ಜೆಡಿಎಸ್ ಪಕ್ಷ ಈ ರಾಜ್ಯದ ಜನತೆ ಹಾಗು ನಿಷ್ಠಾವಂತ ಕಾರ್ಯಕರ್ತರು ಕಟ್ಟಿದ ಪಕ್ಷ ದೇವೆಗೌಡರ ಅವರ ಮಕ್ಕಳ ಪಕ್ಷವಲ್ಲ ಎಚ್ ಡಿ ಕುಮಾರಸ್ವಾಮಿ

ಜೆಡಿಎಸ್ ಪಕ್ಷ ಈ ರಾಜ್ಯದ ಜನತೆ ಹಾಗು ನಿಷ್ಠಾವಂತ ಕಾರ್ಯಕರ್ತರು ಕಟ್ಟಿದ ಪಕ್ಷ ದೇವೆಗೌಡರ ಅವರ ಮಕ್ಕಳ ಪಕ್ಷವಲ್ಲ ಎಚ್ ಡಿ ಕುಮಾರಸ್ವಾಮಿ.

ನಾನು ಈ ರಾಜ್ಯದ ಗುರು ಹಿರಿಯರ ಹಾಗು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಆಶಿರ್ವಾದದಿಂದ ಮುಖ್ಯಮಂತ್ರಿಯಾಗಿದ್ದು ಜಾತ್ಯತೀತ ಜನತದಳವನ್ನು ಈ ರಾಜ್ಯದ ಎಲ್ಲಾ ಲಕ್ಷಾಂತರ ಜನರು ಮತ್ತು ನಮ್ಮ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಕಟ್ಟಿ ಬೆಳೆಸಿದ ಪಕ್ಷ ದೇವೆಗೌಡರು ಹಾಗು ದೇವೆಗೌಡರ ಮಕ್ಕಳ ಪಕ್ಷವಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.

ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ನೆಡೆದ ಜೆಡಿಎಸ್ ಪಕ್ಷ ಸೇರ್ಪಡೆ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ನಾಯಕರು ಈ ರಾಜ್ಯದ ಜನತೆಗೆ ಜೆಡಿಎಸ್ ಪಕ್ಷಕ್ಕೆ ಮತ ನಿಡಿದರೆ ಜೆಡಿಎಸ್ ನವರು ಬಿಜೆಪಿ ಪಕ್ಷದ ಜ್ಯೋತೆಗೂಡಿ ಸರ್ಕಾರವನ್ನು ರಚಿಸುತ್ತಾರೆ ಎಂದು ರಾಜ್ಯದ ಮುಸ್ಲಿಂ ಸಮುದಾಯದ ಬಂದುಗಳಿಗೆ ತಪ್ಪು ಸಂದೇಶವನ್ನು ಹೇಳುವ ಮೂಲಕ ಮುಸ್ಲಿಂ ಸಮುದಾಯದ ಬಂದುಗಳು ಜೆಡಿಎಸ್ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಮತ ಚಲಾಯಿಸಬಾರದಂತೆ ಮುಸ್ಲಿಂ ಸಮುದಾಯದ ಧರ್ಮ ಗುರುಗಳು ಹಾಗು ರಾಜ್ಯದ ನಿವೃತ್ತ ಐ ಎ ಎಸ್ ಹಾಗು ಐಪಿಎಸ್ ಅಧಿಕಾರಿಗಳನ್ನು ಬಳಸಿಕೊಂಡು ಜೆಡಿಎಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡಿದ್ದರು ಅದರ ಫಲವಾಗಿ ಈ ರಾಜ್ಯದಲ್ಲಿ ಬಿಜೆಪಿ ಪಕ್ಷ 105 ಸ್ಥಾನಗಳನ್ನು ಪಡೆದುಕೂಳ್ಳೂವಂತೆ ಮಾಡಿದರು 130 ಸ್ಥಾನದಲ್ಲಿದ್ದ ಕಾಂಗ್ರೆಸ್ ನಮ್ಮನ್ನು ಮುಗಿಸುವ ಸಲುವಾಗಿ ಕೇವಲ 73 ಸ್ಥಾನವನ್ನು ಪಡೆದುಕೊಳ್ಳೂವಂತಾಯಿತು ಅಂದು ಮುಸ್ಲಿಂ ಸಮುದಾಯದ ಬಂದುಗಳು ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದರೆ ಈ ರಾಜ್ಯದಲ್ಲಿ ನಮ್ಮ ಪಕ್ಷ 65ರಿಂದ 70 ಸ್ಥಾನಗಳನ್ನು ಪಡೆಯಬಹುದ್ದಿತ್ತು ಎಂದರು.

