ಆರ್ಸಿಎಂಬಿ ಕಾಲೇಜಿಗೇ ನೂತನವಾಗಿ ದಾಖಲಾಗಿರುವಂತಹ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಸಮಾರಂಭ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅಗಲಗುರ್ಕಿ ಸಮೀಪದ ರೀಜನಲ್ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ವತಿಯಿಂದ ಹಮ್ಮಿಕೊಂಡಿದ್ದ 2021ನೇ ಸಾಲಿನ ಉದ್ಘಾಟನಾ ದಿನದ ಕಾರ್ಯಕ್ರಮವನ್ನು ಕಾಲೇಜಿನ ಆಡಳಿತ ಮಂಡಳಿ ಅದ್ದೂರಿಯಾಗಿ ಹೊಸ ಬ್ಯಾಚಿನ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.
ಆರ್ಸಿಎಂಬಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಹೊರಹಾಕಲು ವೇದಿಕೆ ಕಲ್ಪಿಸುವ ದೃಷ್ಠಿಯಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ದುರದೃಷ್ಟತ್ವಶತ್ ನಮ್ಮ ಕನ್ನಡ ಚಲನಚಿತ್ರ ಮೇರು ನಟ ಪುನೀತ್ ರಾಜ್ಕುಮಾರ್ ಅವರ ನಿಧನಕ್ಕೆ ಕಾರ್ಯಕ್ರಮವನ್ನು ಸಡಿಲಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ಸಂತಾಪ ಸೂಚಿಸಿದರು.
ಕಾಲೇಜಿನ ಸಂಸ್ಥಾಪಕ ಪ್ರೋ.ಎಸ್.ಆರ್.ಮಂಡಲ್ ಮಾತನಾಡಿ, ಕಾಲೇಜಿನಲ್ಲಿ ತಂತ್ರಜ್ಞಾನ ಮತ್ತು ಸ್ನಾಯತ್ತತೆ ಹೊಂದುವ ಪಧವೀದರರನ್ನು ರೂಪಿಸುವ ಯಶಸ್ಸಿನ ಮಂತ್ರ ಕಾಲೇಜು ಹೊಂದಿದೆ. ಭಾರತದ ಉನ್ನತ ವ್ಯಾಪಾರ ಶಾಲೆಗಳಲ್ಲಿ ಒಂದಾಗಲು ಅನನ್ಯ ಹಾದಿಯನ್ನು ಹೊಂದಿದ್ದು, ಕೆಲವು ವರ್ಷಗಳಲ್ಲಿ ಹೆಚ್ಚಿನ ಸರಾಸರಿ ವೇತನದೊಂದಿಗೆ ಅತ್ಯುತ್ತಮ ಉದ್ಯೋಗಗಳನ್ನು ಸಾಧಿಸುವ ಕೆಲವು ವ್ಯಾಪಾರ ಶಾಲೆಗಳಲ್ಲಿ ಒಂದಾಗಿದೆ. ನಿಜವಾದ ಅರ್ಥದಲ್ಲಿ ಆಳವಾದ ಅಂತಾರಾಷ್ಟ್ರೀಕರಣದ ಮೇಲೆ ಕೇಂದ್ರೀಕರಿಸಿ-೧೦ಪ್ಲಸ್ ಅಂತಾರಾಷ್ಟ್ರೀಯ ತಜ್ಞರು ಕ್ಯಾಂಪಸ್ಗೆ ಭೇಟಿ ನೀಡಿರುವುದು ಸಂತಸದ ವಿಷಯವಾಗಿದೆ. ವಿದ್ಯಾರ್ಥಿಗಳ ಯಶಸ್ಸಿಗೆ ಅವರ ಮನಸ್ಸಿಗೆ ನಾಟುವಂತೆ ಅವರೊಂದಿಗೆ ಬೆರೆತು ತಮ್ಮ ವಿದ್ಯಾಭ್ಯಾಸಕ್ಕೆ ಯಾವುದೇ ಅಡ್ಡಿಯಾಗದಂತೆ ಬಹಳ ಜಾಗರೂಕತೆಯಿಂದ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ಸದೃಢರನ್ನಾಗಿಸುವ ಗುರಿಯನ್ನು ಕಾಲೇಜು ಹೊಂದಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಇನ್ನೂ ಕಾರ್ಯಕ್ರಮದಲ್ಲಿ ನೂತನವಾಗಿ ಸಂಶೋಧನೆ ಮತ್ತು ನವೀನ್ಯತೆ ಕೋಶ ಮತ್ತು ಉದ್ಯಮ ಶೀಲತೆ ಕೋಶ ಬ್ಯಾಚ್ಗಳನ್ನು ಅತಿರ್ಥಿಗಳು ಉದ್ಘಾಟಿಸಿದರು. ಕಾಲೇಜಿನವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ನಡೆಯಿತು. ದೇಶದ ಕೇರಳ, ಗುಜರಾತ್, ರಾಜಸ್ಥಾನ್, ಕರ್ನಾಟಕ, ಆಂಧ್ರಪ್ರದೇಶ್ ಸೇರಿದಂತೆ ಇತರೆ ರಾಜ್ಯಗಳಿಂದ ವಿದ್ಯಾರ್ಥಿಗಳು ತಮ್ಮ ರಾಜ್ಯಗಳ ಕಲಾ ಪ್ರತಿಭೆಗಳನ್ನು ಹೊರಹಾಕಿದರು.
ಆರ್ಸಿಎಂಬಿ ಕಾಲೇಜಿನ ಕರ್ನಾಟಕದ ವಿದ್ಯಾರ್ಥಿಗಳು ಕಾಲೇಜಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಚೀನಾಮಂಡಲ್, ಅತಿಥಿಗಳಾದ ಡಾ.ದಿಬಾಬ್ರತ ದತ್ತ, ಅನಿಲ್ ಕೆಆರ್ ಪ್ಯಾಟ್ರೋ, ಗಣೇಶ್ ದೇವರಾಜನ್, ದಿಬಾಸಿಶ್ ಗೋಷ್, ಡಾ.ಸಿವಿಕೆ ಉಪಸ್ಥಿತಿಯಲ್ಲಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
ಮಂಜು ಬೂದಿಗೆರೆ
9113813926