ಮುಂಬರುವ 2023,24 ರ ಚುನಾವಣೆಯಲ್ಲಿ ನಾನು ತುಮಕೂರಿನಲ್ಲೆ ಇರುವೆ _ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಖಡಕ್ ನುಡಿ.
ಮುಂಬರುವ 2023 ಹಾಗೂ 24ರ ಚುನಾವಣೆಯಲ್ಲಿ ನಾನು ತುಮಕೂರಿನಲ್ಲೆ ಇರುವೆ ತುಮಕೂರು ಜಿಲ್ಲೆ ಬಿಟ್ಟು ಎಲ್ಲೂ ಹೋಗಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ರವರು ಇಂದು ತುಮಕೂರಿನಲ್ಲಿ ತಿಳಿಸಿದ್ದಾರೆ
ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಪ್ರಧಾನಿ ದೇವೇಗೌಡರು ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಾವು ಸೋಲನ್ನ ಅನುಭವಿಸಿದೆ ಆದರೆ ಸೋಲಿನ ನಂತರ ಜಿಲ್ಲೆ ಹಾಗೂ ರಾಜ್ಯದ ಹಲವು ನಾಯಕರು ನನ್ನ ಸೋಲಿನ ಬಗ್ಗೆ ಸಾಕಷ್ಟು ವ್ಯತಿರಿಕ್ತವಾಗಿ ಮಾತನಾಡುತ್ತಿದ್ದಾರೆ ಇದು ಒಳ್ಳೆಯ ಸಂಗತಿಯಲ್ಲ ಆದರೆ ಮುಂಬರುವ 2023 ಹಾಗೂ 24ರ ಚುನಾವಣೆಯಲ್ಲಿ ಇದೆ ದೇವೇಗೌಡ ತುಮಕೂರು ಜಿಲ್ಲೆಯಲ್ಲಿ ಇರುತ್ತಾರೆ ಜಿಲ್ಲೆ ಬಿಟ್ಟು ಎಲ್ಲೂ ಹೋಗುವುದಿಲ್ಲ ಎನ್ನುವ ಮೂಲಕ ಹೊಸ ರಾಜಕೀಯ ಸಮೀಕರಣಕ್ಕೆ ತಿರುವು ನೀಡಿದ್ದಾರೆ.
ಜೆಡಿಎಸ್ ವರಿಷ್ಠರ ಮಾತಿನ ಮರ್ಮ ಏನು ಎಂದು ಯಾರಿಗೂ ತಿಳಿಯುತ್ತಿಲ್ಲ ಅವರ ಹೇಳಿಕೆ ಗಮನಿಸಿದರೆ ತುಮಕೂರು ಜಿಲ್ಲೆಯಿಂದ ಮುಂದಿನ ಚುನಾವಣೆಗೆ ಎವರೆ ಸ್ಪರ್ಧಿಸುತ್ತಾರೋ ಅಥವಾ ಬೇರೆ ಅಭ್ಯರ್ಥಿಯನ್ನು ಹಾಕುವ ಮೂಲಕ ಸೋಲಿಗೆ ಕಾರಣವಾದ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳುವರೋ ಎಂದು ಕಾದುನೋಡಬೇಕಾಗಿದೆ.
ಆದರೆ ದೇವೇಗೌಡರ ಈ ಮಾತಿನಿಂದ ತುಮಕೂರು ರಾಜಕೀಯ ವಲಯದಲ್ಲಿ ಬಹುದೊಡ್ಡ ಚರ್ಚೆಗೆ ದಾರಿಮಾಡಿಕೊಟ್ಟಿದೆ ಈ ಮೂಲಕ ಮುಂದಿನ ದಿನದಲ್ಲಿ ಜೆಡಿಎಸ್ ಪಕ್ಷ ತುಮಕೂರು ಜಿಲ್ಲೆಯಲ್ಲಿ ತನ್ನದೇ ಆದ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಎಲ್ಲ ಮುನ್ಸೂಚನೆಯನ್ನು ದೇವೇಗೌಡರು ತಮ್ಮ ಮಾತಿನ ಮೂಲಕ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್, ವಿಧಾನಪರಿಷತ್ ಸ್ಥಳೀಯ ಸಂಸ್ಥೆ ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್, ತುಮಕೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅರ್ .ಸಿ ಆಂಜಿನಪ್ಪ ಸೇರಿದಂತೆ ಜೆಡಿಎಸ್ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.