ಈ ಬಾರಿ ವಿಧಾನಪರಿಷತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ_ ಅಭ್ಯರ್ಥಿ ಲೋಕೇಶ್ ಗೌಡ ವಿಶ್ವಾಸ.
ಈ ಬಾರಿಯ ಸ್ಥಳೀಯ ಸಂಸ್ಥೆ ವಿಧಾನಪರಿಷತ್ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಗೆಲುವು ನಿಶ್ಚಿತ ಎಂದು ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜಿಲ್ಲೆಯ ಎಲ್ಲ ಮಂತ್ರಿಗಳು ,ಶಾಸಕರು ,ಸಂಸದರು ,ನಿಗಮ-ಮಂಡಳಿ ಅಧ್ಯಕ್ಷರು ಸೇರಿದಂತೆ ಎಲ್ಲಾ ಮುಖಂಡರು ಒಗ್ಗಟ್ಟಾಗಿ ಗೆಲುವಿಗೆ ಶ್ರಮಿಸುತ್ತಿದ್ದಾರೆ.
ಜಿಲ್ಲೆಯ ಎಲ್ಲಾ ಮುಖಂಡರು ಗೆಲುವಿಗಾಗಿ ಹಗಲಿರುಳು ಶ್ರಮ ಹಾಕುತ್ತಿದ್ದು ಈ ಬಾರಿ ಬಿಜೆಪಿ ಪಕ್ಷಕ್ಕೆ ಗೆಲುವು ಖಚಿತ ಇನ್ನು ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲ ಸಹ ಇಲ್ಲ ಇಂತಹ ಉತ್ತಮ ನಾಯಕರ ಜೊತೆ ಕೆಲಸಮಾಡಲು ಅವಕಾಶ ಸಿಕ್ಕಿರುವುದು ನಮ್ಮ ಅದೃಷ್ಟ ಎಂದರು.
ಒಬ್ಬ ಸಾಮಾನ್ಯ ಬೂತ್ ಮಟ್ಟದ ಅಧ್ಯಕ್ಷನಾಗಿದ್ದ ನನಗೆ ಈ ಮಟ್ಟದ ಅವಕಾಶ ಸಿಕ್ಕಿ ಎಂಎಸ್ಸಿ ಚುನಾವಣೆಗೆ ನಾನು ಅಭ್ಯರ್ಥಿಯಾಗಿರುವುದು ನನಗೆ ಆಶ್ಚರ್ಯ ಎನಿಸಿದೆ ಎಂದರು.
ನಾನು ನನ್ನ ಜೀವನದಲ್ಲಿ ಎಂದಿಗೂ ರಾಜ್ಯಮಟ್ಟಕ್ಕೆ ಹೋಗುತ್ತೇನೆ ಅನ್ನೋ ನಂಬಿಕೆಯಿರಲಿಲ್ಲ ಮುಂದೆ ಜವಾಬ್ದಾರಿ ಹೆಚ್ಚಿದ್ದು ಜನಗಳ ಸೇವೆ ಮಾಡಬೇಕು ಅನ್ನೋ ಹಂಬಲ ಇದೆ.
ಮುಂದಿನ ದಿನದಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಮ್ಮ ಶಾಸಕರು, ಸಂಸದರು, ಇರುವ ಜಾಗದಲ್ಲಿ ಅನುದಾನಗಳಿಗೆ ಕೊರತೆ ಇರುವುದಿಲ್ಲ ಯಾವ ಕ್ಷೇತ್ರದಲ್ಲಿ ನಮ್ಮ ಶಾಸಕರು ಇಲ್ಲವೋ ಅಂತಹ ಕ್ಷೇತ್ರಗಳಿಗೆ ನಮ್ಮ ಕಾರ್ಯಕರ್ತರು ಹಾಗೂ ಸದಸ್ಯರಿಗೆ ಸಮಸ್ಯೆ ಉಂಟಾಗಿದೆ ಅಂತಹ ಜಾಗಗಳನ್ನು ಗುರುತಿಸಿ ಅವರಿಗೆ ಶಕ್ತಿ ನೀಡಲು ಶ್ರಮ ವಹಿಸುವುದಾಗಿ ತಿಳಿಸಿದರು.
ಇನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 15ನೇ ಹಣಕಾಸು ಹಾಗೂ ಅಮೃತ ಯೋಜನೆ, ಸಾಕಷ್ಟು ಸರ್ಕಾರದ ಕಾರ್ಯಕ್ರಮಗಳ ಮೂಲಕ ಕೆಲಸ ಮಾಡಲು ಶ್ರಮಿಸುತ್ತೇನೆ ಇಂತಹ ಅದ್ಭುತ ಯೋಜನೆಗಳು ನಮಗೆ ಶ್ರೀರಕ್ಷೆ ಎಂದರು.
ಸಾಮಾನ್ಯರಲ್ಲಿ ಸಾಮಾನ್ಯನನ್ನು ಗುರುತಿಸುವ ಪಕ್ಷವೆಂದರೆ ಅದು ಬಿಜೆಪಿ ಪಕ್ಷ. ಈಗ ನಡೆಯುತ್ತಿರುವ ಚುನಾವಣೆ ಮೂರು ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ಚುನಾವಣೆ ಯಾಗಿ ನಡೆಯಲಿದೆ.
ಇನ್ನು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮೊದಲ ಪ್ರಾಶಸ್ತ್ಯದ ಮತದಲ್ಲಿ ಗೆಲುವು ಪಡೆಯಲಿದೆ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಜಯಭೇರಿ ಬಾರಿಸುತ್ತದೆ ಎನ್ನುವ ಮುನ್ಸೂಚನೆ ಸಿಕ್ಕಿದೆ ಗೆಲುವಿನ ಅಂತರ ಜಾಸ್ತಿ ಆಗಬಹುದು ಎನ್ನುವ ವಿಶ್ವಾಸವನ್ನು ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ ತಿಳಿಸಿದ್ದಾರೆ.