸ್ ಪುರರೈತ ಉತ್ಪಾದಕರ ಕಂಪನಿಯ ಸಿಇಒ ಲೋಕೇಶ.ಡಿ, ಮಾರುಕಟ್ಟೆ ಅಧಿಕಾರಿ ವಿನೋಧಮ್ಮ, ಕ್ರಿಯಾಜನ್ ಕಂಪನಿಯ ಕಿರಣ್.ಎಸ್.ಇ, ಲೆಕ್ಕಾಧಿಕಾರಿ ಶ್ರೀಕಾಂತ್, ಬಿಸಿಎ ನಳಿನ, ಗಂಗಮ್ಮ, ರೈತರಾದ ನಂಜುಂಡಯ್ಯ, ರೂಪ ಮತ್ತಿತರರು ಇದ್ದರು.