ಲಖಿಂಪುರ ಖೇರಿ ಹಿಂಸಾಚಾರದ 40 ದಿನಗಳ ನಂತರ ಎಸ್ಪಿ ವಿಜಯ್ ಧುಲ್ ವರ್ಗಾವಣೆ
ಲಕ್ನೊ: ಲಖಿಂಪುರ ಖೇರಿ ಹಿಂಸಾಚಾರ ನಡೆದು ಸುಮಾರು 40 ದಿನಗಳ ನಂತರ ಲಖಿಂಪುರ ಖೇರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿಜಯ್ ಧುಲ್ ಅವರನ್ನು ಗುರುವಾರ ಸಂಜೆ ವರ್ಗಾವಣೆ ಮಾಡಲಾಗಿದೆ.
ಲಕ್ನೋದಲ್ಲಿರುವ ಉತ್ತರ ಪ್ರದೇಶ ರಾಜ್ಯ ಪೊಲೀಸ್ ಪ್ರಧಾನ ಕಛೇರಿಗೆ ಕಳಹಿಸಲಾಗಿದ್ದು, ಅವರಿಗೆ ಯಾವುದೇ ಹುದ್ದೆಯನ್ನು ನೀಡಲಾಗಿಲ್ಲ.
2012ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದ ಧುಲ್ ಅವರ ಬದಲಿಗೆ 2014ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಸಂಜೀವ್ ಸುಮನ್ ಅವರನ್ನು ಲಖಿಂಪುರ ಖೇರಿ ಜಿಲ್ಲೆಯ ನೂತನ ಎಸ್ಪಿಯನ್ನಾಗಿ ನೇಮಿಸಲಾಗಿದೆ ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ಟೋಬರ್ 3 ರಂದು ಹಿಂಸಾಚಾರ ಭುಗಿಲೆದ್ದಾಗ ಲಖಿಂಪುರ ಖೇರಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಅರವಿಂದ್ ಕುಮಾರ್ ಚೌರಾಸಿಯಾ ಅವರನ್ನು ಅಕ್ಟೋಬರ್ 28 ರಂದು ಉತ್ತರಪ್ರದೇಶ ಸರಕಾರ ವರ್ಗಾವಣೆ ಮಾಡಿತು ಹಾಗೂ ಮಹೇಂದ್ರ ಬಹದ್ದೂರ್ ಸಿಂಗ್ ಅವರನ್ನು ಹೊಸ ಡಿಎಂ ಆಗಿ ನೇಮಿಸಲಾಗಿತ್ತು.