ಅದರ ಜ್ಯೋತೆಗೆ ನಮ್ಮ ಪಕ್ಷದಲ್ಲೇ ಇದ್ದ ಕೆಲವರು ತಮ್ಮ ಅಕ್ಕ ಪಕ್ಕದ ಕ್ಷೇತ್ರದಲ್ಲಿನ ಜೆಡಿಎಸ್ ಅಭ್ಯರ್ಥಿಗಳು ಗೆದ್ದರೆ ನಮಗೆಲ್ಲಿ ಸಚಿವಸ್ಥಾನ ಕೈತಪ್ಪುತದೆಂಬ ದುರುದ್ದೇಶದಿಂದ ಗೆಲ್ಲುವ ಅಭ್ಯರ್ಥಿಗಳನ್ನು ಸೋಲಿಸುವ ಕುತಂತ್ರಕ್ಕೆ ಮುಂದಾದರು ಉದಾಹರಣೆಗೆ ಗುಬ್ಬಿ ಕ್ಷೇತ್ರದ ಪಕ್ಕದ ಕ್ಷೇತ್ರವಾದ ತುರುವೇಕೆರೆ ಆ ಕ್ಷೇತ್ರದಲ್ಲಿ ತಾಲೋಕಿನ ಜನತೆ ಜೆಡಿಎಸ್ ಅಭ್ಯರ್ಥಿ ಯನ್ನು ಸೋಲಿಸಲಿಲ್ಲ ಇತ್ತೀಚೆಗೆ ತುಮಕೂರು ಜಿಲ್ಲೆಯ ಯಾರು ನನ್ನ ಮೇಲೆ ಹಾಗು ನಮ್ಮ ಪಕ್ಷದ ಬಗ್ಗೆ ಮಾದ್ಯಮದವರ ಮುಂದೆ ಈ ರಾಜ್ಯದಲ್ಲಿ ಜೆಡಿಎಸ್ ನ ಅಸ್ಥಿತ್ವ ಮುಗಿದ ಅಧ್ಯಯವಾಗಿದೆ ಕುಮಾರಸ್ವಾಮಿ ಅವರ ವರ್ಚಸ್ಸು ಇಲ್ಲಾವೇ ಇಲ್ಲಾ ಜೆಡಿಎಸ್ ಪಕ್ಷದಲ್ಲಿ ಸಮರ್ಥವಾದ ವ್ಯಕ್ತಿಗಳನ್ನು ಪಕ್ಷದಿಂದ ದೇವೆಗೌಡರ ಕುಟುಂಬ ಬಲವಂತವಾಗಿ ಹೂರದಬ್ಬುತ್ತಿದ್ದಾರೆ ಇವರು 123 ಸ್ಥಾನಗಳಿಗೆ ಪೈಪೋಟಿ ಮಾಡುತ್ತಿಲ್ಲ ಕೇವಲ 23 ಸ್ಥಾನಗಳಿಗೆ ಪೈಪೋಟಿ ಮಾಡುತ್ತಿದ್ದಾರೆ ಎಂದು ಇವತ್ತು ಚರ್ಚೆ ಮಾಡುತ್ತಿರುವವರೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಕಾರಣಕರ್ತರು ಎಂದು ನೇರವಾಗಿ ಎಸ್ ಆರ್ ಶ್ರೀನಿವಾಸ್ ರವರ ಮೇಲೆ ಆರೋಪ ಮಾಡಿದರು .

