ದೇವನಹಳ್ಳಿ: ತಾಲೂಕಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಬೆಟ್ಟಕೋಟೆ ಗ್ರಾಮದ ಕೆರೆ ಮಳೆಯಿಂದಾಗಿ ಕೆರೆ ತುಂಬಿ ಹರಿಯುತ್ತಿರುವುದಕ್ಕೆ ಶಾಸಕ ಎಲ್ ಎನ್ ನಾರಾಯಣಸ್ವಾಮಿ ಬಾಗಿನ ಅರ್ಪಿಸಿದರು.
ಶಾಸಕ ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, ಬಹಳ ವರ್ಷಗಳ ಬಳಿಕ ಕೆರೆಯು ಸಮೃದ್ಧಿಯಾಗಿ ತುಂಬಿದ್ದು, ಸತತವಾಗಿ ಬೀಳುತ್ತಿರುವ ಮಳೆಯಿಂದ ಕೆರೆ ತುಂಬಿ ಹರಿಯುತ್ತಿರುವ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೆರೆ ತುಂಬಿದ್ದರಿಂದ ಅಂತರ್ಜಲಮಟ್ಟ ಹೆಚ್ಚಳಗೊಂಡು ಬೋರ್ವೆಲ್ಗಳಲ್ಲಿ ನೀರು ಸಿಗುವಂತೆ ಆಗುತ್ತಿದೆ. ೧೨೦೦-೧೮೦೦ ಅಡಿಗಳಷ್ಟು ಬೋರ್ವೆಲ್ ಕೊರೆಸಿದರೂ ನೀರು ಸಿಗದ ಪರಿಸ್ಥಿತಿ ಇತ್ತು ಈಗ ಮಳೆಯಿಂದಾಗಿ ರೈತಾಪಿ ವರ್ಗದವರಿಗೆ ಹೆಚ್ಚು ಅನುಕೂಲವಾಗಿದೆ. ಬೆಟ್ಟಕೋಟೆ ಕೆರೆಯಿಂದ ಬಿದಲಪುರ ಕೆರೆಗೆ ಹಾದುಹೋಗುವ ರಾಜಕಾಲುವೆ ಮುಚ್ಚಿರುವುದರಿಂದ, ಅಕ್ಕಪಕ್ಕದ ತೋಟ, ಹೊಲಗಳಿಗೆ ನೀರು ನಿಂತು ಬೆಳೆ ಹಾನಿಯಾಗಿರುವುದುರ ಬಗ್ಗೆ ಗಮನಕ್ಕೆ ಬಂದಿದೆ. ಇದನ್ನು ವಿಪತ್ತು ನಿರ್ವಹಣೆ ಅಡಿಯಲ್ಲಿ ತಾಸಿಲ್ದಾರ್ ರವರು ನಷ್ಟದಲ್ಲಿರುವ ರೈತರಿಗೆ ಪರಿಹಾರ ಕೊಡಬೇಕೆಂದು ತಸಿಲ್ದಾರ್ ಅನಿಲ್ ಕುಮಾರ್ ಅರೋಲಿಕರ್ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಹೋಬಳಿ ಜೆಡಿಎಸ್ ಅಧ್ಯಕ್ಷ ಮುನಿರಾಜು, ನೀರಾವರಿ ಇಲಾಖೆ ಅಧಿಕಾರಿಗಳು, ಚನ್ನರಾಯಪಟ್ಟಣ ಹೋಬಳಿ ಉಪತಹಶೀಲ್ದಾರ್ ಶ್ರೀನಿವಾಸ್ ನಾಯ್ಡು, ಬೆಟ್ಟಕೋಟೆ ಗ್ರಾಮ ಪಂಚಾಯಿತಿ ಪಿಡಿಒ ಬೀರೇಶ್, ರಾಜ್ಯಸ್ವ ನಿರೀಕ್ಷಕ ಜನಾರ್ಧನ್, ಜೆಡಿಎಸ್ ಮುಖಂಡರು ಗ್ರಾಮಸ್ಥರು ಇದ್ದರು.
ಮಂಜು ಬೂದಿಗೆರೆ
9113813926