ಸಂಸದರು ಮೌನಕ್ಕೆ ಶರಣಾಗಬಾರದು- ಕರವೇ ಮಂಜುನಾಥ್.

ಸಂಸದರು ಮೌನಕ್ಕೆ ಶರಣಾಗಬಾರದು- ಕರವೇ ಮಂಜುನಾಥ್.

 

ತುಮಕೂರು ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನು ಘೋಷಿಸಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಕುರಿತಂತೆ ಬಾಂಬೆ ಕರ್ನಾಟಕದ ಮುಖ್ಯಮಂತ್ರಿಗಳು ಶಾಸಕರು ಸಂಸದರು ಮೌನಕ್ಕೆ ಶರಣಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಕರವೇ ತುಮಕೂರು ಜಿಲ್ಲಾಧ್ಯಕ್ಷ ಮಂಜುನಾಥಗೌಡ ತಿಳಿಸಿದ್ದಾರೆ.

 

ಪಕ್ಷದ ಕಚೇರಿಯಲ್ಲಿ ಇಂದು ಕರವೇ ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ನೇಮಕವಾದಮಾತನಾಡಿದ ಅವರು ಕನ್ನಡ ಭಾಷೆ ಮಾತನಾಡುವ ಜನರಿಂದ ಮತ ಪಡೆದು ಆಯ್ಕೆಯಾದ ಶಾಸಕರು ಸಂಸದರ ಈ ರೀತಿ ವರ್ತಿಸಿದರೆ ಹೇಗೆ ಎಂದು ಪ್ರಶ್ನಿಸಿದರು ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಖಾಲಿ ಇದ್ದ ಸ್ಥಳಗಳಿಗೆ ಸೂಕ್ತ ವ್ಯಕ್ತಿಗಳ ವ್ಯಕ್ತಿಗಳನ್ನು ನೇಮಕ ಮಾಡಿ ನಾರಾಯಣ ಗೌಡರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕರವೇ ಸಂಘಟನೆಯನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಹೊಸದಾಗಿ ನೇಮಕವಾದಪದಾಧಿಕಾರಿಗಳಿಗೆ ನಾಡುನುಡಿಯ ವಿಚಾರ ಬಂದಾಗ ಹೇಗೆ ಸೇನಾನಿ ಗಳಂತೆ ನಡೆದುಕೊಳ್ಳಬೇಕೆಂಬ ತರಬೇತಿಯನ್ನು ನೀಡಲಾಗಿದೆ ಶನಿವಾರ ಬೆಂಗಳೂರಿನಲ್ಲಿ ಕರವೇ ನಾರಾಯಣಗೌಡ ಯುವ ಘಟಕದ ವತಿಯಿಂದ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಅವರ 190 ನೇ ಬಲಿದಾನ ದಿವಸವನ್ನು ಆಚರಿಸುತ್ತಿದ್ದು ಸದರಿ ಕಾರ್ಯಕ್ರಮದಲ್ಲಿ ಯುವ ಘಟಕ ಯಾವ ರೀತಿ ಹೋರಾಟದಲ್ಲಿ ತೊಡಗಬೇಕು ಎಂಬುದರ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನಮ್ಮ ರಾಜ್ಯ ಅಧ್ಯಕ್ಷರು ಮತ್ತು ಯುವ ಘಟಕದ ಅಧ್ಯಕ್ಷರು ನೀಡಲಿದ್ದಾರೆ ಎಂದರು.

 

ಈ ವೇಳೆ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಟೋ ಶಿವರಾಜು ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವರಾಜು ಮಂಜುನಾಥ್ ಯುವ ಘಟಕದ ಪದಾಧಿಕಾರಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!