ಗುಬ್ಬಿ ಕ್ಷೇತ್ರದ ಶಾಸಕರಾದ ಶ್ರೀನಿವಾಸ್ ರವರು ಮೂದಲ ಬಾರಿ ನನ್ನ ಸಂಪರ್ಕಕ್ಕೆ ಬಂದಾಗ ಅವರು ಹೇಳಿದ ಮಾತು ನಾನು ದೇವೆಗೌಡರ ಅಭಿಮಾನಿ ನಾನು ದೇವೆಗೌಡರ ಆದರ್ಶಗಳು ಮತ್ತು ಅವರ ಹೋರಾಟಗಳನ್ನು ಮೇಚ್ಚಿದ್ದೇನೆ ಈಗ ನಾನು ಕಾಂಗ್ರೆಸ್ ಪಕ್ಷದ ಜೀಲ್ಲಾ ಪಂಚಾಯ್ತಿ ಸದಸ್ಯನಾಗಿದ್ದೆನೆ ನಾನು ದೇವೇಗೌಡರ ಹೋರಾಟಕ್ಕೆ ನಿಲ್ಲುವ ಸಲುವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲು ಬಯಸುತ್ತೇನೆಂದು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿ ಇಂದು ಅವರು ಹೇಳುವ ಮಾತು ನೂರಕ್ಕೆ ನೂರರಷ್ಟು ಸತ್ಯವಾದ ಮಾತು ಇವೆಲ್ಲಾ ಬೆಳವಣಿಗೆ ಮಧ್ಯೆ 2004 ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಸ್ಪರ್ಧಿಸುವ ಅಭಿಲಾಷೆ ಇದ್ದು ಆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದಿಂದ ಅವರಿಗೆ ಟಿಕೆಟ್ ನಿಡುವ ಅವಕಾಶವಿರಲ್ಲಿಲ್ಲ ಆ ಸಂದರ್ಭದಲ್ಲಿ ನಾನು ಸಹ ಅವರಿಗೆ ಗುಬ್ಬಿ ತಾಲ್ಲೂಕಿನ ಜನತೆಯ ಆಶಿರ್ವಾದವಿದ್ದರೆ ನಿವು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಲಹೆಗಳನ್ನು ನಿಡಿದ್ದು ಸತ್ಯವಾದ ಮಾತು ಅಂದಿನ ಚುನಾವಣೆಯಲ್ಲಿ ಗುಬ್ಬಿ ತಾಲ್ಲೂಕಿನ ಮತ ದೇವರುಗಳು ಅವರಿಗೆ ಆಶಿರ್ವಾದ ಮಾಡಿ ವಿಧಾನಸಭೆಗೆ ಕಳುಹಿಸಿದ ದಿನದಿಂದ ಇಲ್ಲಿಯ ವರೆಗೂ ನನ್ನ ಮತ್ತು ಅವರ ನಡುವೆ ಉತ್ತಮವಾದ ಬಾಂಧವ್ಯ ವಿದ್ದು ನನ್ನಿಂದ ಅವರಿಗೆ ಯಾವುದೇ ರೀತಿಯ ಲೋಪಗಳು ಆಗಿರುವುದಿಲ್ಲ ನಾನು ಬಿಜೆಪಿ ನಾಯಕರ ಜ್ಯೋತೆಗೂಡಿ ಸರ್ಕರ ರಚಿಸುವ ಸಂದರ್ಭದಲ್ಲಿಯೂ ಸಹ ಶ್ರೀನಿವಾಸ್ ರವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ .ಅದರೆ ಇತ್ತೀಚಿನ ರಾಜಕೀಯ ಬೆಳವಣಿಗೆಯ ಮಧ್ಯೆ ಕೇಲವು ಕಾಂಗ್ರೆಸ್ ನ ಪ್ರಭಾವಿ ನಾಯಕರು ಜೆಡಿಎಸ್ ನ ಇತಿಹಾಸ ಮುಗಿಯಿತೆಂದು ನಮ್ಮ ಪಕ್ಷದ ಕೇಲವು ನಾಯಕರನ್ನು ದಾರಿತಪ್ಪಿಸುವ ಕೇಲಸ ಮಾಡುತ್ತಿದ್ದಾರೆ ಆದರೆ ಯಾರು ಎಲ್ಲಿಗಾದರು ಹೋಗಿ ಹೋಗುವಾಗ ಪಕ್ಷದ ಕತ್ತು ಕತ್ತರಿಸುವ ಕೆಲಸ ಮಾಡಬ್ಯಾಡಿ ನನ್ನ ಬಗ್ಗೆ ಮಾತನಾಡಿ ಅದರೆ ಯಾವುದೇ ನಿಕ್ಷೇಪಗಳು ಇಲ್ಲದೇ ಸ್ವಚ್ಛ ಮನಸ್ಸಿನಿಂದ ಈ ದೇಶದ ಪ್ರಧಾನಿಯಾಗಿ ಆಡಳಿತದ ನೇಡೆಸಿದ ದೇವೆಗೌಡರ ಬಗ್ಗೆ ಆಗುರವಾಗಿ ಮಾತಾನಾಡಬೇಡಿ ಎಂದರು.

