ಅಧಿಕಾರಿಗಳ ಬೇಷರತ್ ಕ್ಷಮೆ ಗೆ ಚಿದಾನಂದಗೌಡ ಆಗ್ರಹ.

ಅಧಿಕಾರಿಗಳ ಬೇಷರತ್ ಕ್ಷಮೆ ಗೆ ಚಿದಾನಂದಗೌಡ ಆಗ್ರಹ.

ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ನಡೆಯಬೇಕಾಗಿದ್ದ ಪ್ರಥಮ ದರ್ಜೆ ಸಹಾಯಕ ಹುದ್ದೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಯಾಗಿದ್ದು ಲೋಕಸೇವಾ ಆಯೋಗದ ಸಿಬ್ಬಂದಿಯು ಈ ಸೋರಿಕೆ ಸೂತ್ರಧಾರರಾಗಿ ರುವುದು ಬೆಳಕಿಗೆ ಬಂದಿದೆ.ಇದರ ಮೂಲಕ ಪದವೀಧರರ ಸಮಯ ಹಾಗೂ ಭರವಸೆಗಳನ್ನು ಹಾಳುಮಾಡಿದೆ.ಈ ಸಂಸ್ಥೆ ಎಲ್ಲಾ ಪರೀಕ್ಷಾರ್ಥಿಗಳ ಹಾಗೂ ನಾಡಿನ ಜನತೆಯ ಮುಂದೆ ಬೇಷರತ್ ಕ್ಷಮೆ ಕೇಳಲೇಬೇಕಾಗಿದೆ.

 

  • ಈ ಅಕ್ರಮಗಳ ಸಂಪೂರ್ಣ ಜವಾಬ್ದಾರಿ ಹೊರಬೇಕಾದ ಆಯೋಗದ ಕಾರ್ಯದರ್ಶಿಗಳು ಯಾರು ಕೆಲವು ಅಧಿಕಾರಿಗಳನ್ನು ಮಾತ್ರ ಬೊಟ್ಟು ಮಾಡಿ ತೋರಿಸುತ್ತಿರುವುದು ವಿಷಾದನೀಯ.ಕರ್ನಾಟಕದ ಆಡಳಿತವನ್ನು ಮುನ್ನಡೆಸಬೇಕಾದ ಅಧಿಕಾರಿಗಳನ್ನು ಆಯ್ಕೆಮಾಡುವ ಈ ಸಂಸ್ಥೆಯು ಸಾರ್ವಜನಿಕರಿಗೆ ಉತ್ತರದಾಯಿ ಆಗಿರುತ್ತದೆ. ಇಲ್ಲಿ ಪರೀಕ್ಷೆಯ ಹೊಣೆಹೊತ್ತಿರುವ ಅಧಿಕಾರಿಗಳು ಈ ರೀತಿಯ ಲೋಪಗಳ ಆಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ವಹಿಸಬೇಕಾಗಿತ್ತು ಇಲ್ಲಿ ಸ್ಪಷ್ಟವಾಗಿ ಹಿರಿಯ ಅಧಿಕಾರಿಗಳ ಬೇಜವಾಬ್ದಾರಿತನ ನಿರ್ಲಕ್ಷ್ಯ ಎದ್ದು ಕಾಣುತ್ತದೆ.ಲೋಕಸೇವಾ ಆಯೋಗದ ಅಧ್ಯಕ್ಷರು ಎಲ್ಲಾ ತಪ್ಪಿತಸ್ಥ ಕರ್ತವ್ಯ ನಿರ್ವಹಿಸಿರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಿ ಪದವೀಧರ ಪರೀಕ್ಷಾರ್ಥಿಗಳ ಬೇಷರತ್ ಕ್ಷಮೆಯಾಚಿಸಿ ,ಆಯೋಗ ನಡೆಸುವ ಪರೀಕ್ಷೆಯ ಬಗ್ಗೆ ಪರೀಕ್ಷಾರ್ಥಿಗಳ ವಿಶ್ವಾಸ ಮೂಡಿಸಿ,ಅತಿಶೀಘ್ರ ಪಾರದರ್ಶಕ ಹಾಗೂ ಲೋಪರಹಿತ ಪರೀಕ್ಷೆಯನ್ನು ನಡೆಸುವ ಮೂಲಕ ಆಗಿರುವ ತಪ್ಪನ್ನು ಸರಿಪಡಿಸಬೇಕೆಂದು ಆಗ್ರಹಿಸುತ್ತೇನೆ ಹಾಗೂ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯ ಪ್ರಕರಣಗಳು ಪುನರಾವರ್ತನೆಯಾಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡು ಆಯೋಗದ ಹಿರಿಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವಂತೆ ಚಿದಾನಂದ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!