ತುಮಕೂರು ದಸರಾ ಸಮಿತಿ ನಡೆಗೆ ಬೇಸರ ವ್ಯಕ್ತಪಡಿಸಿದ ಪಾಲಿಕೆ ಸದಸ್ಯರು.

ತುಮಕೂರು ದಸರಾ ಸಮಿತಿ ನಡೆಗೆ ಬೇಸರ ವ್ಯಕ್ತಪಡಿಸಿದ ಪಾಲಿಕೆ ಸದಸ್ಯರು.

 

 

ನಾಡಿನೆಲ್ಲೆಡೆ ದಸರಾ ಹಾಗೂ ವಿಜಯದಶಮಿ ಹಬ್ಬದ ಸಡಗರ ಮನೆಮಾಡಿದೆ ಇದಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ದಸರಾ ಆಚರಣೆ ಜೋರಾಗಿತ್ತು.ಇದಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಸಹ ತುಮಕೂರು ದಸರಾ ಸಮಿತಿ ವತಿಯಿಂದ ವಿಜೃಂಭಣೆಯ ದಸರಾ ಆಚರಣೆ ಮಾಡಲಾಯಿತು.

 

ಆದರೆ ದಸರಾ ಸಮಿತಿ ಸದಸ್ಯರು ಪಾಲಿಕೆಯ ಕೆಲ ಸದಸ್ಯರಿಗೆ ಆಹ್ವಾನವನ್ನು ಸಹ ನೀಡದೆ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ತುಮಕೂರು ಮಹಾನಗರ ಪಾಲಿಕೆಯ ಸದಸ್ಯ ಮಂಜುನಾಥ್ ರವರು ಮಾತನಾಡಿ ದಸರಾ ಸಮಿತಿ ಸ್ರೆ ಸದಸ್ಯರು ಬಿಜೆಪಿ ಸದಸ್ಯರನ್ನು ಹೊರತುಪಡಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿಕೆ ಸದಸ್ಯರನ್ನು ಕಡೆಗಣಿಸಿರುವುದು ಬೇಸರದ ಸಂಗತಿ ಎಂದರು.

 

ಬಿಜೆಪಿ ಪಾಲಿಕೆ ಸದಸ್ಯರು ಹಾಗೂ ಮುಖಂಡರು ಮಾತ್ರ ಹಿಂದೂಗಳಲ್ಲ, ದಸರಾ ಸಮಿತಿ ಸದಸ್ಯರು ಸಹ ಪಾಲಿಕೆ ಸದಸ್ಯರ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಇದು ಸರಿಯಾದ ನಿರ್ಧಾರವಲ್ಲ ತುಮಕೂರು ಮಹಾನಗರ ಪಾಲಿಕೆಯಲ್ಲಿ 35 ಸದಸ್ಯರು ಹಾಗೂ ನಾಮಿನಿ ಸದಸ್ಯರು ಸೇರಿ ಒಟ್ಟು 40 ಮಂದಿ ಸದಸ್ಯರಿದ್ದಾರೆ. ಆದರೆ ದಸರಾ ಸಮಿತಿ ಸದಸ್ಯರಿಗೆ ಪಾಲಿಕೆಯ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಲೆಕ್ಕಕ್ಕೆ ಇಲ್ಲದೆ ಇರೋ ರೀತಿ ವರ್ತಿಸುತ್ತಿರುವುದಕ್ಕೆ ಯಾಕೆ ಎಂದು ತಿಳಿಯುತ್ತಿಲ್ಲ ಇದರ ಹಿಂದೆ ಯಾವ ಕೈಗಳು ಕೆಲಸ ಮಾಡಿವೆ ಎಂದು ಗೊತ್ತಿಲ್ಲ ಎಂದರು.

 

ಯಾವ ಉದ್ದೇಶ ಇಟ್ಟುಕೊಂಡು ಈ ತರಹದ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಲ್ಲಾ ಸದಸ್ಯರಿಗೂ ತಿಳಿಸಿದರೆ ನಾವು ಸಹ ದಸರಾ ಸಮಿತಿಯ ಸದಸ್ಯರು ಜೊತೆಗೂಡಿ ಮತ್ತಷ್ಟು ವಿಜೃಂಭಣೆಯಿಂದ ದಸರಾ ಹಬ್ಬವನ್ನು ಆಚರಿಸುತ್ತಿದ್ದೇವು ಇನ್ನು ಸೆಕ್ಯುಲರ್ ಮೈಂಡ್ ನಲ್ಲಿ ಇರುವ ಕೆಲ ಮುಖಂಡರು ಹಿಂದುತ್ವ ಹಾಗೂ ಹಿಂದುತ್ವ ಅನ್ನೋ ಪಾಠ ಹೇಳೋ ಹಾಗೂ ಕೇಳೋ ಅಂಥವರಿಗೆ ಮಾತ್ರ ಅವರು ಅವರ ಜೊತೆ ಇರಲು ಸಾಧ್ಯ ಹಾಗಾಗಿ ಇಂತಹ ಸಣ್ಣ ರೀತಿಯೇ ಹೆಜ್ಜೆ ಇಡುವುದನ್ನು ಸಮಿತಿ ಸದಸ್ಯರು ಬಿಡಬೇಕು ಎಂದರು. ಬಿಜೆಪಿ ಸದಸ್ಯರು ಮಾತ್ರ ಲೆಕ್ಕಕ್ಕೆ ಇದ್ದು ಮಿಕ್ಕ ಸದಸ್ಯರು ಲೆಕ್ಕಕ್ಕೆ ಇಲ್ಲ ಅನ್ನೋ ರೀತಿ ಇದೆ ದಸರಾ ಸಮಿತಿ ಸದಸ್ಯರ ನಡೆ ಎಂದು ಮತ್ತೊಬ್ಬ ಸದಸ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!