ಇದೆ ಸಂದರ್ಭದಲ್ಲಿ ಯುವ ಮುಖಂಡರಾದ ಬಿ ಎಸ್ ನಾಗರಾಜ್ ರವರು ಅವರ ತಂದೆ ತಾಯಿಯ ಆಶಿರ್ವಾದ ಪಡೆಯುವ ಮೂಲಕ ಸಮಾವೇಶದಲ್ಲಿ ಭಾಗವಹಿಸಿದ್ದ ಸಾವಿರಾರು ಅಭಿಮಾನಿಗಳ ಹಾಗು ಸಭೆಯಲ್ಲಿ ಬಾಗವಹಿಸಿದ್ದ ಜೆಡಿಎಸ್ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು

ಸಮಾವೇಶದಲ್ಲಿ ಜೆಡಿಎಸ್ ಜೀಲ್ಲಾಧ್ಯಕ್ಷರಾದ ಅಂಜಿನಪ್ಪ .ತುರುವೇಕೆರೆ ಮಾಜಿ ಶಾಸಕರಾದ ಎಂ ಟಿ ಕೃಷ್ಣಪ್ಪ . ಮಧುಗಿರಿ ಶಾಸಕರಾದ ವೀರಭದ್ರಯ್ಯ .ಚಿಕ್ಕನಾಯಕನಹಳ್ಳಿ ಮಾಜಿ ಶಾಸಕರಾದ ಸುರೇಶ್ ಬಾಬು ಕೊರಟಗೆರೆ ಮಾಜಿ ಶಾಸಕರಾದ ಸುಧಾಕರ್ ಲಾಲ್ .ತುಮಕೂರು ಗ್ರಾಮಾಂತರ ಶಾಸಕರಾದ ಗೌರಿಶಂಕರ್. ಜೆಡಿಎಸ್ ಮುಖಂಡರಾದ ಬೆಳ್ಳಿ ಲೋಕೇಶ್ . ಬಿರಮಾರನಹಳ್ಳಿ ನರಸೆಗೌಡ್ರು.ಚನ್ನೆನಹಳ್ಳಿ ನರಸಿಂಹ ಮೂರ್ತಿ ಹಾಗು ಗುಬ್ಬಿ ತಾಲ್ಲೂಕಿನ ಬಿ ಎಸ್ ನಾಗರಾಜ್ ರವರ ಅಪಾರ ಅಭಿಮಾನಿಗಳು ಭಾಗವಹಿಸಿದ್ದರು.

 

ವರದಿ ಯೋಗೀಶ್ ಮೇಳೇಕಲ್ಲಹಳ್ಳಿ

Leave a Reply

Your email address will not be published. Required fields are marked *

You cannot copy content of this page

error: Content is protected !!