ಕೆಐಎಎಲ್ ನಲ್ಲಿ ತಮಿಳು ನಟ ವಿಜಯ್ ಸೇತುಪತಿ ಪಿಎ ಮೇಲೆ ಪ್ರಯಾಣಿಕನಿಂದ ಹಲ್ಲೆ 

ಕೆಐಎಎಲ್ ನಲ್ಲಿ ತಮಿಳು ನಟ ವಿಜಯ್ ಸೇತುಪತಿ ಪಿಎ ಮೇಲೆ ಪ್ರಯಾಣಿಕನಿಂದ ಹಲ್ಲೆ 

 

ದೇವನಹಳ್ಳಿ : ಚೆನೈಯಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಮಿಳು ನಟ ವಿಜಯ್ ಸೇತುಪತಿ ಪಿಎ ಮೇಲೆ ಪ್ರಯಾಣಿಕನೊಬ್ಬ ಏಕಾಏಕಿ ಬಂದು ಹಲ್ಲೆ ನಡೆಸಿದ್ದಾನೆ.

 

ಚೆನೈ ಯಿಂದ ಕಳೆದ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಮಿಳು ನಟ ವಿಜಯ್ ಸೇತುಪತಿ ಸಿಐಎಸ್ ಎಫ್ ಸಿಬ್ಬಂದಿಗಳ ಬಂದೋಬಸ್ತ್ ನಲ್ಲಿ ಆರೈವಲ್ ನಲ್ಲಿ ಹೋಗುವಾಗ ಏಕಾಏಕಿ ಬಂದ ಪ್ರಯಾಣಿಕನೊಬ್ಬ ಏಕಾಏಕಿ ಬಂದು ವಿಜಯ್ ಸೇತುಪತಿ ಪತಿ ಪಿಎ ಮೇಲೆ ಹಲ್ಲೆ ನಡೆಸಿದ್ದಾನೆ, ಪಿಎ ಪಕ್ಕದಲ್ಲಿ ವಿಜಯ್ ಸೇತುಪತಿ ಇದ್ದು ಘಟನೆಯಿಂದ ಕೆಲಕಾಲ ಏರ್ ಪೋರ್ಟ್ ನಲ್ಲಿ ಗೊಂದಲದ ವಾತಾವರಣ ಉಂಟಾಗಿತು, ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕ ಹಲ್ಲೆ ಮಾಡಿರುವ ಸಾಧ್ಯತೆ ಇದ್ದು ಆತ ನೇರವಾಗಿ ನಟ ವಿಜಯ್ ಸೇತುಪತಿಯ ಮೇಲೆ ಹಲ್ಲೆಗೆ ಮುಂದಾದನಾ ಈ ಸಮಯದಲ್ಲಿ ಪಿಎ ಅಡ್ಡ ಬಂದಾಗ ಪಿಎ ಮೇಲೆ ಹಲ್ಲೆ ಮಾಡಿದ್ನಾ, ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅನುಮಾನ ಇದ್ದು ಹೆಚ್ಚು ಮಾಹಿತಿ ತಿಳಿಯ ಬೇಕಾಗಿದೆ, ಹಲ್ಲೆ ಮಾಡಿದ ಪ್ರಯಾಣಿಕ ಯಾರು ವಿಜಯ್ ಸೇತುಪತಿ ಮೇಲೆ ಹಲ್ಲೆ ಮಾಡಲು ಕಾರಣವಾದ್ರು ಯಾವ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಸಹ ತಿಳಿಯ ಬೇಕಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!