ಜೈಲಿನಿಂದ ಹೊರಬಂದ ರಾಗಿಣಿ, ಫ್ಯಾಮಿಲಿ ಜೊತೆ ಟೆಂಪಲ್ ರನ್
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಕೇಸ್ ಪ್ರಕರಣದಲ್ಲಿ ಸುಮಾರು ಐದು ತಿಂಗಳ ಕಾಲ ಪರಪ್ಪನ ಅಗ್ರಾಹರ ಸೇರಿದ್ದ ನಟಿ ರಾಗಿಣಿ. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ನಿಂದ ಜಾಮೀನು ಪಡೆದು ಹೊರಬಂದಿದ್ದಾರೆ.
ಸ್ವಲ್ಪ ರಿಲೀಫ್ ಆಗಿರುವ ನಟಿ ಫ್ಯಾಮಿಲಿ ಜೊತೆಗೂಡಿ ದೇವಸ್ಥಾನಗಳಿಗೆ ತೆರಳಿದ್ದಾರೆ. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನ್ಯಾಯಂಗದ ಬಗ್ಗೆಯೂ ಈ ವೇಳೆ ಬರೆದುಕೊಂಡಿರುವ ರಾಗಿಣಿ, ಈ ವರ್ಷ ನನಗೆ ಕಾನೂನಿನ ನಿಯಮಗಳು ಹಾಗೂ ನ್ಯಾಯಾಂಗದ ಬಗ್ಗೆ ನನಗೆ ನಂಬಿಕೆ ಹೆಚ್ಚಾಗಿದೆ. ಭಾರತದ ಸಂವಿಧಾನದಡಿ, ಸಾಋವಜನಿಕರಂತೆ ನನ್ನ ಹಕ್ಕುಗಳನ್ನು ರಕ್ಷಿಸಲ್ಪಡಲಾಗಿದೆ. ದೇವರ ಆಶಿರ್ವಾದದಿಂದ ಈ ಕೆಟ್ಟ ಘಟನೆಯಿಂದ ಹೊರಬರುತ್ತೇನೆ.
ನನ್ನ ಶಕ್ತಿ ನನ್ನ ಕುಟುಂಬ, ನನ್ನ ಅಭಿಮಾನಿಗಳು, ನನ್ನ ಬೆಂಬಲಿಗರು. ಎಲ್ಲಾ ಸಂಕಷ್ಟಗಳನ್ನು ಗೆದ್ದು ಬರುತ್ತೇನೆ. ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ನಟಿ ರಾಗಿಣಿ ಜೈಲಿನಿಂದ ಹೊರಬಂದಿದ್ದಾರೆ. ಹೈಕೋರ್ಟ್ ನಲ್ಲಿ ಜಾಮೀನು ಸಿಗದ ಹಿನ್ನೆಲೆ ರಾಗಿಣಿ ಪೋಷಕರು ಹಾಗೂ ವಕೀಲರು ಸುಪ್ರೀಂ ಮೊರೆ ಹೋಗಿದ್ದರು. ಅಲ್ಲಿಯೂ ಮೊದಲ ಬಾರಿಗೆ ಜಾಮೀನು ನಿರಾಕರಣೆಯಾಗಿತ್ತು. ಆನಂತರ ಷರತ್ತು ಬದ್ಧ ಜಾಮೀನು ಸಿಕ್ಕಿದೆ.