ದೇವನಹಳ್ಳಿಯ ವಾಣಿಜ್ಯ ಮಳಿಗೆಗೆ ಹೆಚ್ ಡಿ ಕೆ ಆಗಮನ
ದೇವನಹಳ್ಳಿ: ಇದೇ ತಿಂಗಳು ನ.7 ಭಾನುವಾರ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ದೇವನಹಳ್ಳಿ ಪಟ್ಟಣದ ಜೆಡಿಎಸ್ ಪಕ್ಷದ ಭವನದ ಎರಡನೇ ಅಂತಸ್ಥಿನ ಹಾಗೂ ಪಿ.ಎಲ್.ಡಿ ಬ್ಯಾಂಕ್ ವಿಕಾಸ ಭವನದ ವಾಣಿಜ್ಯ ಮಳಿಗೆಯ ಮೊದಲ ಅಂತಸ್ಥಿನ ಕಟ್ಟಡದ ಉದ್ಘಾಟನೆಗಾಗಿ ಆಗಮಿಸುತ್ತಿರುವುದರಿಂದ ಪಕ್ಷದ ಕಾರ್ಯಕರ್ತರು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರು ಸಂಘಟನೆ ವಿಚಾರವಾಗಿ ಆಗಮಿಸಿ ಚರ್ಚಿಸಲು ಹಾಗೂ ಕ್ಷೇತ್ರದ ಜನತೆಯ ಕುಂದು ಕೊರತೆ ಆಲಿಸಲು ಪ್ರತ್ಯೇಕ ಭವನದ ಅವಶ್ಯವಿರುವುದನ್ನು ತಾಲ್ಲೂಕು ಅಧ್ಯಕ್ಷರು ಮನದಟ್ಟು ಮಾಡಿದ್ದರಿಂದ ಎರಡನೇ ಅಂತಸ್ತಿನ ಕಟ್ಟಡ ಕಟ್ಟಲು ಸಹಕಾರ ನೀಡಿದ್ದೇನೆ. ಕಟ್ಟಡ ಉದ್ಘಾಟನೆ ನಂತರ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು 5 ರಿಂದ 10 ಸಾವಿರ ಜನಸಂಖ್ಯೆ ಸೇರುವ ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಆರ್.ಮುನೇಗೌಡ ಮಾತನಾಡಿ ದೇವನಹಳ್ಳಿ ಪಟ್ಟಣದ ಟಿಪ್ಪು ವೃತ್ತದಲ್ಲಿ ಹೆಚ್.ಡಿಕೆ ಅವರನ್ನು ಸ್ವಾಗತಿಸಿ ಪಕ್ಷದ ಭವನದ ಎರಡನೇ ಅಂತಸ್ತಿನ ಕಟ್ಟಡ ಉದ್ಘಾಟಿಸಿ ನಂತರ ಪಿ.ಎಲ್.ಡಿ ಬ್ಯಾಂಕ್ ವಾಣಿಜ್ಯ ಮಳಿಗೆಯ ಮೇಲಂತಸ್ಥಿನ ಕಟ್ಟಡ ಉದ್ಘಾಟಿಸಿ ನಂತರ ಸಭೆಯಲ್ಲಿ ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳ ಬಗ್ಗೆ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಇದೆ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರವೀಂದ್ರ, ಕಲ್ಯಾಣ್ ಕುಮಾರ್ ಬಾಬು, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ನಿರ್ದೇಶಕ ಆರ್.ಕೆ.ನಂಜೇಗೌಡ, ಸಿ.ಮುನಿರಾಜು, ಸಂಪಂಗಪ್ಪ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರಾದ ಮಹೇಶ್, ಭೀಮರಾಜ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಸವರಾಜ್, ಮಾಹಿತಿ ತಂತ್ರಜ್ಞಾನದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ರಾಮಮೂರ್ತಿ, ಜಯರಾಮಣ್ಣ, ಚಂದ್ರೇಗೌಡ, ಪ್ರಭಾಕರ್,ನಾರಾಯಣಸ್ವಾಮಿ, ಜಗದೀಶ್, ಯುವ ಜೆಡಿಎಸ್ ಅಧ್ಯಕ್ಷ ಆರ್.ಭರತ್ ಮುಂತಾದವರು .
ಮಂಜು ಬೂದಿಗೆರೆ
9113813926