ಜೆಡಿಎಸ್ ಪಕ್ಷ ಸೇರ್ಪಡೆ ಸಮಾವೇಶದಲ್ಲಿ ಯಾವುದೇ ಗೊಂದಲವಿಲ್ಲ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ಹೇಳಿಕೆ

ಜೆಡಿಎಸ್ ಪಕ್ಷ ಸೇರ್ಪಡೆ ಸಮಾವೇಶದಲ್ಲಿ ಯಾವುದೇ ಗೊಂದಲವಿಲ್ಲ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ಹೇಳಿಕೆ

ಗುಬ್ಬಿ: ಗುಬ್ಬಿ ನಗರಲ್ಲಿ ಇದೇ ತಿಂಗಳ 25 ರಂದು ನಡೆಯುವ ಜೆಡಿಎಸ್ ಪಕ್ಷ ಸೇರ್ಪಡೆ ಸಮಾವೇಶ ಕಾರ್ಯಕ್ರಮ ಬಗ್ಗೆ ಗುಬ್ಬಿ ಕ್ಷೇತ್ರದ ಕಾರ್ಯಕರ್ತರಲ್ಲಿ ಸಲ್ಲದ ಗೊಂದಲ ಸೃಷ್ಟಿಯಾಗಿದ್ದು ಇದನ್ನ ಸಂಪೂರ್ಣ ಬಗೆಹರಿಸುವ ಭರವಸೆ ನೀಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ತೋಟದಮನೆಗೆ ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕದ ಪದಾಧಿಕಾರಿಗಳು ಬರಲು ಸೂಚಿಸಿದ್ದಾರೆ ಪಕ್ಷ ಸೇರ್ಪಡೆ ಸಮಾವೇಶದಲ್ಲಿ ಯಾವುದೇ ಗೂಂದಲಗಳು ಇಲ್ಲ ಕಾರ್ಯಕ್ರಮ ಯಶಸ್ವಿಯಾಗಿ ನೇಡೆಯುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ಸ್ಪಷ್ಟಪಡಿಸಿದರು.

 

ಗುಬ್ಬಿ ಪಟ್ಟಣದ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶದ ಪೂರ್ವ ತಯಾರಿ ವೀಕ್ಷಿಸಿ ಮಾತನಾಡಿದ ಅವರು ಜೆಡಿಎಸ್ ನ ಯಾವ ಘಟಕಕ್ಕೂ ಪಕ್ಷ ಅಗೌರವ ತೋರಿಲ್ಲ. ಈ ಸಮಾವೇಶಕ್ಕೆ ಎಲ್ಲಾ ಘಟಕದ ಪದಾಧಿಕಾರಿಗಳಿಗೆ ಬರಲು ವರಿಷ್ಠರೇ ಸೂಚಿಸಿದ್ದಾರೆ. ಈ ಜೊತೆಗೆ ತಾಲ್ಲೂಕು ಅಧ್ಯಕ್ಷರಿಗೆ ಖುದ್ದು ಆಹ್ವಾನ ನೀಡಿ ನಂತರದಲ್ಲಿ ನಾಗರಾಜು ಅವರ ಸೇರ್ಪಡೆಗೆ ತಯಾರಿ ನಡೆಸಲು ತಿಳಿಸಿದ್ದಾರೆ. ಜೊತೆಗೆ ಏನೇ ಗೊಂದಲವಿದ್ದರೂ ನಮ್ಮನ್ನು ಭೇಟಿ ಬಗೆಹರಿಸಿಕೊಳ್ಳಿ ಎಂದು ಸೂಚಿಸಿದ್ದಾರೆ ಎಂದು ತಿಳಿಸಿದರು.

 

ಕಳೆದ ಎರಡು ವರ್ಷಗಳಿಂದ ಕರೋನಾ ಹಿನ್ನಲೆ ಪಕ್ಷ ಸಂಘಟನೆ ಸಮಾವೇಶ ಜಿಲ್ಲೆಯಲ್ಲಿ ಮಾಡಿರಲಿಲ್ಲ. ಸ್ಥಳೀಯ ಚುನಾವಣೆ ಉದ್ದೇಶದಿಂದ ಬಲವರ್ಧನೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಮಾವೇಶ ಜೊತೆಗೆ ಪ್ರಭಾವಿ ಮುಖಂಡರ ಸೇರ್ಪಡೆ ಮಾಡಿಕೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದರು.

 

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಗುಬ್ಬಿ ಶ್ರೀನಿವಾಸ್ ಅವರು ಮತ್ತು ಪಕ್ಷದ ವರಿಷ್ಠರ ನಡುವಿನ ಅಂತರ ಎಲ್ಲಾ ಪಕ್ಷದಲ್ಲಿರುವ ಭಿನ್ನಾಭಿಪ್ರಾಯದಂತೆ ಇರಬಹುದು. ದೊಡ್ಡವರ ವಿಚಾರ ತಿಳಿದಿಲ್ಲ. ಆದರೆ ಸಮಾವೇಶಕ್ಕೆ ಶಾಸಕರಿಗೆ ನಾನು ಖುದ್ದು ಆಹ್ವಾನ ನೀಡಿದ್ದೇನೆ. ಜೊತೆಗೆ ಸೇರ್ಪಡೆಯಾಗುವ ನಾಗರಾಜು ಅವರು ಸಹ ಆಹ್ವಾನ ನೀಡಿದ್ದಾರೆ. ಅವರು ಕಾರ್ಯಕ್ರಮಕ್ಕೆ ಆಗಮಿಸುವ ವಿಶ್ವಾಸವಿದೆ ಎಂದರು.

 

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಪಕ್ಷದ ಜವಾಬ್ದಾರಿ ಹೊತ್ತ ಎಲ್ಲಾ ಪದಾಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಆಗಮಿಸಿ ಈ ಸೇರ್ಪಡೆ ಕಾರ್ಯಕ್ರಮ ಯಶಸ್ವಿ ಮಾಡಲಿದ್ದಾರೆ. ಈ ಜೊತೆಗೆ ಎಲ್ಲಾ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಬೇಕು ಎಂದು ಮನವಿ ಮಾಡಿದರು.

 

ನಂತರ ಮೈದಾನದಲ್ಲಿ ವೇದಿಕೆ ಸಿದ್ಧತೆ ಕುರಿತು ವೀಕ್ಷಸಿ ಕೆಲ ಸಲಹೆ ಸೂಚನೆ ನೀಡಿದರು.

 

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬೀರಮಾರನಹಳ್ಳಿ ನರಸೇಗೌಡ, ಮಹ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಹಿರಿಯ ಉಪಾಧ್ಯಕ್ಷ ದೇವರಾಜ್, ರಾಜ್ಯ ಸಂಚಾಲಕ ಬೆಳ್ಳಿ ಲೋಕೇಶ್, ಮುಖಂಡರಾದ ಬಿ.ಎಸ್.ನಾಗರಾಜು, ಲಕ್ಷ್ಮೀಪತಿ, ಗಂಗಣ್ಣ, ಶ್ರೀನಿವಾಸ್ ಇತರರು ಇದ್ದರು.

 

ವರದಿ :- ಯೋಗೀಶ್ ಮೇಳೇಕಲ್ಲಹಳ್ಳಿ

Leave a Reply

Your email address will not be published. Required fields are marked *

You cannot copy content of this page

error: Content is protected !!