ಎದೆಗುಂದದೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಕೊರಟಗೆರೆ ವಿದ್ಯಾರ್ಥಿನಿ ಗ್ರೀಷ್ಮ ನಾಯಕ್
ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಹನುಮಂತಪುರದ ವಿದ್ಯಾರ್ಥಿನಿಯಾದ ಗ್ರೀಷ್ಮಾ ನಾಯಕ್ ರವರು ಸೆಪ್ಟೆಂಬರ್ ನಲ್ಲಿ ನಡೆದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯಲ್ಲಿ 599 ಅಂಕ ಗಳಿಸುವ ಮೂಲಕ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಇದರ ಮೂಲಕ ಗಟ್ಟಿ ತನದಿಂದ ಎಷ್ಟೇ ಆತಂಕ ಬಂದರು ಎದುರಿಸಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿನಿ ಇಂದು ಪೂರಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ತನ್ನ ಸಂತಸದ ಕ್ಷಣವನ್ನು ವಿಜಯ ಭಾರತ ಜೊತೆ ಹಂಚಿಕೊಂಡಿದ್ದು ತಾನು ಮಂಗಳೂರಿನ ಮೂಡಬಿದ್ರೆಯ ಆಳ್ವಾಸ್ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸ ಪಡೆದಿದ್ದು ಕಳೆದ ಬಾರಿ ಕರೋನ ಸಾಂಕ್ರಾಮಿಕ ರೋಗದಿಂದ ಪರೀಕ್ಷೆ ಬರೆಯಲು ಶುಲ್ಕ ಕಟ್ಟಲು ಆಗಿರಲಿಲ್ಲ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಸಾಧ್ಯವಾಗದೆ ಪರೀಕ್ಷೆಯಿಂದ ವಂಚಿತರಾಗಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್, ಕೊರಟಗೆರೆ ಕ್ಷೇತ್ರದ ಶಾಸಕರಾದ ಡಾಕ್ಟರ್ ಜಿ ಪರಮೇಶ್ವರ್ ಸೇರಿದಂ ತೆ ಹಲವರು ವಿದ್ಯಾರ್ಥಿನಿ ಗ್ರೀಷ್ಮ ಮನೆಗೆ ಭೇಟಿ ನೀಡಿ ಭೇಟಿ ನೀಡಿ ಧೈರ್ಯ ತುಂಬಿದರು.
ಓದಿನಲ್ಲಿ ಮುಂದಿದ್ದ ಬಾಲಕಿ ಗ್ರೀಷ್ಮಾ ಎಷ್ಟೇ ಆತಂಕ ಬಂದರೂ ಎದೆಗುಂದದೆ ಪರೀಕ್ಷೆ ಬರೆದಿದ್ದರು ಪೂರಕ ಪರೀಕ್ಷೆಯ ಪಲಿತಾಂಶ ನಿರೀಕ್ಷೆಯಂತೆ ಉತ್ತಮ ಅಂಕ ಪಡೆದಿರುವ ಸಲುವಾಗಿ ತನ್ನ ಸಂತೋಷದ ಕ್ಷಣಗಳನ್ನು ಹಂಚಿಕೊಂಡಿರುವ ಗ್ರೀಷ್ಮ ರವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಹಾಗೂ ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದಗಳು ಅರ್ಪಿಸಿದ್ದಾರೆ.
ಯಾವುದೇ ಟುಶನ್ ಕೋಚಿಂಗ್ ಇಲ್ಲದೆ ಮನೆಯಲ್ಲಿಯೇ ಕುಳಿತು ಪರೀಕ್ಷೆ ಬರೆದಿರುವುದು ಮತ್ತೊಂದು ಮುಖ್ಯವಾದ ವಿಷಯ ಛಲವೊಂದಿದ್ದರೆ ತಾನು ಏನನ್ನು ಬೇಕಾದರೂ ಸಾಧಿಸುತ್ತೇನೆ ಎನ್ನುವ ಮಾತಿನಂತೆ ಬಾಲಕಿ ಗ್ರೀಷ್ಮಾ ಉತ್ತಮ ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲಿಗರಾಗಿರುವರು ತುಮಕೂರು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
ವಿದ್ಯಾರ್ಥಿನಿ ಮನೆಗೆ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರಾದ ಡಾ ಜಿ ಪರಮೇಶ್ವರ್ ಬೇಟಿ
ಕೊರಟಗೆರೆ ಕ್ಷೇತ್ರದ ಶಾಸಕರಾದ ಡಾಕ್ಟರ್ ಜಿ ಪರಮೇಶ್ವರ್ ರವರು ವಿದ್ಯಾರ್ಥಿನಿ ಗ್ರೀಷ್ಮಾ ಮನೆಗೆ ಭೇಟಿ ನೀಡಿ ಬಾಲಕಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಈ ಮೂಲಕ ತನ್ನ ವಿದ್ಯಾಭ್ಯಾಸವನ್ನು ಇದೇ ರೀತಿಯಲ್ಲಿ ಮುಂದುವರಿಸಬೇಕು ಎಂದು ಕಿವಿ ಮಾತನ್ನು ಹೇಳಿದ ಶಾಸಕರು ಇದೇ ಸಂದರ್ಭದಲ್ಲಿ ಪ್ರೋತ್ಸಾಹಧನವಾಗಿ ವಿದ್ಯಾರ್ಥಿನಿಗೆ 50 ಸಾವಿರ ರೂಗಳ ಚೆಕ್ ನೀಡಿ ನೆರವಾಗಿದ್ದಾರೆ.
ತಂದೆ-ತಾಯಿ ಸಂತಸ.
ಮಗಳ ಸಾಧನೆಗೆ ತಂದೆ ನರಸಿಂಹಮೂರ್ತಿ ಹಾಗೂ ತಾಯಿ ಪದ್ಮಾವತಿ ರವರು ಸಂತಸ ವ್ಯಕ್ತಪಡಿಸಿದ್ದು ನಿರೀಕ್ಷೆಯಂತೆ ಮಗಳು ಉತ್ತಮ ಅಂಕ ಪಡೆದಿರುವುದು ನಿಜಕ್ಕೂ ಸಂತೋಷವನ್ನುಂಟುಮಾಡಿದೆ ಮುಂದೆ ಮಗಳು ವೈದ್ಯಕೀಯ ಶಿಕ್ಷಣ ಪಡೆಯುವ ಆಸೆ ಇದೆ ಅದರಂತೆ ಅವಳು ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆ ಎನ್ನುವ ಆಸೆಯನ್ನ ವ್ಯಕ್ತಪಡಿಸಿದ್ದಾರೆ.