ಕೋವಿಡ್‌ ಪರಿಹಾರಕ್ಕೆ ಅರ್ಜಿ ಆಹ್ವಾನ; ಮೃತರ ಅವಲಂಬಿತರಿಗೆ ನೆರವು ನೀಡುವ ಯೋಜನೆ!

ಕೋವಿಡ್‌ ಪರಿಹಾರಕ್ಕೆ ಅರ್ಜಿ ಆಹ್ವಾನ; ಮೃತರ ಅವಲಂಬಿತರಿಗೆ ನೆರವು ನೀಡುವ ಯೋಜನೆ!

 

 

ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್‌ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ ಪರಿಹಾರ ನೀಡಲು ರಾಜ್ಯ ಸರಕಾರ ಆದೇಶಿಸಿದ್ದು, ಈ ಸಂಬಂಧ ಬಿಬಿಎಂಪಿಯು ಅರ್ಜಿ ಆಹ್ವಾನಿಸಿದೆ.

 

ಅರ್ಜಿದಾರರು ನಿಗದಿಪಡಿಸಿದ ನಮೂನೆ-1ರಲ್ಲಿ ಮೃತ ವ್ಯಕ್ತಿಯ ವಿವರ ಹಾಗೂ ಅಗತ್ಯ ದಾಖಲೆಗಳೊಂದಿಗೆ ಕಂದಾಯ ಅಧಿಕಾರಿಗಳ ಕಚೇರಿಗಳಲ್ಲಿಅರ್ಜಿಗಳನ್ನು ಸಲ್ಲಿಸಬೇಕಿದೆ.

 

ಬಿಪಿಎಲ್‌ ಕುಟುಂಬದ ಒಬ್ಬರು ವಾಸುದಾರರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಒಂದು ಲಕ್ಷ ರೂ. ಹಾಗೂ ಎಸ್‌ಡಿಆರ್‌ಎಫ್‌ನಿಂದ 50 ಸಾವಿರ ರೂ. ಸೇರಿ ಒಟ್ಟು 1.50 ಲಕ್ಷ ರೂ.

 

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್‌ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ 1.50 ಲಕ್ಷ ರೂ. ಹಾಗೂ ಇತರೆ ಕುಟುಂಬಗಳಿಗೆ 50 ಸಾವಿರ ಪರಿಹಾರ ನೀಡಲು ರಾಜ್ಯ ಸರಕಾರ ಆದೇಶಿಸಿದ್ದು, ಈ ಸಂಬಂಧ ಬಿಬಿಎಂಪಿಯು ಅರ್ಜಿ ಆಹ್ವಾನಿಸಿದೆ. ಪಾಲಿಕೆಯ ಎಲ್ಲ198 ವಾರ್ಡ್‌ಗಳಲ್ಲಿ ಕಂದಾಯ ಅಧಿಕಾರಿಗಳ ಕಚೇರಿಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

 

ಕೊರೊನಾ ಸೋಂಕಿನಿಂದ ಮೃತಪಟ್ಟ ಬಿಪಿಎಲ್‌ ಕುಟುಂಬದ ಒಬ್ಬರು ವಾಸುದಾರರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಒಂದು ಲಕ್ಷ ರೂ. ಹಾಗೂ ಎಸ್‌ಡಿಆರ್‌ಎಫ್‌ನಿಂದ 50 ಸಾವಿರ ರೂ. ಸೇರಿ ಒಟ್ಟು 1.50 ಲಕ್ಷ ರೂ. ಮತ್ತು ಇತರೆ ಕುಟುಂಬಗಳಿಗೆ 50 ಸಾವಿರ ರೂ.ಗಳನ್ನು ನೇರ ನಗದು ವರ್ಗಾವಣೆ ವ್ಯವಸ್ಥೆ ಮೂಲಕ ಪಾವತಿಸಲಾಗುತ್ತದೆ.

 

ಅರ್ಜಿದಾರರು ನಿಗದಿಪಡಿಸಿದ ನಮೂನೆ-1ರಲ್ಲಿ ಮೃತ ವ್ಯಕ್ತಿಯ ವಿವರ ಹಾಗೂ ಅಗತ್ಯ ದಾಖಲೆಗಳೊಂದಿಗೆ ಕಂದಾಯ ಅಧಿಕಾರಿಗಳ ಕಚೇರಿ (ಕಂದಾಯ ವಾರ್ಡ್‌ ಕಚೇರಿ)ಗಳಲ್ಲಿಅರ್ಜಿಗಳನ್ನು ಸಲ್ಲಿಸಬೇಕಿದೆ.

 

ಪಾವತಿ; ಕೇಂದ್ರದ ಪರಿಹಾರಕ್ಕೆ ಸುಪ್ರೀಂ ಸಮ್ಮತಿಸಲ್ಲಿಸಬೇಕಾದ ದಾಖಲೆಗಳು

 

ಮೃತಪಟ್ಟವರ ಕೋವಿಡ್‌ ಪಾಸಿಟಿವ್‌ ವರದಿ ಮತ್ತು ಬಿಯು ನಂಬರ್‌

 

ಮರಣ ಪ್ರಮಾಣ ಪತ್ರ ಅಥವಾ ಮರಣ ಕಾರಣ ಪ್ರಮಾಣ ಪತ್ರ(ಫಾರಂ-4/4ಎ)

 

ಮೃತ ವ್ಯಕ್ತಿಯ ಆಧಾರ್‌ ಪ್ರತಿ ಅಥವಾ ಇತರೆ ಗುರುತಿನ ದಾಖಲೆಗಳು

 

ಮೃತರ ಬಿಪಿಎಲ್‌ ಪಡಿತರ ಚೀಟಿ (ರಾಜ್ಯ ಸರಕಾರದ ಪರಿಹಾರ ಮೊತ್ತಕ್ಕಾಗಿ)

 

ಅರ್ಜಿದಾರರ ಆಧಾರ್‌ ಕಾರ್ಡ್‌ ಪ್ರತಿ

 

ಬ್ಯಾಂಕ್‌ ಪಾಸ್‌ ಬುಕ್‌ ಪ್ರತಿ

 

ಬಿಪಿಎಲ್‌ ಪಡಿತರ ಚೀಟಿ (ರಾಜ್ಯ ಸರ್ಕಾರದ ಪರಿಹಾರ ಮೊತ್ತಕ್ಕಾಗಿ).

 

ಅರ್ಜಿದಾರರ ಬ್ಯಾಂಕ್‌/ಅಂಚೆ ಖಾತೆ ಪುಸ್ತಕ ಪ್ರತಿ

 

ಅರ್ಜಿದಾರರ ಸ್ವಯಂ ಘೋಷಣಾ ಪತ್ರ(ಫಾರಂ-2)

 

ಮೃತ ವ್ಯಕ್ತಿಯ ಪತಿ/ಪತ್ನಿಯನ್ನು ಹೊರತುಪಡಿಸಿ ಕುಟುಂಬದ ಇತರೆ ಸದಸ್ಯರು ಅರ್ಜಿ ಸಲ್ಲಿಸಿದ್ದಲ್ಲಿ ಮಾತ್ರ ಕುಟುಂಬದ ಉಳಿದ ಸದಸ್ಯರಿಂದ ನಿರಾಕ್ಷೇಪಣಾ ಪತ್ರ(ಫಾರಂ-3) ಪಡೆದು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು

Leave a Reply

Your email address will not be published. Required fields are marked *

You cannot copy content of this page

error: Content is protected !!