*ಜಿಲೆಟಿನ್ ಸ್ಪೋಟಗೊಂಡು ದುರಂತ ಸಂಭವಿಸಿದ ಸ್ಥಳಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ….!*
*ಮಾಜೀ ಶಾಸಕ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ. ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಸಾಥ್…!*
*ಹುಣಸೋಡಿಗೆ ಸಿದ್ದರಾಮಯ್ಯ ಭೇಟಿ; ಅಧಿವೇಶನದಲ್ಲಿ ಪ್ರಸ್ತಾಪ ?*
*ಶಿವಮೊಗ್ಗ :* ಜನವರಿ 21ರ ಗುರುವಾರ ರಾತ್ರಿ 10.30ರ ಸುಮಾರಿಗೆ *ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಬಳಿಯ ಕ್ರಷರ್‌ನಲ್ಲಿ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ 6 ಕಾರ್ಮಿಕರು ಮೃತಪಟ್ಟಿದ್ದರು.*
ಇಂದು ಬುಧವಾರ *ಪ್ರತಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಶಿವಮೊಗ್ಗ ಪ್ರವಾಸ ಕೈಗೊಂಡಿದ್ದರು.* ಅವರು ಹುಣಸೋಡು ಗ್ರಾಮದ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ, *ಜಿಲೆಟಿನ್ ಕಡ್ಡಿಗಳ* ಯ ಸ್ಪೋಟಗೊಂಡ ಸ್ಥಳವನ್ನು ವೀಕ್ಷಣೆ ಮಾಡಿದರು. *ಮಾಜಿ ಸಿಎಂ ಜೊತೇಲಿ ಸಾಗರ* *ಕ್ಷೇತ್ರದ ಮಾಜಿ ಶಾಸಕ* *ಕೆಪಿಸಿಸಿ ವಕ್ತಾರರಾದ* *ಗೋಪಾಲಕೃಷ್ಣ* *ಬೇಳೂರು* .
*ಭದ್ರಾವತಿ ಶಾಸಕ ಸಂಗಮೇಶ್,* *ವಿಧಾನ* *ಪರಿಷತ್ ಸದಸ್ಯರಾದ ಪ್ರಸನ್ನ ಕುಮಾರ್, ಮಾಜಿ ಶಾಸಕರಾದ ಪ್ರಸನ್ನಕುಮಾರ್,* ಸೇರಿದಂತೆ ಹಲವು ನಾಯಕರು ಜೊತೆಗಿದ್ದರು.
ಹುಣಸೋಡು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ *ಅಕ್ರಮ ಗಣಿಗಾರಿಕೆಯಿಂದ ತಾವು ಎದುರಿಸುತ್ತಿರುವ ಕಷ್ಟ ನಷ್ಟಗಳ ಬಗ್ಗೆ ಗ್ರಾಮಸ್ಥರು ಸಿದ್ದರಾಮಯ್ಯಗೆ ದೂರು ಸಲ್ಲಿಸಿದರು.*
*ತನಿಖೆಗೆ ಆಗ್ರಹ;* ಸ್ಫೋಟ ನಡೆದ ದಿನ ಟ್ವೀಟ್ ಮಾಡಿದ್ದ *ಸಿದ್ದರಾಮಯ್ಯ ಅವರು, “ಹುಣಸೋಡಿನಲ್ಲಿ ಸಂಭವಿಸಿದ ಅವಘಡ ಅತ್ಯಂತ ಗಂಭೀರವಾದ ವಿಷಯ.* *ಅಕ್ರಮ ಗಣಿಗಾರಿಕೆಗೆ ಕುರಿತ ಆಯನೂರು ಮಂಜುನಾಥ್ ಮತ್ತು ಈಶ್ವರಪ್ಪ ಅವರ ಭಿನ್ನ ಹೇಳಿಕೆಗಳಲ್ಲಿ ಸತ್ಯ ಯಾವುದೆಂದು ಗೊತ್ತಾಗಬೇಕು. ಘಟನೆ ಸಂಬಂಧ ಸರ್ಕಾರ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು”* ಎಂದು ಒತ್ತಾಯಿಸಿದ್ದರು.
*”ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲ ಕ್ವಾರಿಗಳು ಮತ್ತು ಕ್ರಷರ್‌ಗಳು ಸಕ್ರಮವಾಗಿ ನಡೆಯುತ್ತಿವೆ ಎಂದು ಈಶ್ವರಪ್ಪ ಹೇಳಿದರೆ, ಅವರದೇ ಪಕ್ಷದ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಅವರು ಜಿಲ್ಲೆಯಲ್ಲಿ ವ್ಯಾಪಕವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದಿದ್ದಾರೆ. ಯಾರ ಮಾತು ಸತ್ಯ?” ಎಂದು ಪ್ರಶ್ನಿಸಿದ್ದರು.*
*ಶಾಸಕಾಂಗ ಪಕ್ಷದ ಸಭೆ;* *ವಿಧಾನ ಮಂಡಲದ ಜಂಟಿ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜನವರಿ 28ರ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದರು.