ಅನಾಮಧೇಯ ಕರೆಗೆ ಬೆಚ್ಚಿಬಿದ್ದ ತಿಪಟೂರು ಬಿ ಎಲ್ ಓ ಗಳು
ಇಂದು ತುಮಕೂರು ಜಿಲ್ಲೆಯ ತಿಪಟೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಎಲ್ಒ ಗಳಿಗೆ ಅನಾಮಧೇಯ ವ್ಯಕ್ತಿಯೊಬ್ಬ ಅವರ ಮೊಬೈಲ್ ಗಳಿಗೆ ಕರೆ ಮಾಡಿ ನಾವು ನಿಮಗೆ ಕೆಲ ದುಡ್ಡನ್ನು ಸಂದಾಯ ಮಾಡಬೇಕಾಗಿರುವುದರಿಂದ ದಯಮಾಡಿ ತಮ್ಮ ಮೊಬೈಲ್ ಗೆ ಬರುವ ಓಟಿಪಿ ಗಳನ್ನು ನೀಡಿ ಎಂದು ಒತ್ತಾಯಪೂರ್ವಕವಾಗಿ ಓಟಿಪಿ ಪಡೆಯಲು ಪ್ರಯತ್ನಿಸಿರುವ ಘಟನೆ ವರದಿಯಾಗಿದೆ. ತಿಪಟೂರಿನ ಶೇಕಡ 50ರಷ್ಟು ಬಿಎಲ್ಒ ಗಳಿಗೆ ಇಂದು ಕರೆ ಮಾಡಿರುವ ಈ ಅನಾಮಧೇಯ ವ್ಯಕ್ತಿ ಕೇವಲ ಮಹಿಳಾ ಬಿಎಲ್ಒ ಗಳನ್ನು ಮಾತ್ರ ಟಾರ್ಗೆಟ್ ಮಾಡಿರುವುದು ವಿಶೇಷವಾಗಿದೆ.
ತಿಪಟೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಬಿಎಲ್ ಓಗಳ ಇವನ ಟಾರ್ಗೆಟ್?
ಇಂದು ಈತ ಮಹಿಳಾ ಬಿಎಲ್ಒ ಗಳಿಗೆಕರೆ ಮಾಡುವ ಮೂಲಕ ಓಟಿಪಿ ಪಡೆಯಲು ಪ್ರಯತ್ನಿಸಿದ್ದಾನೆ. ಇನ್ನು ವಿಶೇಷವೇನೆಂದರೆ ಕೇವಲ ಮಹಿಳಾ ಬಿಎಲ್ಒ ಗಳಿಗೆ ಕರೆ ಮಾಡಿರುವ ಈತ ನಿಗೆ ಸರಕಾರಿ ಇಲಾಖೆಯ ಮಾಹಿತಿ ದಾದರೂ ಹೇಗೆ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಕೆಲ ಬಿ ಎಲ್ ಓ ಗಳು ಕಾರ್ಯನಿರ್ವಹಿಸುವಾಗ ಕೆಲ ವೈಯಕ್ತಿಕ ಮಾಹಿತಿಗಳನ್ನು ಹಾಗೂ ಅವರ ಖಾತೆಗೆ ಸಂಬಂಧಪಟ್ಟಂತೆ ಕೆಲವು ಕೆಲವು ಮಾಹಿತಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ನೀಡಿರುತ್ತಾರೆ.ಆದರೆ ಇಂತಹ ಮಾಹಿತಿಗಳು ಸೋರಿಕೆಯಾಗಿವೆ ಆಗಿರುವುದಾದರೂ ಹೇಗೆ ಎನ್ನುವ ಪ್ರಶ್ನೆ ನಿಗೂಢವಾಗಿದೆ. ಎಲ್ಲಾ ಬಿಎಲ್ ಓಗಳ ಕಾರ್ಡ್ ನಂಬರ್ , ರೆಸಿಪಿಎಂಟ್ ಐಡಿ, ಬ್ಯಾಂಕ್ ಅಕೌಂಟ್ ನಂಬರ್ ಸೇರಿದಂತೆ ಹಲವು ಮಾಹಿತಿಗಳು ಸೋರಿಕೆಯಾಗಿರುವ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ.ಹಾಗಾದರೆ ಇದಕ್ಕೆ ಸಂಬಂಧಪಟ್ಟಂತೆ ಇಲಾಖೆಯವರ ಬಳಿ ಇರುವ ಬಿಎಲ್ ಓಗಳ ರೆಸಿಪಿಎಂಟ್ ಐಡಿ ಸೋರಿಕೆಯಾಗಿ ಇರುವುದಾದರೂ ಹೇಗೆ ಹಾಗೂ ಕೇವಲ ಮಹಿಳಾ ಬಿಎಲ್ಒ ಗಳಿಗೆ ಇಂದು ಕರೆ ಹೋಗಿರುತ್ತದೆ.ಇಂದು ಸರಕಾರಿ ರಜೆ ಇದೆ ,ಬ್ಯಾಂಕುಗಳ ರಜೆ ಇದೆ, ಸಂಬಂಧಪಟ್ಟ ಇಲಾಖೆಗಳು ಕೂಡ ರಜೆ ಇದೆ.ಹಾಗಾದರೆ ಇಷ್ಟೆಲ್ಲಾ ಗೊತ್ತಿರುವ ಅನಾಮಧೇಯ ವ್ಯಕ್ತಿ ಕೇವಲ ಸರ್ಕಾರಿ ರಜೆ ದಿನ ಮಹಿಳಾ ಬಿಎಲ್ಒ ಗಳಿಗೆ ಕರೆ ಮಾಡಿ ಓಟಿಪಿ ಪಡೆಯಲು ಯತ್ನಿಸಿದ್ದಾನೆ ನಂತರ ಪುನಹ ಆ ನಂಬರ್ಗೆ ಕರೆಮಾಡಲು ವಿಜಯ ಭಾರತ ಯತ್ನಿಸಿದಾಗ ಮೊಬೈಲ್ ಸ್ವಿಚ್ ಆಫ್ ಮಾಡಿರುವುದಾಗಿ ತಿಳಿದುಬಂದಿದೆ.
ಇನ್ನು ವಿಜಯ ಭಾರತ ಬಳಗಕ್ಕೆ ಕರೆ ಮಾಡಿರುವ ಮಹಿಳಾ ಬಿಎಲ್ ಓ ಒಬ್ಬರು ಮಾಹಿತಿ ತಿಳಿಸಿದ್ದಾರೆ. ಇನ್ನೂ ಕೆಲ ಮಹಿಳಾ ಬಿ ಎಲ್ ಓ ಗಳು ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ನಾವು ಯಾವುದೇ ಬಿಎಲ್ ಓಗಳ ಅಕೌಂಟಿಗೆ ಹಣವನ್ನು ಹಾಕಲು ಯಾರನ್ನು ಕಳುಹಿಸಿಲ್ಲ ಎಂದು ತಿಳಿದುಬಂದಿದೆ.
ಈಚಿನ ದಿನಗಳಲ್ಲಿ ಕೆಲ ನಮ್ಮದೆಯ ವ್ಯಕ್ತಿಗಳುಓಟಿಪಿ ಪಡೆಯಲು ಪಡೆಯುವ ಮೂಲಕ ಹಣವನ್ನು ಲಪಟಾಯಿಸುವ ಬಗ್ಗೆ ಪ್ರತಿದಿನವೂ ಒಂದಲ್ಲ ಒಂದು ಕಡೆ ಸಾರ್ವಜನಿಕರಿಗೆ ತಿಳಿದಿರುವ ವಿಷಯ.
ಇಂತಹ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡ ಸಾರ್ವಜನಿಕರಿಗೆ ಪದೇಪದೇ ಅರಿವು ಮೂಡಿಸುವ ಮೂಲಕ ತಮ್ಮ ಮೊಬೈಲ್ ಓಟಿಪಿಗಳನ್ನು ಯಾರ ಬಳಿ ಹಂಚಿಕೊಳ್ಳ ಕೊಳ್ಳದಂತೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹಾಗಾದರೆ ಇಂದು ತಿಪಟೂರಿನ ಬಿಎಲ್ಒ ಗಳಿಗೆ ಮಾತ್ರ ಈ ಅನಾಮಧೇಯ ವ್ಯಕ್ತಿ ಕರೆ ಮಾಡಿದ್ದಾದರೂ ಹೇಗೆ. ಇಲಾಖೆಯ ಮಾಹಿತಿ ಸೋರಿಕೆಯಾಗಿರುವ ಬಗ್ಗೆ ನಮಗೆ ಅನುಮಾನ ಮೂಡುತ್ತಿದೆ. ಎಂದು ಹೆಸರನ್ನು ಹೇಳಲಿಚ್ಛಿಸದ ಮಹಿಳಾ ಬಿಎಲ್ಒ ಒಬ್ಬರು ಇಂದು ತಿಳಿಸಿದ್ದಾರೆ.