ಋಣ ತೀರಿಸಲು ಹೋಗಿ ಪಕ್ಷಕ್ಕೆ ದ್ರೋಹ ಬಗೆಯಲು ಸಾಧ್ಯವೇ…?_ಸಂಸದ ಜಿ ಎಸ್ ಬಸವರಾಜು.
ತುಮಕೂರು_ಬೇರೆಯವರ ಋಣ ನಮ್ಮ ಮೇಲಿದೆ ಎಂದು ಪಕ್ಷಕ್ಕೆ ದ್ರೋಹ ಬಗೆಯಲು ಸಾಧ್ಯವೇ ಎಂದು ತುಮಕೂರು ಬಿಜೆಪಿ ಸಂಸದ ಜಿ ಎಸ್ ಬಸವರಾಜು ತಿಳಿಸಿದ್ದಾರೆ.
ಸ್ತಳೀಯ ಸಂಸ್ಥೆ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಇಂದು ತುಮಕೂರು ಮಹಾನಗರ ಪಾಲಿಕೆ ಆವರಣಕ್ಕೆ ಆಗಮಿಸಿದ ಅವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ವಿಧಾನಪರಿಷತ್ ಚುನಾವಣೆ ಪ್ರಾಶಸ್ತ್ಯದ ಮತದಾನದ ಮೇಲೆ ಅವಲಂಬಿತವಾಗಿದೆ .
ಈಗ ಚುನಾಯಿತರಾಗಿರುವ ಪ್ರತಿನಿಧಿಗಳು ಮತದಾರರು ಸಾಕಷ್ಟು ವಿದ್ಯಾವಂತರಿದ್ದಾರೆ ಹಾಗಾಗಿ ಮತದಾರರು ಯಾರಿಗೆ ಮತ ಚಲಾವಣೆ ಮಾಡುತ್ತಾರೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ.
ಇನ್ನು ಬಿಜೆಪಿ ಪಕ್ಷದ ಅಭ್ಯರ್ಥಿ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನ ಸಂಸದ ಜಿ ಎಸ್ ಬಸವರಾಜು ವ್ಯಕ್ತಪಡಿಸಿದ್ದಾರೆ.
ಇನ್ನು ಮಧುಗಿರಿ ಶಾಸಕ ಕೆ ಎನ್ ರಾಜಣ್ಣ ನಾನು 40ವರ್ಷದ ರಾಜಕಾರಣದಲ್ಲಿ ಸ್ನೇಹಿತರಾಗಿದ್ದೆವೆ ಹಾಗೆಂದ ಮಾತ್ರಕ್ಕೆ ನಾವು ಪಕ್ಷದ ಚಿನ್ಹೆಯ ಅಡಿಯಲ್ಲಿ ನಿಂತಿರುವ ಅಭ್ಯರ್ಥಿ ಬಿಟ್ಟು ಬೇರೆಯವರಿಗೆ ಮತದಾನ ಮಾಡಲು ಸಾಧ್ಯವಾ ಎಂದು ಪ್ರಶ್ನಿಸಿದರು.
ಇನ್ನು ಕಳೆದ ಒಂದು ವಾರದಿಂದ ನಾನು ಅನಾರೋಗ್ಯಕ್ಕೀಡಾಗಿದ್ದು ಪೂರ್ಣ ಪ್ರಮಾಣದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ ಹಾಗಾಗಿ ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಊಹಾಪೋಹಗಳು ಸಹಜ ಅಂತಹ ವುಹಾಪೋಹಗಳಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದರು.
ಇನ್ನು ಕೆಲವರ ಋಣ ನಮ್ಮ ಮೇಲಿದೆ ಎಂದು ಎಲ್ಲಾ ವಿಚಾರದಲ್ಲೂ ಎಲ್ಲರ ಋಣವನ್ನು ತೀರಿಸಲು ಸಾಧ್ಯವಿಲ್ಲ, ಪಕ್ಷದ ಚಿಹ್ನೆ ಹಾಗೂ ಪಕ್ಷದ ಅಭ್ಯರ್ಥಿ ಬಂದಾಗ ಅವರನ್ನು ಬಿಟ್ಟು ಬೇರೆಯವರಿಗೆ ಮತಚಲಾವಣೆ ಮಾಡಿದರೆ ಆತ ಮನುಷ್ಯನಾಗುವುದಿಲ್ಲ.
ಇನ್ನು ಮಾಜಿ ಶಾಸಕ ಕೆ ಎನ್ ರಾಜಣ್ಣ ನಾನು ಹಲವು ವರ್ಷದಿಂದ ಸ್ನೇಹಿತರಾಗಿದ್ದೇವೆ ಅವರು ಕೆಲವು ಬಾರಿ ನಮಗೆ ಸ್ಪಂದಿಸಿದ್ದಾರೆ ನಾವು ಕೂಡ ಕೆಲವು ಕೆಲಸಕಾರ್ಯಗಳಿಗೆ ನಾವು ಕೂಡ ಅವರಿಗೆ ಸ್ಪಂದಿಸಿದ್ದೇನೆ ಹಾಗೆಂದಮಾತ್ರಕ್ಕೆ ಚುನಾವಣೆಯಲ್ಲಿ ಅವರ ಅಭ್ಯರ್ಥಿಗೆ ಮತ ಹಾಕಲು ಸಾಧ್ಯವಾ ಎಂದು ಪ್ರತಿಕ್ರಿಯೆ ನೀಡಿದ್ದಾರೆ ಆದರೆ ಅವರ ಈ ಹೇಳಿಕೆ ಎಲ್ಲರಲ್ಲೂ ಆಶ್ಚರ್ಯ ಉಂಟುಮಾಡಿದೆ.