ಕೊರಟಗೆರೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ
0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ ಪಲ್ಸ್ ಪೊಲೀಯೊ ಲಸಿಕೆ ಹಾಕಿಸಿ – ತಹಸೀಲ್ದಾರ್ ಗೋವಿಂದರಾಜು
ಕೊರಟಗೆರೆ – 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೊಲೀಯೊ ಲಸಿಕೆಯನ್ನು ತಪ್ಪದೇ ಹಾಕಿಸಿ ಎಂದು ಕೊರಟಗೆರೆಯ ತಹಸೀಲ್ದಾರ್ ಗೋವಿಂದರಾಜುರವರು ಪೋಷಕರಿಗೆ ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಪಲ್ಸ್ ಪೊಲೀಯೊ ಲಸಿಕಾ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕು ಆರೋಗ್ಯಧಿಕಾರಿ ಡಾ.ವಿಜಯ್ ಕುಮಾರ್ ರವರು ಮಾತನಾಡಿ ಇಂದು ಬೂತ್ ಮಟ್ಟದಲ್ಲಿ ಲಸಿಕೆ ಹಾಕಿ .4-5 ದಿನಗಳ ಕಾಲ ಪಟ್ಟಣದ ಮನೆ ಮನೆಗಳಿಗೆ ಭೇಟಿ ಮಾಡಿ ಲಸಿಕೆ ಹಾಕಿ ನಂತರ 3-4 ದಿನಗಳ ಕಾಲ ಗ್ರಾಮೀಣ ಪ್ರದೇಶದ ಮನೆ ಮನೆಗೆ ಭೇಟಿ ಮಾಡಿ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕಲಾಗುತ್ತದೆ ಎಂದು ಹೇಳಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪದ್ಮಿನಿಯವರು ಮಾತನಾಡಿ 5 ವರ್ಷದೊಳಗಿನ ಮಕ್ಕಳು-12198 .ಒಟ್ಟು ಲಸಿಕಾ ಕೇಂದ್ರಗಳು-69 .ಒಟ್ಟು ವ್ಯಾಕ್ಸಿನೇಟರ್ ಗಳು-284 .ಒಟ್ಟು ಮೇಲ್ವಿಚಾರಕರು-13 .ಒಟ್ಟು ಟ್ರಾನ್ಸಿಸ್ಟ್ ಬೂತ್ ಗಳ ಸಂಖ್ಯೆ -4 .ಒಟ್ಟ ಮನೆಗಳ ಸಂಖ್ಯೆ 41183 .ಎಂದು ಕೊರಟಗೆರೆ ತಾಲ್ಲೂಕಿನ ಲಸಿಕಾ ಕಾರ್ಯಕ್ರಮದ ಅಂಕಿ ಅಂಶಗಳ ಮೂಲಕ ವಿವರವಾಗಿ ತಿಳಿಸಿದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾದ ಡಾ.ಪ್ರಕಾಶ್ ರವರು ಮಾತನಾಡಿ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಮೂಲಕ ಶೇ .100ರಷ್ಟು ಕೊರಟಗೆರೆ ತಾಲೂಕಿನಲ್ಲಿ ಪ್ರಗತಿ ಕಾಣುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ .ತಾ.ಪಂ.ಕಾರ್ಯನಿರ್ವಾಣಾಧಿಕಾರಿ ಶಿವಪ್ರಕಾಶ್ .ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಕಾಮರಾಜು .ಸಿಡಿಪಿಓ ಕಛೇರಿಯ ನಾಗರತ್ನಮ್ಮ .ಪ.ಪಂ ಅಧ್ಯಕ್ಷೆಯಾದ ಮಂಜುಳ .ಪ.ಪಂ ಉಪಾಧ್ಯಕ್ಷೆ ಯಾದ ಭಾರತಿ .ಡಾ.ನಾಗಭೂಷಣ್ .ಡಾ.ಷಣ್ಮಗಪ್ರಿಯ .ಡಾ.ವಿಜಯಲಕ್ಷ್ಮಿ .ಆರ್ ಬಿ ಎಸ್ ಕೆ ತಂಡ .ಹಾಗೂ ಆರೋಗ್ಯ ಸಿಬ್ಬಂದಿ ವರ್ಗದವರು ಹಾಜರಿದ್ದರು.